ಪ್ರವಾಹಕ್ಕೆ ಸಿಲುಕಿದ್ದ ಜನರ ರಕ್ಷಣೆಗೆ ವಾಯುಪಡೆ ಯೋಧರ ಭಾರೀ ಸಾಹಸ

ಭೋಪಾಲ್‌: ಮಧ್ಯಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ವರ್ಷಧಾರೆಗೆ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಮಳೆಯಿಂದ ಪ್ರವಾಹವುಂಟಾಗಿದ್ದು. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಭಾರತೀಯ ವಾಯು ಸೇನೆಯ ವಿಶೇಷ ರಕ್ಷಣಾ ಪಡೆಯನ್ನು ಕರೆಸಲಾಗಿದೆ. ಇಂಥದ್ದೇ ಒಂದು ಭಾರೀ ಸಾಹಸಮಯ ರಕ್ಷಣಾಕಾರ್ಯದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಎಂಐ 17ವಿ5 ಎನ್ನುವ ವಿಶೇಷ ಹೆಲಿಕಾಪ್ಟರ್‌ ಮೂಲಕ ವೈಗಂಗಾ ನದಿಯ ಪ್ರವಾಹಕ್ಕೆ ಸಿಲುಕಿದ್ದ ಇಬ್ಬರು ವ್ಯಕ್ತಿಗಳನ್ನು ವಾಯು ಸೇನೆ ಯೋಧರು ಪ್ರಾಣ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಬಲಘಾಟ್‌ ನಗರದ […]

ಪ್ರವಾಹಕ್ಕೆ ಸಿಲುಕಿದ್ದ ಜನರ ರಕ್ಷಣೆಗೆ ವಾಯುಪಡೆ ಯೋಧರ ಭಾರೀ ಸಾಹಸ
Follow us
Guru
|

Updated on:Aug 30, 2020 | 7:29 PM

ಭೋಪಾಲ್‌: ಮಧ್ಯಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ವರ್ಷಧಾರೆಗೆ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಮಳೆಯಿಂದ ಪ್ರವಾಹವುಂಟಾಗಿದ್ದು. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಭಾರತೀಯ ವಾಯು ಸೇನೆಯ ವಿಶೇಷ ರಕ್ಷಣಾ ಪಡೆಯನ್ನು ಕರೆಸಲಾಗಿದೆ.

ಇಂಥದ್ದೇ ಒಂದು ಭಾರೀ ಸಾಹಸಮಯ ರಕ್ಷಣಾಕಾರ್ಯದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಎಂಐ 17ವಿ5 ಎನ್ನುವ ವಿಶೇಷ ಹೆಲಿಕಾಪ್ಟರ್‌ ಮೂಲಕ ವೈಗಂಗಾ ನದಿಯ ಪ್ರವಾಹಕ್ಕೆ ಸಿಲುಕಿದ್ದ ಇಬ್ಬರು ವ್ಯಕ್ತಿಗಳನ್ನು ವಾಯು ಸೇನೆ ಯೋಧರು ಪ್ರಾಣ ಪಣಕ್ಕಿಟ್ಟು ರಕ್ಷಿಸಿದ್ದಾರೆ.

ಬಲಘಾಟ್‌ ನಗರದ ಸಮೀಪದ ಮೊವಾದ್‌ ಗ್ರಾಮ ನದಿಯಲ್ಲಿನ ಪ್ರವಾಹಕ್ಕೆ ಸಿಲುಕಿ ನಡುಗಡ್ಡೆಯಂತಾಗಿದೆ. ಹೀಗಾಗಿ ಈ ಗ್ರಾಮದ ಜನರನ್ನು ಅಲ್ಲಿಂದ ರಕ್ಷಿಸಿ ಬೇರೆಡೆ ಸಾಗಿಸಲು ಯೋಧರು ಭಾರೀ ಸಾಹಸ ಮಾಡುತ್ತಿದ್ದಾರೆ.

Also Read: ಭಾರೀ ಪ್ರವಾಹಕ್ಕೆ ಪ್ರಖ್ಯಾತ ಪಶುಪತಿನಾಥ ದೇವಸ್ಥಾನ ನೀರಲ್ಲಿ ಮುಳುಗಡೆ

Published On - 5:37 pm, Sun, 30 August 20