ಸಿಧು ತಮ್ಮ ಮಕ್ಕಳನ್ನು ಗಡಿ ಕಾಯಲು ಕಳಿಸಿ, ಬಳಿಕ ಇಮ್ರಾನ್​​ರನ್ನು ಅಣ್ಣ ಎನ್ನಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್​

| Updated By: Lakshmi Hegde

Updated on: Nov 21, 2021 | 10:54 AM

ನಮ್ಮ ದೇಶದ ಪ್ರಧಾನಿ, ಪಂಜಾಬ್​ ಹಿಂದಿನ ಮುಖ್ಯಮಂತ್ರಿ ಕ್ಯಾ.ಅಮರಿಂದರ್​ ಸಿಂಗ್​, ಈಗಿನ ಮುಖ್ಯಮಂತ್ರಿ ಚರಣಜಿತ್​ ಛನ್ನಿ ವಿರುದ್ಧ ಮಾತನಾಡುವ ಸಿಧು, ಪಾಕಿಸ್ತಾನದಲ್ಲಿ ಪ್ರಧಾನಿಯನ್ನು ಅಣ್ಣ ಎನ್ನುತ್ತಾರೆ ಎಂದರೆ ಏನರ್ಥ ಎಂದೂ ಗೌತಮ್ ಗಂಭೀರ್​ ಪ್ರಶ್ನಿಸಿದ್ದಾರೆ.

ಸಿಧು ತಮ್ಮ ಮಕ್ಕಳನ್ನು ಗಡಿ ಕಾಯಲು ಕಳಿಸಿ, ಬಳಿಕ ಇಮ್ರಾನ್​​ರನ್ನು ಅಣ್ಣ ಎನ್ನಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್​
ಗೌತಮ್​ ಗಂಭೀರ್​
Follow us on

ದೆಹಲಿ: ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್​ ನನ್ನ ಅಣ್ಣ ಎಂದು ಹೇಳಿದ್ದ ನವಜೋತ್​ ಸಿಂಗ್​ ಸಿಧು ಅವರ ವಿರುದ್ಧ ಬಿಜೆಪಿ ಸಂಸದ ಗೌತಮ್​ ಗಂಭೀರ್​ ಕಿಡಿಕಾರಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ನಿನ್ನೆ ಕರ್ತಾರ್​ಪುರ ಸಾಹೀಬ್​ಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿ, ಕ್ರಿಕೆಟ್ ಆಟ ಆಡುತ್ತಿದ್ದ ಕಾಲದಿಂದಲೂ ಇಮ್ರಾನ್ ಖಾನ್​ ನನ್ನ ಉತ್ತಮ ಸ್ನೇಹಿತ ಅಷ್ಟೇಅಲ್ಲ, ನನ್ನ ಅಣ್ಣನಂತೆ ಇದ್ದರು ಎಂದು ಹೊಗಳಿದ್ದರು. ಆದರೆ ಸಿಧು ಈ ಮಾತು ಭಾರತೀಯರಿಗೆ ಇಷ್ಟವಾಗಿರಲಿಲ್ಲ. ಹಲವರು ಸೋಷಿಯಲ್​ ಮೀಡಿಯಾ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು.  

ಹಾಗೇ ಮಾಜಿ ಕ್ರಿಕೆಟರ್​, ಬಿಜೆಪಿ ಸಂಸದ ಗೌತಮ್​ ಗಂಭೀರ್​ ಕೂಡ ತಿರುಗೇಟು ನೀಡಿದ್ದಾರೆ. ನವಜೋತ್​ ಸಿಂಗ್ ಸಿಧು ಮೊದಲು ಅವರ ಮಕ್ಕಳನ್ನು ಗಡಿ ಕಾಯಲು ಕಳಿಸಲಿ. ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಿದ ಬಳಿಕವೂ ಅವರು ಇಮ್ರಾನ್​ ಖಾನ್​ರನ್ನು ಅಣ್ಣ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.  ಕಾಶ್ಮೀರದಲ್ಲಿ ಕಳೆದ ಒಂದು ತಿಂಗಳಲ್ಲಿ ನಾಗರಿಕರು, ಯೋಧರೆಲ್ಲ ಸೇರಿ 40 ಮಂದಿಯ ಹತ್ಯೆಯಾಗಿದೆ. ಈ ಬಗ್ಗೆ ಸಿಧು ಮಾತನಾಡುತ್ತಿಲ್ಲ. ಸಿಧು ಕರ್ತಾರ್​ಪುರ ಸಾಹೀಬ್​​ಗೆ ಹೋಗಿ ಪಾಕ್​ ಆರ್ಮಿ ಮುಖ್ಯಸ್ಥ ಬಜ್ವಾರನ್ನು ಅಪ್ಪಿಕೊಳ್ಳುತ್ತಾರೆ..ಇಮ್ರಾನ್​ಖಾನ್​ರನ್ನು ಅಣ್ಣ ಎನ್ನುತ್ತಾರೆ. ಇದರಂಥಾ ನಾಚಿಕೆಗೇಡಿನ ಹೇಳಿಕೆ ಇನ್ನೊಂದಿಲ್ಲ ಎಂದು ಗಂಭೀರ್​ ಕಿಡಿಕಾರಿದ್ದಾರೆ.

ನವಜೋತ್​ ಸಿಂಗ್ ಸಿಧು ಎಂಥ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಇಡೀ ದೇಶವೇ ಅರ್ಥ ಮಾಡಿಕೊಳ್ಳಬಲ್ಲದು. ನಮ್ಮ ದೇಶದ ಪ್ರಧಾನಿ, ಪಂಜಾಬ್​ ಹಿಂದಿನ ಮುಖ್ಯಮಂತ್ರಿ ಕ್ಯಾ.ಅಮರಿಂದರ್​ ಸಿಂಗ್​, ಈಗಿನ ಮುಖ್ಯಮಂತ್ರಿ ಚರಣಜಿತ್​ ಛನ್ನಿ ವಿರುದ್ಧವೇ ಮಾತನಾಡುವ ಸಿಧು, ಪಾಕಿಸ್ತಾನದಲ್ಲಿ ಪ್ರಧಾನಿಯನ್ನು ಅಣ್ಣ ಎನ್ನುತ್ತಾರೆ ಎಂದರೆ ಏನರ್ಥ ಎಂಬ ಪ್ರಶ್ನೆಯನ್ನೂ ಗೌತಮ್​ ಗಂಭೀರ್​ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: Viral Video: ಅಮಾಯಕನಂತೆ ವರ್ತಿಸುತ್ತಾ ಸೈಕಲ್ ಕದ್ದು ಪರಾರಿಯಾಗಲು ಹೊರಟ ಕಳ್ಳ; ಮುಂದೇನಾಯ್ತು? ವಿಡಿಯೊ ನೋಡಿ