AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್‌ ಸಾಲದ ಮೊರಾಟೋರಿಯಂ ಅಂತ್ಯ, ಸೆಪ್ಟೆಂಬರ್​ನಿಂದ EMI ಮರುಪಾವತಿ ಅನಿವಾರ್ಯ?

ಲಾಕ್​ಡೌನ್​ನಿಂದ ಲಕ್ಷಾಂತರ ಮಂದಿಗೆ ಕೆಲ್ಸನೇ ಇರಲಿಲ್ಲ. ಇದ್ರಿಂದ ಆದಾಯವೇ ಬಂದ್ ಆಗಿತ್ತು. ಅದೆಷ್ಟೋ ಜನರಿಗೆ ಸಾಲದ ಇಎಂಐ ಪಾವತಿಸೋಕೆ ಆಗ್ತಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಇಎಂಐ ಮರುಪಾವತಿಯನ್ನ 6 ತಿಂಗಳು ಮುಂದೂಡಿತ್ತು. ಇದು ನಾಳೆಗೆ ಎಂಡ್ ಆಗ್ತಿದ್ದು, ಸೆಪ್ಟೆಂಬರ್​ನಿಂದ ಯಾವ ನಿಯಮ ಜಾರಿಯಾಗುತ್ತೆ..? ಸಾಲದ ಮಾರಾಟೋರಿಯಂ ಮುಂದುವರಿಯುತ್ತಾ ಇಲ್ವಾ ಅನ್ನೋದ್ರ ಡೀಟೆಲ್ಸ್ ಇಲ್ಲಿದೆ.. ಲಾಕ್​ಡೌನ್​​ನಿಂದ ಆದ ಸಮಸ್ಯೆಗಳು, ಸಂಕಷ್ಟಗಳು, ತಾಪತ್ರಯಗಳು ಒಂದೆರಡಲ್ಲ.. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡ್ರು. ಸಾವಿರಾರು ಮಂದಿ ಬೀದಿಗೆ ಬಿದ್ರು. ಆದಾಯದ ಎಲ್ಲ ಬಾಗಿಲುಗಳು […]

ಬ್ಯಾಂಕ್‌ ಸಾಲದ ಮೊರಾಟೋರಿಯಂ ಅಂತ್ಯ, ಸೆಪ್ಟೆಂಬರ್​ನಿಂದ EMI ಮರುಪಾವತಿ ಅನಿವಾರ್ಯ?
ಆಯೇಷಾ ಬಾನು
|

Updated on:Aug 30, 2020 | 7:10 AM

Share

ಲಾಕ್​ಡೌನ್​ನಿಂದ ಲಕ್ಷಾಂತರ ಮಂದಿಗೆ ಕೆಲ್ಸನೇ ಇರಲಿಲ್ಲ. ಇದ್ರಿಂದ ಆದಾಯವೇ ಬಂದ್ ಆಗಿತ್ತು. ಅದೆಷ್ಟೋ ಜನರಿಗೆ ಸಾಲದ ಇಎಂಐ ಪಾವತಿಸೋಕೆ ಆಗ್ತಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಇಎಂಐ ಮರುಪಾವತಿಯನ್ನ 6 ತಿಂಗಳು ಮುಂದೂಡಿತ್ತು. ಇದು ನಾಳೆಗೆ ಎಂಡ್ ಆಗ್ತಿದ್ದು, ಸೆಪ್ಟೆಂಬರ್​ನಿಂದ ಯಾವ ನಿಯಮ ಜಾರಿಯಾಗುತ್ತೆ..? ಸಾಲದ ಮಾರಾಟೋರಿಯಂ ಮುಂದುವರಿಯುತ್ತಾ ಇಲ್ವಾ ಅನ್ನೋದ್ರ ಡೀಟೆಲ್ಸ್ ಇಲ್ಲಿದೆ..

ಲಾಕ್​ಡೌನ್​​ನಿಂದ ಆದ ಸಮಸ್ಯೆಗಳು, ಸಂಕಷ್ಟಗಳು, ತಾಪತ್ರಯಗಳು ಒಂದೆರಡಲ್ಲ.. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡ್ರು. ಸಾವಿರಾರು ಮಂದಿ ಬೀದಿಗೆ ಬಿದ್ರು. ಆದಾಯದ ಎಲ್ಲ ಬಾಗಿಲುಗಳು ಬಂದ್ ಆಗಿದ್ವು. ಇದ್ರಿಂದ ಬ್ಯಾಂಕ್​ನಲ್ಲಿ ಸಾಲ ಪಡೆದವ್ರು ಇಎಂಐ ಕಟ್ಟೋಕಾಗದೆ ಒದ್ದಾಡ್ತಿದ್ರು. ಹೀಗಾಗಿ, ಕೇಂದ್ರ ಸರ್ಕಾರದ ಮನವಿ ಮೇರೆಗೆ ರಿಸರ್ವ್ ಬ್ಯಾಂಕ್‌ ಸಾಲದ ಇಎಂಐ ಪಾವತಿಯನ್ನ ಮುಂದೂಡುವ ಅವಕಾಶ ಕಲ್ಪಿಸಿತ್ತು. ಈಗ ಆಗಸ್ಟ್​ಗೆ ಈ ಸೇವೆ ಅಂತ್ಯವಾಗ್ತಿದೆ.

ಸೆಪ್ಟೆಂಬರ್​ನಿಂದ ಇಎಂಐ ಮರುಪಾವತಿ ಅನಿವಾರ್ಯ..? ಅಂದ್ಹಾಗೇ, ರಿಸರ್ವ್ ಬ್ಯಾಂಕ್ ಇಎಂಐ ಮರುಪಾವತಿಗೆ ಕೊಟ್ಟಿದ್ದ ಟೈಂ ನಾಳೆಗೆ ಮುಗೀತಿದೆ. ಇದ್ರಿಂದ ಸಾಲದ ಮೊರಾಟೋರಿಯಂ ವಿಸ್ತರಣೆಯಾಗುತ್ತಾ? ಇಲ್ವೋ ಅನ್ನೋ ಕುತೂಹಲ ಹೆಚ್ಚಾಗಿದೆ.

ರಿಸರ್ವ್ ಬ್ಯಾಂಕ್ ಹೇಳಿದ್ದೇನು? ಬ್ಯಾಂಕ್ ಸಾಲದ ಇಎಂಐ ಮರುಪಾವತಿ ಮತ್ತೆ ಮುಂದೂಡಿಕೆಯಾಗಲ್ಲ, ಇಎಂಐ ಮರುಪಾವತಿ ವಿಸ್ತರಿಸುವ ಪ್ರಸ್ತಾವ ರಿಸರ್ವ್ ಬ್ಯಾಂಕ್ ಮುಂದೆ ಇಲ್ಲ. ಸಾಲ ಮರುಪಾವತಿ ಮುಂದೂಡಿಕೆ ಒಂದು ಜಸ್ಟ್ ತಾತ್ಕಾಲಿಕ ಪರಿಹಾರ ಕ್ರಮವಾಗಿತ್ತು. ಹೀಗಾಗಿ ಮತ್ತೆ ಸಾಲದ ಮರುಪಾವತಿ ಮುಂದೂಡಿಕೆ ಮಾಡಲ್ಲ. ಹೀಗಾಗಿ ಸೆಪ್ಟೆಂಬರ್ 1ರಿಂದ ಸಾಲದ ಇಎಂಐ ಮರುಪಾವತಿ ಅನಿವಾರ್ಯ ಎಂದು ತಿಳಿಸಿದೆ.

ಇನ್ನು ಹೆಚ್​ಡಿಎಫ್​ಸಿ & ಕೋಟಕ್ ಮಹೀಂದ್ರಾ ಬ್ಯಾಂಕ್​ಗಳು ಸಾಲದ ಮೊರಾಟೋರಿಯಂನ ಮತ್ತೆ ವಿಸ್ತರಿಸಬಾರದು ಅಂತಾ ಮನವಿ ಮಾಡಿವೆ. ಕೆಲವ್ರು ಇದನ್ನ ಮಿಸ್ ಯೂಸ್ ಮಾಡ್ಕೊಳ್ತಿದ್ದಾರೆ. ಇದ್ರಿಂದ ಬ್ಯಾಂಕ್​ಗಳ ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತೆ. ಸದ್ಯ ಆರ್ಥಿಕ ಚಟುವಟಿಕೆ ವೇಗ ಪಡೆದುಕೊಳ್ತಿದ್ದು, ಇಎಂಐ ಮರುಪಾವತಿ ಮುಂದೂಡಿಕೆ ಮಾಡ್ಬಾರದು ಅಂದಿವೆ.

ಇತ್ತ ಸುಪ್ರಿಂಕೋರ್ಟ್ 6 ತಿಂಗಳು ಇಎಂಐ ಮುಂದೂಡಿಕೆ ಮಾಡಿರೋದ್ರ ಮೇಲೆ ಚಕ್ರಬಡ್ಡಿ ವಿಧಿಸೋದ್ರ ಬಗ್ಗೆ ಅರ್ಜಿ ವಿಚಾರಣೆ ನಡೆಸ್ತಿದೆ. ಇದ್ರ ಬೆನ್ನಲ್ಲೇ ಆಗ್ರಾದ ಗಜೇಂದ್ರಶರ್ಮಾ ಎಂಬಾತ ಬಡ್ಡಿ ಮನ್ನಾ ಮಾಡ್ಬೇಕೆಂದು ಅರ್ಜಿ ಸಲ್ಲಿಸಿದ್ದಾನೆ. ಅರ್ಜಿದಾರರ ಪರ ವಾದ ಮಾಡಿದ ಕಪಿಲ್ ಸಿಬಲ್, ಇಎಂಐ ಮುಂದೂಡಿಕೆಯನ್ನ ಮತ್ತೆ ವಿಸ್ತರಿಸಬೇಕು ಅಂತಾ ಮನವಿ ಮಾಡಿದ್ರು. ಆದ್ರೆ ಸುಪ್ರೀಂಕೋರ್ಟ್ ಈ ಬಗ್ಗೆ ಏನನ್ನೂ ಹೇಳಿಲ್ಲ. ಸೆಪ್ಟೆಂಬರ್ 1ರಂದು ಮತ್ತೆ ಚಕ್ರಬಡ್ಡಿ ಮನ್ನಾ ಬಗ್ಗೆ ವಿಚಾರಣೆ ನಡೆಯಲಿದೆ. ಆಗ ಸಾಲದ ಮೊರಾಟೋರಿಯಂ ಬಗ್ಗೆ ಸುಪ್ರೀಂ ಏನಾದ್ರೂ ಆದೇಶ ನೀಡುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 7:09 am, Sun, 30 August 20