Fire Accident: ದೆಹಲಿಯ ಪೀಠೋಪಕರಣ ಗೋದಾಮಿನಲ್ಲಿ ಅಗ್ನಿ ದುರಂತ

Delhi Fire: ಇಲ್ಲಿನ ಪೀಠೋಪಕರಣ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

Fire Accident: ದೆಹಲಿಯ ಪೀಠೋಪಕರಣ ಗೋದಾಮಿನಲ್ಲಿ ಅಗ್ನಿ ದುರಂತ
ಅಗ್ನಿಅವಗಢ
Image Credit source: ANI
Edited By:

Updated on: May 22, 2022 | 12:49 PM

ನವದೆಹಲಿ: ಇಲ್ಲಿನ ಪೀಠೋಪಕರಣ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಲ್ಸ್ವಾ ಡೇರಿಯ ಭಜರಂಗ್ ಚೌಕ್​ ಬಳಿ ಇರುವ ಗೋದಾಮಿನಲ್ಲಿ ಬೆಂಕಿ ತನ್ನ ಕೆನ್ನಾಲಿಗೆ ಚಾಚಿತ್ತು. ಸ್ಥಳಕ್ಕೆ 11 ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಿವೆ.

ಬೆಳಗ್ಗೆ 9.12ರ ಸಮಯದಲ್ಲಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಲಾಗಿತ್ತು, ಬೆಳಗ್ಗೆ 11.20ರ ಸುಮಾರಿಗೆ ಬೆಂಕಿ ನಂದಿಸಲಾಗಿದೆ. ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಪ್ರತ್ಯೇಕ ಘಟನೆ: ಒಂದು ದಿನದ ಹಿಂದೆ ತಡರಾತ್ರಿ 2.26ರ ಸುಮಾರಿಗೆ ದ್ವಾರಕದ ಪೋಚಂಪುರದ ಡಿಡಿಎ ಫ್ಲಾಟ್​ನಲ್ಲಿ ಗೋಡೆ ಕುಸಿದು ಒಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿತ್ತು.

ತಕ್ಷಣಕ್ಕೆ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು, ಮನೆಯ ಪಕ್ಕದಲ್ಲಿ ಬೇರಒಂದು ಮನೆಯನ್ನು ನಿರ್ಮಿಸಲು ಅಡಿಪಾಯ ನಿರ್ಮಿಸುತ್ತಿರುವ ಈ ಮನೆಯ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ. ಗಾಯಗೊಂಡವರನ್ನು ತಕ್ಷಣವೇ ಹರಿ ನಗರದಲ್ಲಿರುವ ಡಿಡಿಯು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದೇಶದ ಇತರೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Sun, 22 May 22