ಲಕ್ಷ ಲಕ್ಷ ನಾಣ್ಯಗಳನ್ನು ಕೊಟ್ಟು ಕನಸಿನ ಬುಲೆಟ್ ಬೈಕ್ ಖರೀದಿಸಿದ ಮೀನು ವ್ಯಾಪಾರಿ

ಬಾಲ್ಯದ ಕನಸೊಂದನ್ನು ನನಸು ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಮೂರು ವರ್ಷಗಳ ಕಾಲ ಸತತವಾಗಿ ಶ್ರಮಿಸಿ, ವಿಭಿನ್ನ ರೀತಿಯಲ್ಲಿ ಬೈಕ್(Bike) ಖರೀದಿಸಿರುವ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಚಿತ್ರ ಘಟನೆಯ ವೀಡಿಯೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಬಾಪಟ್ಲಾ ಜಿಲ್ಲೆಯ ಪಟಾಚಿರಾದ ಮೀನು ವ್ಯಾಪಾರಿಯಾದ ರಸನಿ ರಾಘವ ಅವರಿಗೆ ಬಾಲ್ಯದಿಂದಲೂ ಬುಲೆಟ್ ಬೈಕ್ ಖರೀದಿಸಬೇಕೆಂಬ ಬಲವಾದ ಆಸೆ ಇತ್ತು. ಆದರೆ, ಆರ್ಥಿಕ ತೊಂದರೆಗಳಿಂದಾಗಿ ಅವರ ಕನಸು ನನಸಾಗುತ್ತಿರಲಿಲ್ಲ

ಲಕ್ಷ ಲಕ್ಷ ನಾಣ್ಯಗಳನ್ನು ಕೊಟ್ಟು ಕನಸಿನ ಬುಲೆಟ್ ಬೈಕ್ ಖರೀದಿಸಿದ ಮೀನು ವ್ಯಾಪಾರಿ
ಬೈಕ್
Image Credit source: Tv9 Telugu

Updated on: May 25, 2026 | 12:58 PM

ಆಂಧ್ರಪ್ರದೇಶ, ಮೇ 25: ಬಾಲ್ಯದ ಕನಸೊಂದನ್ನು ನನಸು ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಮೂರು ವರ್ಷಗಳ ಕಾಲ ಸತತವಾಗಿ ಶ್ರಮಿಸಿ, ವಿಭಿನ್ನ ರೀತಿಯಲ್ಲಿ ಬೈಕ್(Bike) ಖರೀದಿಸಿರುವ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಚಿತ್ರ ಘಟನೆಯ ವೀಡಿಯೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಬಾಪಟ್ಲಾ ಜಿಲ್ಲೆಯ ಪಟಾಚಿರಾದ ಮೀನು ವ್ಯಾಪಾರಿಯಾದ ರಸನಿ ರಾಘವ ಅವರಿಗೆ ಬಾಲ್ಯದಿಂದಲೂ ಬುಲೆಟ್ ಬೈಕ್ ಖರೀದಿಸಬೇಕೆಂಬ ಬಲವಾದ ಆಸೆ ಇತ್ತು. ಆದರೆ, ಆರ್ಥಿಕ ತೊಂದರೆಗಳಿಂದಾಗಿ ಅವರ ಕನಸು ನನಸಾಗುತ್ತಿರಲಿಲ್ಲ. ಆಗ ಅವರು ಎಲ್ಲರಿಗಿಂತ ವಿಭಿನ್ನವಾಗಿ ಬೈಕ್ ಖರೀದಿಸಲು ನಿರ್ಧರಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ತಮ್ಮ ವ್ಯಾಪಾರದಿಂದ ಗಳಿಸಿದ ಹಣದಲ್ಲಿ ಕೇವಲ 10 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಆರಂಭಿಸಿದರು.

ಹೀಗೆ ಮೂರು ವರ್ಷಗಳ ಕಾಲ ನಿರಂತರವಾಗಿ ಸಂಗ್ರಹಿಸಿದ ಪರಿಣಾಮವಾಗಿ ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ 10 ರೂಪಾಯಿ ನಾಣ್ಯಗಳು ಇವರ ಬಳಿ ಇದ್ದವು. ಇವು ಒಟ್ಟು 30,000 ನಾಣ್ಯಗಳಾಗಿದ್ದು, ಇವುಗಳ ಒಟ್ಟು ತೂಕ 220 ಕೆಜಿ ಇತ್ತು. ರಾಘವ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರ ಸಹಾಯದಿಂದ ಈ ನಾಣ್ಯಗಳನ್ನು ಎಣಿಸಿ 300 ಪ್ಯಾಕೆಟ್‌ಗಳಲ್ಲಿ ಜೋಡಿಸಿದರು.

ಮತ್ತಷ್ಟು ಓದಿ:
Video: ಬೈಕ್ ಓಡಿಸುತ್ತಿರುವಾಗಲೇ ಪತ್ನಿ ಕೈಯಲ್ಲಿ ಒದೆ ತಿಂದ ಪತಿ, ವೈರಲ್‌ ಆಯ್ತು ದೃಶ್ಯ

ಕೊನೆಗೆ, ಈ 220 ಕೆಜಿ ತೂಕದ ನಾಣ್ಯಗಳ ಚೀಲಗಳನ್ನು ಲಗೇಜ್ ವಾಹನವೊಂದರಲ್ಲಿ ತುಂಬಿಕೊಂಡು ಒಂಗೋಲ್‌ನಲ್ಲಿರುವ ಶೋರೂಂಗೆ ಸಾಗಿಸಿದ್ದಾರೆ. ಮೊದಮೊದಲು ಇಷ್ಟು ದೊಡ್ಡ ಪ್ರಮಾಣದ ನಾಣ್ಯಗಳನ್ನು ನೋಡಿ ಶೋರೂಂ ಸಿಬ್ಬಂದಿ ಆಶ್ಚರ್ಯಚಕಿತರಾದರು. ಆದರೆ, ರಾಘವ ಅವರ ದೃಢಸಂಕಲ್ಪ ಮತ್ತು ಬುಲೆಟ್ ಬೈಕ್ ಮೇಲಿರುವ ಪ್ರೀತಿಯನ್ನು ಕಂಡು ಮನಸಾರೆ ಶ್ಲಾಘಿಸಿ, ನಾಣ್ಯಗಳನ್ನು ಪಡೆದು ಅವರ ಕನಸಿನ ಬುಲೆಟ್ ಬೈಕ್ ಅನ್ನು ಹಸ್ತಾಂತರಿಸಿದರು. ಕೊನೆಗೂ ನೆಚ್ಚಿನ ಬುಲೆಟ್ ಬೈಕ್ ಏರಿ ಮನೆ ತಲುಪಿದ ರಾಘವ ಅವರನ್ನು ನೋಡಿ ಅವರ ಕುಟುಂಬಸ್ಥರ ಸಂತೋಷ ಮುಗಿಲು ಮುಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us