ಚನ್ನಪಟ್ಟಣದಿಂದಲೇ ಬಿಜೆಪಿ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ: ಸಚಿವ ಸಿ ಪಿ ಯೋಗೇಶ್ವರ್ ದೃಢ ನುಡಿ

ಬೆಂಗಳೂರು: ಚನ್ನಪಟ್ಟಣ ನಾನು ಹುಟ್ಟಿದ ತಾಲೂಕು, ಅಲ್ಲಿಂದ ಐದು ಬಾರಿ ಗೆದ್ದಿದ್ದೇನೆ. ನಾನು ಮತ್ತೆ ಅದೇ ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಮಂಡ್ಯ ಸಂಸದೆ ಮತ್ತು ಕುಮಾರಸ್ವಾಮಿ ಫೈಟಿಂಗ್ ನಡೆಯುತ್ತಿದೆ. ನಾನು ಗಮನಿಸಿದ ಹಾಗೆ ಕೆಆರ್​ಎಸ್ ಡ್ಯಾಂನ ಇಪ್ಪತ್ತು ಮೂವತ್ತು ಕಿಮೀ ಸುತ್ತಲೂ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಡ್ಯಾಂಗೆ ಸಮಸ್ಯೆ ಆಗಬಹುದು ಅಂತ ಸಂಸದರಿಗೆ ಆತಂಕವಿರಬಹುದು. ಕುಮಾರಸ್ವಾಮಿ ಈಗಾಗಲೇ ಅವರ ವ್ಯಕ್ತಿತ್ವ […]

ಚನ್ನಪಟ್ಟಣದಿಂದಲೇ ಬಿಜೆಪಿ ಪಕ್ಷದಿಂದಲೇ  ಸ್ಪರ್ಧೆ ಮಾಡುತ್ತೇನೆ: ಸಚಿವ ಸಿ ಪಿ ಯೋಗೇಶ್ವರ್ ದೃಢ ನುಡಿ
ಸಚಿವ ಸಿ.ಪಿ.ಯೋಗೇಶ್ವರ್
Follow us
TV9 Web
| Updated By: guruganesh bhat

Updated on:Jul 08, 2021 | 6:12 PM

ಬೆಂಗಳೂರು: ಚನ್ನಪಟ್ಟಣ ನಾನು ಹುಟ್ಟಿದ ತಾಲೂಕು, ಅಲ್ಲಿಂದ ಐದು ಬಾರಿ ಗೆದ್ದಿದ್ದೇನೆ. ನಾನು ಮತ್ತೆ ಅದೇ ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ಮಂಡ್ಯ ಸಂಸದೆ ಮತ್ತು ಕುಮಾರಸ್ವಾಮಿ ಫೈಟಿಂಗ್ ನಡೆಯುತ್ತಿದೆ. ನಾನು ಗಮನಿಸಿದ ಹಾಗೆ ಕೆಆರ್​ಎಸ್ ಡ್ಯಾಂನ ಇಪ್ಪತ್ತು ಮೂವತ್ತು ಕಿಮೀ ಸುತ್ತಲೂ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಡ್ಯಾಂಗೆ ಸಮಸ್ಯೆ ಆಗಬಹುದು ಅಂತ ಸಂಸದರಿಗೆ ಆತಂಕವಿರಬಹುದು. ಕುಮಾರಸ್ವಾಮಿ ಈಗಾಗಲೇ ಅವರ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ನಾವೇನು ಕುಮಾರ ಸ್ವಾಮಿ ಯನ್ನು ಹೈಲೈಟ್ ಮಾಡುವ ಅವಶ್ಯಕತೆ ಇಲ್ಲ. ಅವರ ಇತ್ತೀಚಿನ ಹೇಳಿಕೆ ತೂಕ ಕಳೆದುಕೊಂಡಿದೆ. ನಾನು ನನ್ನ ಜಿಲ್ಲೆಯ ಸಮಸ್ಯೆ ಬಗ್ಗೆ ಹೇಳಿಕೊಂಡರೆ ಅದು ನನಗೆ ರಿವರ್ಸ್ ಆಗ್ತಿದೆ. ಕುಮಾರಸ್ವಾಮಿ ಅವರು ದಿನೇದಿನೇ ರಾಜಕೀಯ ನೆಲೆ ಕಳೆದುಕೊಳ್ಳುತ್ತಿದ್ದಾರೆ.ಆ ಆತಂಕದಿಂದ ವಿಚಲಿತರಾಗಿ ಮಾತಾಡ್ತಿದ್ದಾರೆ. ಅವಾಚ್ಯವಾಗಿ ಮಾತಾಡುವುದು ಕುಮಾರಸ್ವಾಮಿ ಅವಿರಿಗ ಶೋಭೆ ತರುವಂತದಲ್ಲ. ಅವರು ರಾಜಕೀಯ ದಿನೇ ದಿನೇ ವೀಕ್ ಆಗ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಟೀಕಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಬೆಳಗ್ಗೆ ಹೋಗ್ತಾರೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾತ್ರಿ ಹೋಗ್ತಾರೆ. ಸಿಪಿವೈ ಮಾತನಾಡಿದ್ರೆ ಸಿಎಂ ಹತ್ರ ಇವರಿಬ್ಬರೂ ಹೋಗ್ತಾರೆ. ರೇಣುಕಾಚಾರ್ಯ ಸಿಎಂ ಕಾರ್ಯದರ್ಶಿಯಾಗಲು ಸಿ.ಪಿ.ಯೋಗೇಶ್ವರ್ ಕಾರಣ ಎಂಬುದನ್ನ ಮರೆಯಬಾರದು. 7 ಮಿನಿಸ್ಟರ್ಸ್​ ಕ್ವಾರ್ಟರ್ಸ್​ನಲ್ಲಿ ಎಂಪಿಆರ್​ಗೆ ಸ್ಥಾನ ಸಿಕ್ಕಿದ್ದೇಗೆ? ಅದಕ್ಕೂ ಯೋಗೇಶ್ವರ್ ಕಾರಣ ಎಂಬುದನ್ನ ಮರೆಯಬಾರದು. ಎಂ.ಪಿ.ರೇಣುಕಾಚಾರ್ಯಗೆ ಸಾವಿರ ಕೋಟಿ ಅನುದಾನ ಸಿಕ್ಕಿದೆ. ಅದಕ್ಕೆ ಸಿ.ಪಿ.ಯೋಗೇಶ್ವರ್ ಶ್ರಮ ಕಾರಣ ಎಂದು ಗೊತ್ತಿರಲಿ ಎಂದು ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಹೇಳಿದ್ದಾರೆ.

ಇದನ್ನೂ ಓದಿ: 

ನಾನೇನು ಅಂಬರೀಶ್‌ಗೆ ಗುಲಾಮ ಆಗಿದ್ದೆನಾ? ಜನಸಾಮಾನ್ಯರು ಬಂದರೂ ನಾನು ಕೈಕಟ್ಟಿ ನಿಲ್ಲುತ್ತೇನೆ: ಕುಮಾರಸ್ವಾಮಿ ತಿರುಗೇಟು

‘ಸ್ಯಾಂಡಲ್​ವುಡ್​ ಸ್ಮಗ್ಲರ್’​ ಟ್ಯಾಗ್​ ಕೊಟ್ಟು ನನ್ನ ಮತ್ತು ಆದಿಚುಂಚನಗಿರಿ ಮಠಾಧೀಶರ ದೂರವಾಣಿ ಕದ್ದಾಲಿಸಲಾಗಿದೆ: ಸಂಸದೆ ಸುಮಲತಾ ಗಂಭೀರ ಆರೋಪ

(Tourism minister CP Yogeshwar says will contest from Channapatna assembly and BJP in next election)

Published On - 4:16 pm, Thu, 8 July 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್