ಬುಡಕಟ್ಟು ಜನಾಂಗದವರಲ್ಲಿ ಲಸಿಕೆ ಕುರಿತಾದ ಭಯ ಹೋಗಲಾಡಿಸಲು ‘ಕೊರೊನಾ ಮಾರಿ’ ಬೀದಿ ನಾಟಕ ಪ್ರದರ್ಶನ
ಕಲಾವಿದ ಬಸವರಾಜ್ ಅವರು ಜುಲೈ 5ನೇ ತಾರೀಕಿನಂದು ಮೊದಲ ಬಾರಿಗೆ ಬೀದಿ ನಾಟಕವನ್ನು ಪ್ರದರ್ಶಿಸಿದರು. ಚಾಮರಾಜ ನಗರದ ಬುಡಕಟ್ಟು ಜನಾಂಗದವರಿಗೆ ಲಸಿಕೆ ಪ್ರಾಮುಖ್ಯತೆ ಕುರಿತಾಗಿ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶಿಸಲಾಗಿದೆ.
ಚಾಮರಾಜನಗರ: ಜನರಲ್ಲಿ ಲಸಿಕೆ ಕುರಿತಾದ ಭಯವನ್ನು ಹೋಗಲಾಡಿಸಲು ಅದೆಷ್ಟೋ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರ ಕೂಡಾ ಜನರು ಲಸಿಕೆ ಪಡೆಯುವಂತೆ ಸೂಚನೆ ನೀಡುತ್ತಿದೆ. ಆದರೆ ಹಳ್ಳಿಗಳಲ್ಲಿರುವ ಬುಡಕಟ್ಟು ಜನಾಂಗದವರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆಯ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿಲು ಚಾಮರಾಜನಗರದ ಕಲಾವಿದರೊಬ್ಬರು ಕೊರೊನಾ ಮಾರಿ ಎಂಬ ಬೀದಿ ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಕಲಾವಿದ ಬಸವರಾಜ್ ಅವರು ಜುಲೈ 5ನೇ ತಾರೀಕಿನಂದು ಕರಲಕಟ್ಟೆ ಗ್ರಾಮದಲ್ಲಿ ಮೊದಲ ಬಾರಿಗೆ ಬೀದಿ ನಾಟಕವನ್ನು ಪ್ರದರ್ಶಿಸಿದರು. ಚಾಮರಾಜ ನಗರದ ಬುಡಕಟ್ಟು ಜನಾಂಗದವರಿಗೆ ಲಸಿಕೆ ಪ್ರಾಮುಖ್ಯತೆ ಕುರಿತಾಗಿ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶಿಸಲಾಗಿದೆ.
ನಾಟಕದಲ್ಲಿ ವೈರಸ್ ವ್ಯಕ್ತಿಯ ಸುತ್ತ ಸುತ್ತುತ್ತದೆ. ಅದು ವ್ಯಕ್ತಿಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ವನುಷ್ಯನು ದೇವರು ಅಥವಾ ದೆವ್ವದ ಪ್ರಭಾವಕ್ಕೆ ಒಳಗಾಗಿಲ್ಲ. ಆತ ವೈರಸ್ಗೆ ಒಳಗಾಗಿದ್ದಾನೆ. ಹೀಗಿರುವಾಗ ವೈದ್ಯರಿಂದ ಚಿಕಿತ್ಸೆ ಪಡೆಯಲೇ ಬೇಕು ಎಂದು ವೈದ್ಯರು ಹೇಳುತ್ತಾರೆ. ಹೀಗೆ ಕಥೆಯನ್ನಾಧರಿಸಿ ನಾಟಕ ಪ್ರದರ್ಶನ ನೀಡಲಾಗಿದೆ.
ಬುಡಕಟ್ಟು ಜನಾಗಂದವರು ದೇವರನ್ನು ನಂಬುತ್ತಾರೆ. ಯಾವುದೇ ಆರೋಗ್ಯದ ಅಪಾಯಕ್ಕೆ ದೇವರು ಚಿಕಿತ್ಸೆ ನೀಡಬಲ್ಲ ಎಂಬ ನಂಬಿಕೆ ಅವರದ್ದು. ಹೀಗಿರುವಾಗ ಬುಡಕಟ್ಟು ಜನಾಂಗದವರ ಮನವೊಲಿಸಲು ಜತೆಗೆ ಸಂದೇಶವನ್ನು ಸಾರಲು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು ಎಂದು ಬಸವರಾಜ್ ಹೇಳಿದ್ದಾರೆ.
ಸೊಲಿಗ ಬುಡಕಟ್ಟು ಭಾಷೆಯಲ್ಲಿದ್ದ ನಾಟಕದಲ್ಲಿ ಒಟ್ಟು 10 ಪಾತ್ರಗಳಿವೆ. ಹಾಡುಗಳನ್ನು ಸಹ ಹೊಂದಿವೆ. ಅವರಿಗೆ ಕೇವಲ ವ್ಯಾಕ್ಸಿನೇಶನ್ ಬಗ್ಗೆ ಭಯವಿಲ್ಲ. ಆರೋಗ್ಯ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದಾಗ ಆಶ್ಚರ್ಯಚಕಿತರಾಗಿ ಅವರನ್ನು ನೋಡುತ್ತಾರೆ. ಆರೋಗ್ಯ ವ್ಯವಸ್ಥೆಯಲ್ಲಿ ಅವರಿಗೆ ಹೆಚ್ಚಿನ ನಂಬಿಕೆ ಇಲ್ಲ ಎಂದು ಡಾ.ಶ್ರೀನಿವಾಸ್ ಹೇಳಿದ್ದಾರೆ.
ಇದನ್ನೂ ಓದಿ:
ಮದುವೆ ಸಮಾರಂಭಗಳಲ್ಲಿ 40 ಮಂದಿ ಪಾಲ್ಗೊಳ್ಳಲು ಕರ್ನಾಟಕ ಸರ್ಕಾರ ಅನುಮತಿ