ಕೋವಿಡ್ 19​: ಭಾರತದ ಮಾಜಿ ಅಟಾರ್ನಿ ಜನರಲ್, ಪದ್ಮವಿಭೂಷಣ ಸೋಲಿ ಸೊರಾಬ್ಜಿ ನಿಧನ

|

Updated on: Apr 30, 2021 | 9:47 AM

Former attorney general Soli Jehangir Sorabjee: ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಸೋಲಿ ಸೊರಾಬ್ಜಿ ಅವರಿಗೆ 91 ವರ್ಷ ವಯಸ್ಸಾಗಿತ್ತು.

ಕೋವಿಡ್ 19​: ಭಾರತದ ಮಾಜಿ ಅಟಾರ್ನಿ ಜನರಲ್, ಪದ್ಮವಿಭೂಷಣ ಸೋಲಿ ಸೊರಾಬ್ಜಿ ನಿಧನ
ಕೋವಿಡ್ 19​: ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ನಿಧನ
Follow us on

ನವದೆಹಲಿ: ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಜೆಹಾಂಗೀರ್ ಸೊರಾಬ್ಜಿ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಸೋಲಿ ಸೊರಾಬ್ಜಿ ಅವರಿಗೆ 91 ವರ್ಷ ವಯಸ್ಸಾಗಿತ್ತು.

ಪದ್ಮವಿಭೂಷಣ, ದೇಶದ ಹಿರಿಯ ವಕೀಲ, ಪ್ರಮುಖ ನ್ಯಾಯವಾದಿ, ಮಾಜಿ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಸೋಲಿ ಜೆಹಾಂಗೀರ್ ಸೊರಾಬ್ಜಿ ಅವರು 1953ರಲ್ಲಿ ಬಾಂಬೆ ಹೈಕೋರ್ಟ್​ನಲ್ಲಿ ತಮ್ಮ ಕಾನೂನು ವೃತ್ತಿಯನ್ನು ಆರಂಭಿಸಿದ್ದರು. 1971ರಲ್ಲಿ ಸುಪ್ರೀಂಕೋರ್ಟ್​ನಲ್ಲಿ ಸೀನಿಯರ್ ಕೌನ್ಸಿಲ್​ ಆಗಿ ಅವರು ಪದನಿಮಿತ್ತರಾದರು. ಮೊದಲ ಬಾರಿಗೆ 1989-90 ಅವಧಿಗೆ ಬಳಿಕ, 1998-2000 ಅವಧಿಗೆ ಮತ್ತೊಮ್ಮೆ ಅವರು ಅಟಾರ್ನಿ ಜನರಲ್ ಆಗಿ ನಿಯುಕ್ತರಾಗಿದ್ದರು.

ಇದನ್ನೂ ಓದಿ:
ಕೋವಿಡ್ ವಿರುದ್ಧ ಸಮರ: ಪ್ರಧಾನಿ ಮೋದಿ ಮತ್ತು ಸಿಡಿಎಸ್ ರಾವತ್ ನಡುವೆ ಸಶಸ್ತ್ರ ದಳಗಳ ಸಿದ್ಧತೆ ಬಗ್ಗೆ ಚರ್ಚೆ 

(Former attorney general Soli Jehangir Sorabjee died at 91 due to Covid 19)

Published On - 9:33 am, Fri, 30 April 21