ಸ್ಟಾನ್ ಸ್ವಾಮಿಯ ಹತ್ಯೆ ಮಾಡಲಾಗಿದೆ; ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ ಶಿವಸೇನಾ ಸಂಸದ ಸಂಜಯ್ ರಾವುತ್

Shiv Sena MP Sanjay Raut: ಇಂದಿರಾ ಗಾಂಧಿ ಜಾರ್ಜ್ ಫರ್ನಾಂಡಿಸ್‌ಗೆ ಹೆದರುತ್ತಿದ್ದರು. ಜಾರ್ಜ್ ಆಗ ಯುವ ನಾಯಕರಾಗಿದ್ದರು ಮತ್ತು ಫಾದರ್ ಸ್ಟಾನ್ ಸ್ವಾಮಿಯಂತೆ ವಯಸ್ಸಾಗಿರಲಿಲ್ಲ. ಆದರೆ ಇಂದಿನ ಸರ್ಕಾರವು 84-85 ವರ್ಷ ವಯಸ್ಸಿನ ಸ್ಟಾನ್ ಸ್ವಾಮಿ ಮತ್ತು ವರವರ ರಾವ್ ಅವರಿಗೆ ಹೆದರುತ್ತಿದೆ. ಜೈಲಿನಲ್ಲಿ ಸ್ಟಾನ್ ಸ್ವಾಮಿಯವರ ಹತ್ಯೆಯಾಗಿದೆ ಎಂದು ರಾವುತ್ ಹೇಳಿದ್ದಾರೆ.

ಸ್ಟಾನ್ ಸ್ವಾಮಿಯ ಹತ್ಯೆ ಮಾಡಲಾಗಿದೆ; ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ ಶಿವಸೇನಾ ಸಂಸದ ಸಂಜಯ್ ರಾವುತ್
ಸಂಜಯ್ ರಾವುತ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 11, 2021 | 8:10 PM

ಮುಂಬೈ: ಫಾದರ್ ಸ್ಟಾನ್ ಸ್ವಾಮಿಯವರ ಸಾವಿನ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಶಿವಸೇನಾ ಸಂಸದ ಸಂಜಯ್ ರಾವುತ್, ಬುಡಕಟ್ಟು ಜನರ ಹಕ್ಕುಗಳ ಕಾರ್ಯಕರ್ತರನ್ನು ಜೈಲಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಿದರು. 84 ವರ್ಷದ ವ್ಯಕ್ತಿಯೊಬ್ಬರು ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸಬಲ್ಲರು ಎಂದಾದರೆ ದೇಶದ ಅಡಿಪಾಯ ಎಷ್ಟು ದುರ್ಬಲವಾಗಿದೆಯೆ ಎಂದು ಪ್ರಶ್ನಿಸಿದ ರಾವುತ್ ಮೋದಿ ಸರ್ಕಾರವನ್ನು ಹಿಟ್ಲರ್ ಮತ್ತು ಮುಸ್ಸೊಲಿನಿಗೆ ಹೋಲಿಸಿದರು. ಅಕ್ಟೋಬರ್‌ನಲ್ಲಿ ಏಳ್ಗರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ್ದ ಸ್ವಾಮಿ ಜುಲೈ 5 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನ್ಯಾಯಾಂಗ ಬಂಧನದಲ್ಲಿ ನಿಧನರಾದರು.

ಜಾರ್ಜ್‌ ಫರ್ನಾಂಡಿಸ್ ಸರ್ಕಾರವನ್ನು ಉರುಳಿಸಲು ಸಂಚು ಹೂಡಿದ್ದಾರೆ ಎಂದು ಆರೋಪಿಸಿದ್ದ ಇಂದಿರಾ ಗಾಂಧಿಯವರ ಆಡಳಿತದಂತಿದೆ ಈಗಿನ ಸರ್ಕಾರ ಎಂದು ರಾವುತ್ ಸಾಮ್ನಾದಲ್ಲಿ ಬರೆದ ಅಂಕಣದಲ್ಲಿ ಟೀಕಿಸಿದ್ದಾರೆ.

ಇಂದಿರಾ ಗಾಂಧಿ ಜಾರ್ಜ್ ಫರ್ನಾಂಡಿಸ್‌ಗೆ ಹೆದರುತ್ತಿದ್ದರು. ಜಾರ್ಜ್ ಆಗ ಯುವ ನಾಯಕರಾಗಿದ್ದರು ಮತ್ತು ಫಾದರ್ ಸ್ಟಾನ್ ಸ್ವಾಮಿಯಂತೆ ವಯಸ್ಸಾಗಿರಲಿಲ್ಲ. ಆದರೆ ಇಂದಿನ ಸರ್ಕಾರವು 84-85 ವರ್ಷ ವಯಸ್ಸಿನ ಸ್ಟಾನ್ ಸ್ವಾಮಿ ಮತ್ತು ವರವರ ರಾವ್ ಅವರಿಗೆ ಹೆದರುತ್ತಿದೆ. ಜೈಲಿನಲ್ಲಿ ಸ್ಟಾನ್ ಸ್ವಾಮಿಯವರ ಹತ್ಯೆಯಾಗಿದೆ ಎಂದು ರಾವುತ್ ಹೇಳಿದ್ದಾರೆ.

84 ವರ್ಷದ ಮನುಷ್ಯನಿಗೆ ಹೆದರುತ್ತಿರುವ ಸರ್ಕಾರವು ಸರ್ವಾಧಿಕಾರ ನಿಲುವು ಹೊಂದಿದೆ. ಆದರೆ ಹಿಟ್ಲರ್ ಮತ್ತು ಮುಸ್ಸೊಲಿನಿಯಂತೆ ದುರ್ಬಲ ಹೃದಯಿಯಾಗಿದೆ ಎಂದು ಹೇಳಿದರು. ಸರ್ಕಾರದ ವಿರೋಧಕ್ಕೂ ದೇಶಕ್ಕೆ ವಿರೋಧಕ್ಕೂ ವ್ಯತ್ಯಾಸವಿದೆ. ಸರ್ಕಾರವನ್ನು ವಿರೋಧಿಸುವುದು ದೇಶದ ವಿರುದ್ಧದ ಪಿತೂರಿ ಎಂದು ಯಾರಾದರೂ ಭಾವಿಸಿದರೆ, ಅವರ ಮನಸ್ಸಿನಲ್ಲಿ ಸರ್ವಾಧಿಕಾರದ ಬೀಜಗಳನ್ನು ಬಿತ್ತಲಾಗುತ್ತದೆ ”ಎಂದು ರಾವುತ್ ಹೇಳಿದ್ದಾರೆ.

ಸ್ಟಾನ್ ಸ್ವಾಮಿ ಬಗ್ಗೆ

ಭೀಮಾ ಕೊರೆಗಾಂವ್-ಏಳ್ಗರ್ ಪರಿಷತ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (National Investigation Agency – NIA) ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕಾಯ್ದೆಯ ಅನ್ವಯ ಬಂಧಿಸಿದ್ದ ಕೊನೆಯ ವ್ಯಕ್ತಿ ಸ್ಟಾನ್ ಸ್ವಾಮಿ. ಅಕ್ಟೋಬರ್ 8, 2020ರಂದು ಸ್ಟಾನ್ ಸ್ವಾಮಿ ಅವರನ್ನು ಬಂಧಿಸಲಾಗಿತ್ತು.

ಸ್ವಾಮಿ ಓರ್ವ ಪಾದ್ರಿಯಾಗಿದ್ದರು. ಅವರಿಗೆ ಯಾವುದೇ ಕುಟುಂಬವಿಲ್ಲ. ಅವರ ನಂಬಿಕೆಯ ಪಂಥವಾದ ಜೆಸುಯಿಸ್ಟ್​ಗಳು ಮಾತ್ರವೇ ಅವರ ಕುಟುಂಬ ಎಂದು ವಕೀಲ ದೇಸಾಯಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಶರೀರ ಹಸ್ತಾಂತರಿಸುವ ಮೊದಲು ಮರಣೋತ್ತರ ಪರೀಕ್ಷೆ ನಡೆಸುವಂತೆ ಮತ್ತು ಅಟಾಪ್ಸಿ ವರದಿಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿತು.

ಆದಿವಾಸಿಗಳ ಸ್ವಾವಲಂಬನೆಗೆ ಶ್ರಮಿಸುತ್ತಿದ್ದ ಬಗೈಚಾ ಸಂಸ್ಥೆಯನ್ನು ಫಾದರ್ ಸ್ಟಾನ್ ಸ್ಥಾಪಿಸಿದ್ದರು. ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಮಾವೋವಾದಿಗಳು ಎಂಬ ಆರೋಪ ಹೊರಿಸಿ ಬಂಧಿಸುವುದನ್ನು ಈ ಸಂಸ್ಥೆ ವಿರೋಧಿಸಿತ್ತು. ಬಗೈಚಾ ಸಂಸ್ಥೆಯು ಮಾವೋವಾದಿಗಳ ಅಂಗಸಂಸ್ಥೆ ಎನಿಸಿದ ವಿಸ್ತಾಪನ್ ವಿರೋಧಿ ಜನ್ ವಿಕಾಸ್ ಆಂದೋಲನ್ ಜೊತೆಗೆ ನಂಟು ಹೊಂದಿತ್ತು ಎಂದು ಎನ್​ಐಎ ಆರೋಪಿಸಿತ್ತು.

ಇದನ್ನೂ ಓದಿ:  ಜಾಮೀನು ಅರ್ಜಿ ವಿಚಾರಣೆಯ ದಿನವೇ ಭೀಮಾ ಕೊರೆಗಾಂವ್ ಗಲಭೆ ಆರೋಪಿ ಫಾದರ್ ಸ್ಟಾನ್ ಸ್ವಾಮಿ ನಿಧನ

(Father Stan Swamy was killed in jail Shiv Sena MP Sanjay Raut attacks Narendra Modi government)