ಪಟನಾ-ದೆಹಲಿ ಸ್ಪೇಸ್​​ಜೆಟ್​​ನಲ್ಲಿ ಬೆಂಕಿ, ಟೇಕ್​​ಆಫ್ ಆದ ತಕ್ಷಣವೇ ತುರ್ತು ಲ್ಯಾಂಡಿಂಗ್

| Updated By: ರಶ್ಮಿ ಕಲ್ಲಕಟ್ಟ

Updated on: Jun 19, 2022 | 1:56 PM

ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. 180 ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದಲ್ಲಿದ್ದರು. ಯಾವುದೇ ಗಾಯ, ಹಾನಿ ಬಗ್ಗೆ ವರದಿಯಾಗಿಲ್ಲ.

ಪಟನಾ-ದೆಹಲಿ ಸ್ಪೇಸ್​​ಜೆಟ್​​ನಲ್ಲಿ ಬೆಂಕಿ, ಟೇಕ್​​ಆಫ್ ಆದ ತಕ್ಷಣವೇ ತುರ್ತು ಲ್ಯಾಂಡಿಂಗ್
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾನುವಾರ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಪಾಟ್ನಾ-ದೆಹಲಿ ಸ್ಪೈಸ್ ಜೆಟ್ (Patna-Delhi SpiceJet) ವಿಮಾನ ಟೇಕ್ ಆಫ್ ಆದ ತಕ್ಷಣ ಲ್ಯಾಂಡ್ (emergency landing) ಮಾಡಲಾಗಿದೆ. ಲ್ಯಾಂಡಿಂಗ್ ಸುರಕ್ಷಿತವವಾಗಿದೆ. ವರದಿಗಳ ಪ್ರಕಾರ, ವಿಮಾನವು ಪಟನಾದಿಂದ (Patna) ಟೇಕ್ ಆಫ್ ಆದ ಕೂಡಲೇ ವಿಮಾನದ ಎಂಜಿನ್‌ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. 180 ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದಲ್ಲಿದ್ದರು. ಯಾವುದೇ ಗಾಯ, ಹಾನಿ ಬಗ್ಗೆ ವರದಿಯಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸೆ ಪ್ರಿಯಾಂಕಾ ಚತುರ್ವೇದಿ, ಇದು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಎಂದಿದ್ದಾರೆ. ಇದನ್ನು ಸಚಿವರೊಂದಿಗೆ, ವಿಮಾನಯಾನ ಕಾರ್ಯದರ್ಶಿಯೊಂದಿಗೆ ಪದೇ ಪದೇ ಪ್ರಸ್ತಾಪಿಸಲಾಗಿದೆ. ಅವರು ಯಾವಾಗ ಇದರ ಬಗ್ಗೆ ಗಮನಹರಿಸುತ್ತಾರೆ, ಸಂಭವಿಸುವ ದೊಡ್ಡ ಅನಾಹುತವನ್ನು ತಪ್ಪಿಸುತ್ತಾರೆ ಎಂದು ತಿಳಿದಿಲ್ಲ ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಸ್ಪೇಸ್ ಜೆಟ್ ಭದ್ರತೆಗೆ ಸಂಬಂಧಿಸಿದ ಅನೇಕ ಘಟನೆಗಳು ನಡೆದಿವೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಕಳೆದ ತಿಂಗಳು ತನ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಪೈಲಟ್‌ಗಳಿಗೆ ದೋಷಪೂರಿತ ಸಿಮ್ಯುಲೇಟರ್‌ನಲ್ಲಿ ತರಬೇತಿ ನೀಡಿದ್ದಕ್ಕಾಗಿ ಸ್ಪೈಸ್‌ಜೆಟ್‌ಗೆ ₹10 ಲಕ್ಷ ದಂಡವನ್ನು ವಿಧಿಸಿತ್ತು.
ಏಪ್ರಿಲ್‌ನಲ್ಲಿ ಡಿಜಿಸಿಎ 90 ಸ್ಪೈಸ್‌ಜೆಟ್ ಪೈಲಟ್‌ಗಳು ಸರಿಯಾಗಿ ತರಬೇತಿ ಪಡೆದಿಲ್ಲ ಎಂದು ಕಂಡುಹಿಡಿದ ನಂತರ ಮ್ಯಾಕ್ಸ್ ವಿಮಾನವನ್ನು ನಿರ್ವಹಿಸುವುದನ್ನು ನಿರ್ಬಂಧಿಸಿತ್ತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 1:35 pm, Sun, 19 June 22