ಅಸ್ಸಾಂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಿಪುನ್ ಬೋರಾ ಟಿಎಂಸಿಗೆ ಸೇರ್ಪಡೆ
ದೇಶದ ಈ ನಿರ್ಣಾಯಕ ಘಟ್ಟದಲ್ಲಿ ಬಿಜೆಪಿಯನ್ನು ತಡೆಯಲು ಆಕ್ರಮಣಕಾರಿಯಾಗಿ ಮತ್ತು ಒಗ್ಗಟ್ಟಿನಿಂದ ಹೋರಾಡುವ ಬದಲು, ಈ ಹಳೆಯ ಕಾಂಗ್ರೆಸ್ ಪಕ್ಷದ ವಿವಿಧ ಹಂತಗಳಲ್ಲಿ ನಾಯಕರು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಪರಸ್ಪರ ಹೋರಾಡುತ್ತಿದ್ದಾರೆ ಎಂದು ಬೋರಾ ಪತ್ರದಲ್ಲಿ ಬರೆದಿದ್ದಾರೆ.
ಕೊಲ್ಕತ್ತಾ: ಅಸ್ಸಾಂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಿಪುನ್ ಬೋರಾ (Ripun Bora) ಭಾನುವಾರ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್‌ಗೆ (TMC) ಸೇರ್ಪಡೆಗೊಂಡರು. ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷವನ್ನು(Congress) ತೊರೆದ ಇತ್ತೀಚಿನ ನಾಯಕರಾಗಿದ್ದಾರೆ ಬೋರಾ. ಕಳೆದ ವರ್ಷ ಆಗಸ್ಟ್‌ನಲ್ಲಿ ಸುಶ್ಮಿತಾ ದೇವ್ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ ಸೇರಿದ್ದರು.ಇಂದಿನಿಂದ ನಾನು ನನ್ನ ಹೊಸ ರಾಜಕೀಯ ಪಯಣ ಆರಂಭಿಸಿದ್ದೇನೆ ಎಂದು ಭಾನುವಾರ ಸಂಜೆ ಟ್ವೀಟ್ ಮಾಡಿರುವ ಬೋರಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಬರೆದ ರಾಜೀನಾಮೆ ಪತ್ರವನ್ನು ಹಂಚಿಕೊಂಡಿದ್ದಾರೆ. ಅಧಿಕೃತ ತೃಣಮೂಲ ಕಾಂಗ್ರೆಸ್ ಹ್ಯಾಂಡಲ್‌ನ ಟ್ವೀಟ್‌ನಲ್ಲಿ ಮಾಜಿ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು, ಅಸ್ಸಾಂನ ಶಿಕ್ಷಣ ಸಚಿವರು, ಮಾಜಿ ರಾಜ್ಯಸಭಾ ಸಂಸದ ಮತ್ತು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ರಿಪುನ್‌ಬೋರಾ ಅವರನ್ನು ಸ್ವಾಗತಿಸಲು ಸಂತೋಷವಾಗಿದೆ ಎಂದಿದೆ. ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದ ಬೋರಾ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದರು. ಬೋರಾ ಅವರ ಸೋಲು ವಿವಾದಾಸ್ಪದವಾಗಿತ್ತು ಮತ್ತು ವಿರೋಧ ಪಕ್ಷಗಳ (ಕಾಂಗ್ರೆಸ್ ಮತ್ತು ಎಐಯುಡಿಎಫ್) ನಡುವಿನ ಮಾತಿನ ಯುದ್ಧಕ್ಕೆ ಕಾರಣವಾಯಿತು ಇದು “ಕ್ರಾಸ್ ವೋಟಿಂಗ್” ಎಂದು ಪಕ್ಷಗಳು ಪರಸ್ಪರ ದೂಷಿಸಿಕೊಂಡಿದ್ದವು.
From today I have started my new political journey! pic.twitter.com/pGWfycwI4D
— Ripun Bora (@ripunbora) April 17, 2022
ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಕಾಂಗ್ರೆಸ್‌ನಲ್ಲಿ ಒಳಜಗಳವಿದೆ ಎಂದು ಬೋರಾ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ದೇಶದ ಈ ನಿರ್ಣಾಯಕ ಘಟ್ಟದಲ್ಲಿ ಬಿಜೆಪಿಯನ್ನು ತಡೆಯಲು ಆಕ್ರಮಣಕಾರಿಯಾಗಿ ಮತ್ತು ಒಗ್ಗಟ್ಟಿನಿಂದ ಹೋರಾಡುವ ಬದಲು, ಈ ಹಳೆಯ ಕಾಂಗ್ರೆಸ್ ಪಕ್ಷದ ವಿವಿಧ ಹಂತಗಳಲ್ಲಿ ನಾಯಕರು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಪರಸ್ಪರ ಹೋರಾಡುತ್ತಿದ್ದಾರೆ ಎಂದು ಬೋರಾ ಪತ್ರದಲ್ಲಿ ಬರೆದಿದ್ದಾರೆ. ಅಸ್ಸಾಂ ಕಾಂಗ್ರೆಸ್‌ನ ಹಿರಿಯ ನಾಯಕರ ಒಂದು ವಿಭಾಗವು “ಬಿಜೆಪಿ ಸರ್ಕಾರದೊಂದಿಗೆ ಮುಖ್ಯವಾಗಿ ಮುಖ್ಯಮಂತ್ರಿಯೊಂದಿಗೆ ರಹಸ್ಯ ತಿಳುವಳಿಕೆಯನ್ನು ಕಾಯ್ದುಕೊಳ್ಳುತ್ತಿದೆ” ಎಂಬುದು “ಬಹಿರಂಗ ರಹಸ್ಯ” ಎಂದು ಅವರು ಆರೋಪಿಸಿದ್ದಾರೆ.
Extending a very warm welcome to Shri @ripunbora, a stalwart and skilled politician, who joined the @AITCofficial family today.
We are extremely pleased to have you onboard and look forward to working together for the well-being of our people! pic.twitter.com/Tz0Q691Egd
— Abhishek Banerjee (@abhishekaitc) April 17, 2022
ತರುಣ್ ಗೊಗೊಯ್ ಆಡಳಿತದಲ್ಲಿ ಮಾಜಿ ಸಚಿವರಾಗಿದ್ದ ಬೋರಾ ತಮ್ಮ ವಿದ್ಯಾರ್ಥಿ ದಿನಗಳಿಂದಲೂ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದರು, 1976 ರಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರಿದರು. 2016 ರಲ್ಲಿ ಅವರು ರಾಜ್ಯದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾದರು. 2016 ರಲ್ಲಿ ಅಸ್ಸಾಂನಲ್ಲಿ ಕಾಂಗ್ರೆಸ್ ಸೋತ ನಂತರ ಪಕ್ಷವನ್ನು ಬಲಪಡಿಸಲು ಅವರನ್ನು ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಆದಾಗ್ಯೂ, 2021 ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದಾಗ, ಪಕ್ಷದ ಕಳಪೆ ಚುನಾವಣಾ ಪ್ರದರ್ಶನಕ್ಕಾಗಿ “ನೈತಿಕ ಹೊಣೆಗಾರಿಕೆ” ಯನ್ನು ಹೊತ್ತು ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ಬೋರಾ ರಾಜೀನಾಮೆ ಸಲ್ಲಿಸಿದರು. ಅಸ್ಸಾಂ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್‌ನ ದೇಬಬ್ರತ ಸೈಕಿಯಾ, ಬೋರಾ ಅವರ ರಾಜೀನಾಮೆಯನ್ನು “ಸ್ವಹಿತ ಹಿತಾಸಕ್ತಿಗಾಗಿರುವ ನಡೆ” ಎಂದು ಬಣ್ಣಿಸಿದ್ದಾರೆ. “ಅವರು ರಾಜ್ಯಸಭಾ ಸ್ಥಾನವನ್ನು ಬಯಸಿದ್ದರು ಮತ್ತು ಅದಕ್ಕಾಗಿಯೇ ಅವರು ತೊರೆದರು” ಎಂದು ಸೈಕಿಯಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಶ್ರೀರಾಮನ ಹೆಸರಿನಲ್ಲಿ ಕೋಮುವಾದದ ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ: ಸಂಜಯ್ ರಾವತ್