ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಎರಡು ಎನ್ಕೌಂಟರ್ಗಳಲ್ಲಿ ಐವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇಂದು ಸಂಜೆ ಕುಲ್ಗಾಂ ಜಿಲ್ಲೆಯ ಪೊಂಬೈ ಮತ್ತು ಗೋಪಾಲ್ಪುರದಲ್ಲಿ ನಡೆದ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಹತರಾಗಿದ್ದಾರೆ. ಕಾಶ್ಮೀರದ ಪೊಲೀಸರು, ಸಿಆರ್ಪಿಎಫ್, ಭಾರತೀಯ ಸೇನೆ ಜಂಟಿಯಾಗಿ ಎನ್ಕೌಂಟರ್ ಕಾರ್ಯಾಚರಣೆ ನಡೆಸಿವೆ.
ಇಂದು ಒಟ್ಟು 5 ಉಗ್ರರನ್ನು ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಾರತೀಯ ಸೇನೆಯಿಂದ ಎನ್ಕೌಂಟರ್ ನಡೆಸಿ, ಹತ್ಯೆ ಮಾಡಲಾಗಿದೆ. ಪೊಂಬೈ ಮತ್ತು ಗೋಪಾಲ್ಪುರ ಈ ಎರಡೂ ಗ್ರಾಮಗಳಲ್ಲಿ ಇನ್ನೂ ಭಾರತೀಯ ಸೇನೆಯಿಂದ ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ವರದಿಯ ಪ್ರಕಾರ, ನಿಷೇಧಿತ ಭಯೋತ್ಪಾದಕ ಸಂಘಟನೆ ಟಿಆರ್‌ಎಫ್‌ನ ಭಯೋತ್ಪಾದಕ ಕಮಾಂಡರ್ ಅಫಾಕ್ ಸಿಕಂದರ್ ಗೋಪಾಲ್‌ಪೋರಾದಲ್ಲಿ ಎನ್ಕೌಂಟರ್ಗೆ ಬಲಿಯಾಗಿದ್ದಾರೆ.
#Encounter has started at Gopalpora area of #Kulgam. Police and security forces are on the job. Further details shall follow. @JmuKmrPolice
— Kashmir Zone Police (@KashmirPolice) November 17, 2021
ಮಂಗಳವಾರ ಮುಂಜಾನೆ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೈದರ್‌ಪೋರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮತ್ತು ಅವನ ಸಹಚರನನ್ನು ಹತ್ಯೆ ಮಾಡಲಾಗಿತ್ತು. ಇರ ಜೊತೆಗೆ ಪುಲ್ವಾಮಾ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ನಾಕಾ ತಪಾಸಣೆಯಲ್ಲಿ ಇಬ್ಬರು ಎಲ್‌ಇಟಿ ಭಯೋತ್ಪಾದಕ ಸಹಚರರಾದ ಅಮೀರ್ ಬಶೀರ್ ಮತ್ತು ಮುಖ್ತಾರ್ ಭಟ್ ಅವರನ್ನು ಬಂಧಿಸಿದ್ದರಿಂದ ದೊಡ್ಡ ದುರಂತವನ್ನು ತಪ್ಪಿಸಲಾಯಿತು. ಹುಡುಕಾಟದ ಸಮಯದಲ್ಲಿ ಅವರಿಂದ ಬಳಸಲು ಸಿದ್ಧವಾಗಿರುವ 2 ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊದಲು ಪೊಂಬೈ ಗ್ರಾಮದಲ್ಲಿ ಎನ್ಕೌಂಟರ್ ನಡೆಸಿ ಮೂವರು ಉಗ್ರರನ್ನು ಕೊಲ್ಲಲಾಯಿತು. ಅದಾದ ಕೆಲವೇ ಗಂಟೆಗಳಲ್ಲಿ ಗೋಪಾಲ್ಪುರದಲ್ಲಿ ಎನ್ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಯಿತು.
ಇದನ್ನೂ ಓದಿ: ಜಮ್ಮು ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ