ಹೈದರಾಬಾದ್: ಮುತ್ತಿನ ನಗರಿಯಲ್ಲಿ ವರುಣನ ಅಬ್ಬರ ಜೋರಾಗಿದೆ. ಹೀಗಾಗಿ ಅದು ಭಾರಿ ಅನಾಹುತಗಳಿಗೆ ಕಾರಣವಾಗಿದೆ. ನಿನ್ನೆ ಸುರಿದ ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ಐವರು ಮೃತ ಪಟ್ಟಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯ ಬದ್ದಾರಂನಲ್ಲಿ ನಡೆದಿದೆ.
ಮಳೆಗೆ ಮನೆ ಗೋಡೆ ಕುಸಿದು ಒಂದೇ ಕುಟುಂಬದ ಐವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅತ್ತೆ, ಇಬ್ಬರು ಸೊಸೆಯರು, ಹಾಗೂ ಇಬ್ಬರು ಮೊಮ್ಮಕ್ಕಳು ರಾತ್ರಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಮೃತರನ್ನು ಮನೆಮ್ಮ(68), ಸುಪ್ರಜಾ(32), ಕುಮಾರಿ ( 21),ರಿಂಕಿ(18), ಉಮಾದೇವಿ(38) ಎಂದು ಗುರುತಿಸಲಾಗಿದೆ. ಶಿಥಿಲಗೊಂಡಿದ್ದ ಮನೆ ಇತ್ತೀಚಿನ ಮಳೆಯಿಂದಾಗಿ ಕುಸಿದಿದೆ ಎಂದು ಶಂಕಿಸಿಲಾಗಿದೆ.
Published On - 7:18 am, Sun, 25 October 20