ರಫೇಲ್ ಜೆಟ್ಗಳ ವಾಯುನೆಲೆಗೆ ಅಧಿಕೃತ ಸೇರ್ಪಡೆ ಸೆಪ್ಟೆಂಬರ್ 10 ರಂದು
ಭಾರತಿಯ ವಾಯು ದಳದ ಮೂಲಗಲ ಪ್ರಕಾರ ರಫೇಲ್ ಫೈಟರ್ ಜೆಟ್ಗಳನ್ನು ಸೆಪ್ಟೆಂಬರ್ 10 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಅಂಬಾಲಾದಲ್ಲಿರುವ ವಾಯುನೆಲೆಗೆ ಸೇರಿಸಲಾಗುವುದು. ಫ್ರಾನ್ಸ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಅವರನ್ನು ಈ ಕಾರ್ಯಕ್ರಮದಲ್ಲಿ ಬಾಗವಹಿಸಲು ಆಹ್ವಾನಿಸಲಾಗಿದೆಯೆಂದು ಮೂಲಗಳು ತಿಳಿಸಿವೆ. ಅವರು ತಮ್ಮ ಆಗಮನವನ್ನು ಈಗಾಗಲೇ ಖಚಿತಪಡಿಸಿದ್ದಾರಂತೆ. ಭಾರತ ಸರ್ಕಾರವು ಒಟ್ಟು 36 ರಫೇಲ್ ಜೆಟ್ಗಳಿಗೆ ಆರ್ಡರ್ ಸಲ್ಲಿಸಿದ್ದು, ಅದರಲ್ಲಿ 5 ವಿಮಾನಗಳು ಅಂಬಾಲಾ ವಾಯುನೆಲೆಯಲ್ಲಿ ಜುಲೈ 29ರಂದು ಬಂದಿಳಿದವು. ಈ ಜೆಟ್ಗಳ […]
ಭಾರತಿಯ ವಾಯು ದಳದ ಮೂಲಗಲ ಪ್ರಕಾರ ರಫೇಲ್ ಫೈಟರ್ ಜೆಟ್ಗಳನ್ನು ಸೆಪ್ಟೆಂಬರ್ 10 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಅಂಬಾಲಾದಲ್ಲಿರುವ ವಾಯುನೆಲೆಗೆ ಸೇರಿಸಲಾಗುವುದು. ಫ್ರಾನ್ಸ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಅವರನ್ನು ಈ ಕಾರ್ಯಕ್ರಮದಲ್ಲಿ ಬಾಗವಹಿಸಲು ಆಹ್ವಾನಿಸಲಾಗಿದೆಯೆಂದು ಮೂಲಗಳು ತಿಳಿಸಿವೆ. ಅವರು ತಮ್ಮ ಆಗಮನವನ್ನು ಈಗಾಗಲೇ ಖಚಿತಪಡಿಸಿದ್ದಾರಂತೆ.
ಭಾರತ ಸರ್ಕಾರವು ಒಟ್ಟು 36 ರಫೇಲ್ ಜೆಟ್ಗಳಿಗೆ ಆರ್ಡರ್ ಸಲ್ಲಿಸಿದ್ದು, ಅದರಲ್ಲಿ 5 ವಿಮಾನಗಳು ಅಂಬಾಲಾ ವಾಯುನೆಲೆಯಲ್ಲಿ ಜುಲೈ 29ರಂದು ಬಂದಿಳಿದವು. ಈ ಜೆಟ್ಗಳ ಸೇರ್ಪಡೆಯಿಂದ ಭಾರತದ ವಾಯುಸೇನೆಯ ಬಲ ಇಮ್ಮಡಿಸಿದೆ. ಐಎಎಫ್ನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ರಫೇಲ್ ಜೆಟ್ಗಳು ಆಗಮಿಸಿದಾಗ ವಾಯುನೆಲೆಯಲ್ಲಿ ಉಪಸ್ಥಿತರಿದ್ದರು. ಭಾರತ ಮತ್ತು ಚೀನಾದ ಲಡಾಖ್ ಗಡಿ ಸಂಘರ್ಷ ಉತ್ಕಟಾವಸ್ಥೆಯಲ್ಲಿದ್ದಾಗಲೇ ಈ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದು ವಿಷೇಶ.
ರಫೇಲ್ ಯುದ್ಧ ವಿಮಾನಗಳು ವಾಯುದಳದ ಗೋಲ್ಟನ್ ಌರೋಸ್ ಎಂದೇ ಹೆಸರಾಗಿರುವ 17 ಸ್ಕ್ವಾಡ್ರನ್ನ ಭಾಗವಾಗಲಿವೆ. ಈ ಸ್ಕ್ವಾಡ್ರನ್ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಹರ್ಕೀರತ್ ಸಿಂಗ್ ಅವರ ನೇತೃತ್ವದಲ್ಲಿ ಜೆಟ್ಗಳನ್ನು ಭಾರತಕ್ಕೆ ತರಲಾಗಿತ್ತು.
ನಾಲ್ಕು ರಫೇಲ್ ಜೆಟ್ಗಳ ಎರಡನೇ ಬ್ಯಾಚ್ ಭಾರತಕ್ಕೆ ಅಕ್ಟೋಬರ್ ತಿಂಗಳಲ್ಲಿ ಬರಲಿದೆಯೆಂದು ಮೂಲಗಳು ತಿಳಿಸಿವೆ.