ಭಾರತ ಆಟಿಕೆಗಳ ತಯಾರಿಕಾ ಹಬ್ ಆಗಬೇಕು, ಚನ್ನಪಟ್ಟಣದ ಗೊಂಬೆಗಳು ಮಾದರಿಯಾಗಬೇಕು: ಪ್ರಧಾನಿ ಮೋದಿ

ನವದೆಹಲಿ: ಆತ್ಮ ನಿರ್ಭರ ಭಾರತದ ಅಡಿಯಲ್ಲಿ ಭಾರತ ಜಗತ್ತಿನ ಆಟಿಕೆ ವಸ್ತು ತಯಾರಿಕೆಯ ಹಬ್ ಆಗಬಹುದು. ಇದಕ್ಕೆ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ಅತ್ಯುತ್ತಮ ಉದಾಹರಣೆ  ಹಾಗೂ ಮಾದರಿ. ಚನ್ನಪಟ್ಟಣದ ಆಟಿಕೆಗಳು ತಮ್ಮ ವಿಶಿಷ್ಟ ಶೈಲಿಯಿಂದ ಕೇವಲ ಚಿಕ್ಕಮಕ್ಕಳು ಮಾತ್ರವಲ್ಲ ಎಲ್ಲರ ಹೃದಯವನ್ನೂ ಗೆದ್ದಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 68ನೇ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಚಿಕ್ಕ ಮಕ್ಕಳ ಆಟಿಕೆ ತಯಾರಿಕೆಯಲ್ಲಿ ಭಾರತದ ಪಾಲುದಾರಿಕೆ ಹೆಚ್ಚಬೇಕು. ಅದರಲ್ಲೂ […]

ಭಾರತ ಆಟಿಕೆಗಳ ತಯಾರಿಕಾ ಹಬ್ ಆಗಬೇಕು, ಚನ್ನಪಟ್ಟಣದ ಗೊಂಬೆಗಳು ಮಾದರಿಯಾಗಬೇಕು: ಪ್ರಧಾನಿ ಮೋದಿ
Follow us
Guru
|

Updated on:Aug 30, 2020 | 2:09 PM

ನವದೆಹಲಿ: ಆತ್ಮ ನಿರ್ಭರ ಭಾರತದ ಅಡಿಯಲ್ಲಿ ಭಾರತ ಜಗತ್ತಿನ ಆಟಿಕೆ ವಸ್ತು ತಯಾರಿಕೆಯ ಹಬ್ ಆಗಬಹುದು. ಇದಕ್ಕೆ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ಅತ್ಯುತ್ತಮ ಉದಾಹರಣೆ  ಹಾಗೂ ಮಾದರಿ. ಚನ್ನಪಟ್ಟಣದ ಆಟಿಕೆಗಳು ತಮ್ಮ ವಿಶಿಷ್ಟ ಶೈಲಿಯಿಂದ ಕೇವಲ ಚಿಕ್ಕಮಕ್ಕಳು ಮಾತ್ರವಲ್ಲ ಎಲ್ಲರ ಹೃದಯವನ್ನೂ ಗೆದ್ದಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 68ನೇ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಚಿಕ್ಕ ಮಕ್ಕಳ ಆಟಿಕೆ ತಯಾರಿಕೆಯಲ್ಲಿ ಭಾರತದ ಪಾಲುದಾರಿಕೆ ಹೆಚ್ಚಬೇಕು. ಅದರಲ್ಲೂ ಸ್ಥಳೀಯ ಆಟಿಕೆಗಳಿಗೆ ಹೆಚ್ಚು ಪ್ರಚಾರವನ್ನು ಮಾಡಬೇಕು. ಅಂಥ ಆಟಿಕೆಗಳಿಂದ ಮಕ್ಕಳ ಬೌದ್ಧಿಕ ವಿಕಸನವಾಗುವಂತಿರಬೇಕು ಎಂದು ಆಟಿಕೆ ತಯಾರಿಕರಿಗೆ ಕರೆ ನೀಡಿದ್ದಾರೆ. ಮುಧೋಳ ತಳಿ ನಾಯಿಗೆ ಪ್ರಧಾನಿ ಮೆಚ್ಚುಗೆ ಕರ್ನಾಟಕದ ಖ್ಯಾತ ಮುಧೋಳ ತಳಿಯ ನಾಯಿಯ ಬಗೆಗೂ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಮೋದಿ, ಭಾರತದಲ್ಲಿ ಹಲವು ತಳಿಯ ನಾಯಿಗಳಿವೆ. ಇವು ದೇಶದ ಸೇನೆಯಲ್ಲಿ ಹಲವು ಮಹತ್ವದ ಪಾತ್ರ ವಹಿಸುತ್ತಿವೆ ಎಂದಿರುವ ಮೋದಿ, ಅದ್ರಲ್ಲೂ ಕರ್ನಾಟಕದ ಮುಧೋಳ ತಳಿಯ ನಾಯಿ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿ ಅವುಗಳ ಕಾರ್ಯಕ್ಷಮತೆಯನ್ನು ಕೊಂಡಾಡಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಪ್ರಾಶಸ್ತ್ಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳ ಮೇಲೆ ವಿಶೇಷ ಲಕ್ಷ್ಯ ವಹಿಸಲಾಗುತ್ತೆ. ಅದರಲ್ಲೂ ಎಲ್ಲ ಮಕ್ಕಳಿಗೂ ಪೋಷಣ್ ಕಾರ್ಡ್ ನೀಡಲಾಗುವುದು ಎಂದು ಭರವಸೆ ನೀಡಿದ ಮೋದಿ, ಮಕ್ಕಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರ ಸೇವೆ ಸ್ಮರಿಸಲು ಸೆಪ್ಟೆಂಬರ್ 5ರಂದು ಶಿಕ್ಷಕರ ದಿನ ಆಚರಣೆ ಮಾಡುತ್ತೇವೆ ಎಂದಿದ್ದಾರೆ. ಕಂಪ್ಯೂಟರ್ ಗೇಮ್‌ನಲ್ಲಿ ಭಾರತದ ಥೀಮ್ ಕಂಪ್ಯೂಟರ್ ಗೇಮ್‌ನಲ್ಲಿ ಭಾರತದ ಥೀಮ್ ಇರಬೇಕು. ಭಾರತದಲ್ಲಿ, ಭಾರತದ ಕಂಪ್ಯೂಟರ್ ಗೇಮ್‌ಗಳಿರಬೇಕು. ಅವು ಆತ್ಮವಿಶ್ವಾಸದಿಂದ ಭಾರತವನ್ನು ಆತ್ಮನಿರ್ಭರ ಮಾಡಬೇಕು. ಆತ್ಮನಿರ್ಭರ್‌ ಆ್ಯಪ್ ಇನೋವೇಷನ್ ಚಾಲೆಂಜ್‌ನಲ್ಲಿ ಹಲವು ಯುವ ಜನತೆ ಭಾಗಿಯಾಗಿದ್ದಾರೆ ಎಂದು ತಿಳಿಸಿದ ಪ್ರಧಾನಿ, ಆಟವಾಡುತ್ತಲೇ ಮಕ್ಕಳು ಹಲವು ವಿಷಯ ಕಲಿಯುತ್ತಾರೆ. ಹೀಗಾಗಿ ಸ್ವದೇಶಿ ಆಟಗಳನ್ನು ಕಂಪ್ಯೂಟರ್ ಗೇಮ್‌ಗಳಲ್ಲಿ ಅಳವಡಿಸಿ ಎಂದು ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಂಪ್ಯುಟರ್‌ ಗೇಮ್‌ ಡೆವಲಪರ್ಸ್‌ಗೆ ಕರೆ ನೀಡಿದ್ದಾರೆ. ಭಾರತೀಯ ಕೃಷಿ ಕೋಶ ಅಭಿವೃದ್ಧಿ ದೇಶದಲ್ಲಿ ಭಾರತೀಯ ಕೃಷಿ ಕೋಶವನ್ನು ಸಿದ್ಧಪಡಿಸಲಾಗುತ್ತಿದೆ. ಈ ಕೃಷಿ ಕೋಶದಲ್ಲಿ ಆಹಾರ ಉತ್ಪನ್ನವನ್ನ ಶೇಖರಿಸಿಡಬಹುದು. ದೇಶದಲ್ಲಿ ಎಲ್ಲರೂ ಪೌಷ್ಟಿಕ ಆಹಾರ ಸೇವಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದ ಮೋದಿ, ಜನರ ಪಾಲ್ಗೊಳ್ಳುವಿಕೆಯಿಂದ ಪೌಷ್ಟಿಕ ಆಹಾರ ಸೇವನೆ ಈಗ ಆಂದೋಲನವಾಗಿ ಬದಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೋವಿಡ್ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಕೊರೊನಾ ಮಾಹಾ ಮಾರಿಯ ಬಗ್ಗೆ ಪ್ರಸ್ತಾಪಿಸಿದ ಮೋದಿ, ಕೊರೊನಾ ಹಿನ್ನೆಲೆ ದೇಶ ಹಲವು ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಕೊವಿಡ್ ಮಾರ್ಗಸೂಚಿಗಳ ಪಾಲನೆ ಕಡ್ಡಾಯವಾಗಿದೆ. ಕಾರ್ಯಕ್ರಮಗಳ ಆಯೋಜನೆ ವೇಳೆ ಆಯೋಜಕರಿಗೆ ಎಚ್ಚರಿಕೆ ಅತ್ಯಗತ್ಯ. ಈ ಬಾರಿ ಹಲವೆಡೆ ಆನ್‌ಲೈನ್‌ನಲ್ಲಿ ಗಣೇಶೋತ್ಸವ ಆಚರಿಸಲಾಯಿತು. ರೈತರ ಶ್ರಮದಿಂದ ಹಬ್ಬಗಳು ವರ್ಣರಂಜಿತಗೊಳ್ಳುತ್ತವೆ. ಹಬ್ಬ, ಪರಿಸರದ ನಡುವೆ ಬಹಳ ಹಳೆಯ ಸಂಬಂಧವಿದೆ. ಹೀಗಾಗಿ ಪರಿಸರಕ್ಕೆ ದಕ್ಕೆಯಾಗದಂತೆ ಹಬ್ಬಗಳನ್ನು ಆಚರಿಸಬೇಕು ಎಂದ ಮೋದಿ, ಇಂಥ ಸಂಕಷ್ಟದ ಸಮಯದಲ್ಲಿ ದೇಶವಾಸಿಗಳು ಮೆರೆದ ಸಹನೆ ಮತ್ತು ತಾಳ್ಮೆ ಮೆಚ್ಚುವಂಥದ್ದು ಎಂದಿದ್ದಾರೆ.

Also Read:ಮನ್‌ ಕಿ ಬಾತ್‌ನಲ್ಲಿ ಪ್ರಧಾನಿಯಿಂದ ಚನ್ನಪಟ್ಟಣದ ಬೊಂಬೆ ಪ್ರಸ್ತಾಪ: ಸ್ಥಳೀಯರಲ್ಲಿ ಹರ್ಷದ ಹೊನಲು

Published On - 12:52 pm, Sun, 30 August 20