ಸ್ವಾತಂತ್ರ್ಯ ದಿನ ಹತ್ತಿರ ಬರ್ತಿದ್ದಂತೆ ಬಾಲ ಬಿಚ್ಚಿದ ಉಗ್ರರು; ಯುಪಿ ಎಟಿಎಸ್ ಭರ್ಜರಿ ಬೇಟೆ ಇಬ್ಬರು ಅಲ್ ಖೈದಾ ಉಗ್ರರ ಅರೆಸ್ಟ್

ಗಡಿಯಲ್ಲಿ ಅಡಗಿ ಕೂತು ಕಿರಿಕ್ ಮಾಡ್ತಿದ್ದ ಉಗ್ರರು ದೇಶದ ಪ್ರಮುಖ ರಾಜ್ಯಗಳಲ್ಲೂ ವಿಧ್ವಂಸಕ ಕೃತ್ಯಗಳಿಗೆ ಹೊಂಚು ಹಾಕಿದ್ದರು. ಇನ್ನೇನು ತಮ್ಮ ದುಷ್ಕೃತ್ಯ ಜಾರಿ ಮಾಡ್ಬೇಕು, ಅರಾಜಕತೆ ಸೃಷ್ಟಿಸಬೇಕು ಅಂತಿರುವಾಗಲೇ ಎಟಿಎಸ್ ಟೀಂ ಅವ್ರನ್ನು ಹೆಡೆಮುರಿಕಟ್ಟಿದೆ. ಕೆಜಿಗಟ್ಟಲೆ ಸ್ಫೋಟಕ ಇಟ್ಟುಕೊಂಡು ರೆಡಿಯಾಗ್ತಿದ್ದ ಇಬ್ಬರು ಉಗ್ರರು ಅಂದರ್ ಆಗಿದ್ದಾರೆ.

ಸ್ವಾತಂತ್ರ್ಯ ದಿನ ಹತ್ತಿರ ಬರ್ತಿದ್ದಂತೆ ಬಾಲ ಬಿಚ್ಚಿದ ಉಗ್ರರು; ಯುಪಿ ಎಟಿಎಸ್ ಭರ್ಜರಿ ಬೇಟೆ ಇಬ್ಬರು ಅಲ್ ಖೈದಾ ಉಗ್ರರ ಅರೆಸ್ಟ್
ಅಲ್ ಖೈದಾ ಉಗ್ರರು
Follow us
| Updated By: ಆಯೇಷಾ ಬಾನು

Updated on: Jul 12, 2021 | 7:18 AM

ದೆಹಲಿ: ಇಷ್ಟು ದಿನ ಕಾಶ್ಮೀರದ ಗಡಿಪ್ರದೇಶಗಳಲ್ಲಿ ಸೇನೆ ಹಾಗೂ ನಾಗರಿಕರನ್ನು ಗುರಿ ಮಾಡ್ತಿದ್ದ ಉಗ್ರರು ದೇಶದ ಪ್ರಮುಖ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿರೋದು ಬಯಲಾಗಿದೆ. ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳ ನಡೆಸಿದ ರೋಚಕ ಕಾರ್ಯಾಚರಣೆಯಲ್ಲಿ ಭಾರಿ ಭಯೋತ್ಪಾದಕ ದಾಳಿ ಕುತಂತ್ರ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ನಡೆಯಬಹುದಾಗಿದ್ದ ಭಾರಿ ಭಯೋತ್ಪಾದಕ ದಾಳಿ ತಪ್ಪಿದೆ. ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಭಾರತದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಇಬ್ಬರನ್ನು ಉತ್ತರ ಪ್ರದೇಶ ಎಟಿಎಸ್ ಬಂಧಿಸಿದೆ.

ಮಾನವ ಬಾಂಬರ್ ತರಬೇತಿ, ಕೆಜಿಗಟ್ಟಲೆ ಸ್ಫೋಟಕ ಪತ್ತೆ ಉತ್ತರ ಪ್ರದೇಶದ ಲಖನೌ ಬಳಿಯ ಕಾಕೋರಿಯ ಪ್ರದೇಶದ ಫರೀಡಿಪುರದಲ್ಲಿದಲ್ಕಿ ಅವಿತಿದ್ದ ಉಗ್ರರನ್ನು ಸೆರೆಹಿಡಿಯಲಾಗಿದೆ. ಶಾಹಿದ್‌‌ ಎಂಬುವವನಿಗೆ ಸೇರಿದ ಮನೆಯಿಂದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎಟಿಎಸ್ ಪೊಲೀಸರು ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮನೆ ಸುತ್ತ ಮುತ್ತ ಕಾರ್ಯಚರಣೆ ನಡೆಸಿದ ಪೊಲೀಸರು ಎರಡು ಪ್ರೆಶರ್-ಕುಕ್ಕರ್ ಬಾಂಬ್‌ಗಳು, 6 ರಿಂದ 7 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಇಬ್ಬರು ಉಗ್ರರ ಬಂಧನದೊಂದಿಗೆ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಅದೇನಂದ್ರೆ, ಬಂಧಿತ ಉಗ್ರರು ಮಾನವ ಬಾಂಬ್ ತರಬೇತಿ ನೀಡ್ತಿದ್ದರಂತೆ. ಯುವಕರನ್ನು ಸೇರಿಸಿಕೊಂಡು ಹಣದ ಆಮಿಷವೊಡ್ಡಿ ಮಾನವ ಬಾಂಬರ್ ಟ್ರೈನಿಂಗ್ ಕೊಡಲಾಗ್ತಿತ್ತು ಅನ್ನೋ ಮಾಹಿತಿ ಬಯಲಾಗಿದೆ.

ಬಿಜೆಪಿ ಹಿರಿಯ ನಾಯಕರೇ ಉಗ್ರರ ಮೇನ್ ಟಾರ್ಗೆಟ್ ಮಾನವ ಬಾಂಬ್ ಮೂಲಕ ಭಾರತದಲ್ಲಿ ಭಾರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು ರಾಜಕೀಯ ನಾಯಕರನ್ನೂ ಟಾರ್ಗೆಟ್ ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರು ಭಯೋತ್ಪಾದಕರು ಲಖನೌದಲ್ಲಿ ಬಿಜೆಪಿ ಸಂಸದ ಮತ್ತು ಕೆಲವು ಹಿರಿಯ ಬಿಜೆಪಿ ನಾಯಕರನ್ನು ಗುರಿಯಾಗಿಸಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದ್ರೆ ಮುಂದೆ ಸಂಭವಿಸಬಹುದಾದ ಭಾರಿ ಭಯೋತ್ಪಾದಕ ಕೃತ್ಯವನ್ನು ಉತ್ತರ ಪ್ರದೇಶ ಎಟಿಎಸ್ ಪಡೆ ವಿಫಲಗೊಳಿಸಿದೆ. ಬಂಧಿತ ಉಗ್ರರ ವಿಚಾರಣೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳೊ ಸಾಧ್ಯತೆ ಇದೆ.

(uttar pradesh ats arrests Two al qaeda terrorist From lucknow)

ಇದನ್ನೂ ಓದಿ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಜಮ್ಮು ಕಾಶ್ಮೀರದ 11 ಸರ್ಕಾರಿ ನೌಕರರು ವಜಾ

ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ