ಭಾರೀ ಪ್ರವಾಹಕ್ಕೆ ಪ್ರಖ್ಯಾತ ಪಶುಪತಿನಾಥ ದೇವಸ್ಥಾನ ನೀರಲ್ಲಿ ಮುಳುಗಡೆ

|

Updated on: Aug 30, 2020 | 8:13 PM

ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿವನಾ ನದಿಗೆ ಭಾರೀ ಮಹಾಪೂರ ಬಂದಿದೆ. ಪರಿಣಾಮ ಮಂಡಸಾವುರ್‌ನ ಖ್ಯಾತ ಪಶುಪತಿನಾಥ ದೇವಸ್ಥಾನ ಪ್ರವಾಹದಲ್ಲಿ ಬಹುತೇಕ ಮುಳುಗಿ ಹೋಗಿದೆ. ನದಿಯ ಪ್ರವಾಹ ಅದ್ಯಾವ ಮಟ್ಟಿಗೆ ಇದೆಯಂದ್ರೆ ನದಿ ನೀರು ದೇವಸ್ಥಾನದೊಳಗೆ ನುಗ್ಗಿದ್ದು ಪಶುಪತಿನಾಥ ಮೂರ್ತಿ ಸಂಪೂರ್ಣವಾಗಿ ನೀರಲ್ಲಿ ಮುಳುಗಿ ಹೋಗಿದೆ. ನೀರಲ್ಲಿ ಪಶುಪತಿನಾಥನಿಗೆ ಮುಡಿಸಿದ್ದ ಹೂಗಳು ತೇಲಾಡುತ್ತಿವೆ. ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ರಾಜ್ಯದ ಹಲವೆಡೆ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ನದಿಯ ಪ್ರವಾಹಕ್ಕೆ […]

ಭಾರೀ ಪ್ರವಾಹಕ್ಕೆ ಪ್ರಖ್ಯಾತ ಪಶುಪತಿನಾಥ ದೇವಸ್ಥಾನ ನೀರಲ್ಲಿ ಮುಳುಗಡೆ
Follow us on

ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿವನಾ ನದಿಗೆ ಭಾರೀ ಮಹಾಪೂರ ಬಂದಿದೆ. ಪರಿಣಾಮ ಮಂಡಸಾವುರ್‌ನ ಖ್ಯಾತ ಪಶುಪತಿನಾಥ ದೇವಸ್ಥಾನ ಪ್ರವಾಹದಲ್ಲಿ ಬಹುತೇಕ ಮುಳುಗಿ ಹೋಗಿದೆ.

ನದಿಯ ಪ್ರವಾಹ ಅದ್ಯಾವ ಮಟ್ಟಿಗೆ ಇದೆಯಂದ್ರೆ ನದಿ ನೀರು ದೇವಸ್ಥಾನದೊಳಗೆ ನುಗ್ಗಿದ್ದು ಪಶುಪತಿನಾಥ ಮೂರ್ತಿ ಸಂಪೂರ್ಣವಾಗಿ ನೀರಲ್ಲಿ ಮುಳುಗಿ ಹೋಗಿದೆ. ನೀರಲ್ಲಿ ಪಶುಪತಿನಾಥನಿಗೆ ಮುಡಿಸಿದ್ದ ಹೂಗಳು ತೇಲಾಡುತ್ತಿವೆ.

ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ರಾಜ್ಯದ ಹಲವೆಡೆ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ನದಿಯ ಪ್ರವಾಹಕ್ಕೆ ಅಲ್ಲಿನ ಜನಜೀವನ ಭಾರೀ ಅಸ್ತವ್ಯಸ್ತವಾಗಿದೆ. ಹವಾಮಾನ ಇಲಾಖೆ ಕೂಡಾ ಮುಂದಿನ 24 ಗಂಟೆಗಗಳಲ್ಲಿ ಇನ್ನೂ ಮಳೆಯಾಗುವ ಮುನ್ಸೂಚನೆ ನೀಡಿದ್ದಾರೆ.

Also Read: ಪ್ರವಾಹಕ್ಕೆ ಸಿಲುಕಿದ್ದ ಜನರ ರಕ್ಷಣೆಗೆ ವಾಯುಪಡೆ ಯೋಧರ ಭಾರೀ ಸಾಹಸ

Also Read: ಭಾರೀ ಮಳೆಗೆ ಪ್ರಖ್ಯಾತ ಸ್ವಾಮಿನಾರಾಯಣ್‌ ದೇಗುಲ ಜಲಾವೃತ

Published On - 7:24 pm, Sun, 30 August 20