ಮಾಜಿ ಸಿಜೆಐ (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ) (Former CJI) ಎಸ್.ಎ.ಬೊಬ್ಡೆ (S.A.Bobde) ನಿನ್ನೆ (ಆಗಸ್ಟ್ 31) ಆರ್ಎಸ್ಎಸ್ ಸರಸಂಘಸಂಚಾಲಕ ಮೋಹನ್ ಭಾಗವತ್ (Mohan Bhagwat)ರನ್ನು ನಾಗ್ಪುರದಲ್ಲಿ ಭೇಟಿಯಾಗಿ ಸುಮಾರು 1 ತಾಸುಗಳ ಕಾಲ ಮಾತುಕತೆ ನಡೆಸಿದ್ದಾರೆ. ನಾಗ್ಪುರದ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲೇ ಈ ಭೇಟಿ ನಡೆದಿದೆ ಎಂದು ನಂಬಲರ್ಹ ಮೂಲಗಳಿಂದಲೇ ತಿಳಿದುಬಂದಿದ್ದರೂ, ಆರ್ಎಸ್ಎಸ್ ಮಾತ್ರ ಇದನ್ನು ನಿರಾಕರಿಸಿದೆ. ಒಂದು ತಾಸುಗಳ ಮಾತುಕತೆ ನಡೆದಿದ್ದರೂ, ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎಂಬುದಿನ್ನೂ ತಿಳಿದಿಲ್ಲ. ಹಾಗೇ, ಮೋಹನ್ ಭಾಗವತ್ ಆಗಲೀ, ಎಸ್.ಎ.ಬೊಬ್ಡೆಯವರಾಗಲೀ ಈ ಬಗ್ಗೆ ಇನ್ನೂ ಮಾತನಾಡಿಲ್ಲ.
ಬೊಬ್ಡೆಯವರು ಆರ್ಎಸ್ಎಸ್ ಕಚೇರಿಯನ್ನಾಗಲೀ, ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನಾಗಲಿ ಭೇಟಿಯಾಗಿದ್ದು ಇದೇ ಮೊದಲು. ಇಲ್ಲಷ್ಟೇ ಅಲ್ಲದೆ, ಮಹಲ್ ಏರಿಯಾದಲ್ಲಿರುವ, ಆರ್ಎಸ್ಎಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಗ್ಡೆವಾರ್ ಅವರ 100 ವರ್ಷಗಳಷ್ಟು ಹಳೆಯದಾದ ಮನೆಗೂ ಎಸ್.ಎ.ಬೊಬ್ಡೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಮನೆಯನ್ನು ಹೇಗೆ ನಿರ್ವಹಿಸಲಾಗುತ್ತಿದೆ..ಹೇಗೆಲ್ಲ ರಕ್ಷಿಸಲಾಗುತ್ತಿದೆ ಎಂಬುದನ್ನು ತಿಳಿಯಲು ಬೊಬ್ಡೆ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.
ಅಯೋಧ್ಯಾ ಐತಿಹಾಸಿಕ ತೀರ್ಪು ನೀಡಿದ್ದ ಬೊಬ್ಡೆ
ಎಸ್.ಎ.ಬೊಬ್ಡೆಯವರು ಮೂಲತಃ ನಾಗ್ಪುರದವರು. ಹಲವು ವರ್ಷಗಳ ಕಾಲ ಇಲ್ಲೇ ಅವರು ಕಾನೂನು ಪ್ರ್ಯಾಕ್ಟೀಸ್ ಮಾಡಿದ್ದರು. 2021ರ ಏಪ್ರಿಲ್ರಂದು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಅವರು ನಿವೃತ್ತರಾಗುವ ಕೆಲವೇ ದಿನಗಳ ಮೊದಲು ಅಯೋಧ್ಯೆ ಐತಿಹಾಸಿಕ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಮಾಜಿ ಸಿಜೆಐ ಅಂದರೆ ಎಸ್.ಎ.ಬೊಬ್ಡೆಗೂ ಮುನ್ನ ಇದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇದೀಗ ಎಸ್.ಎ.ಬೊಬ್ಡೆ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.
ಕೋಲಾರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ; ಕೇರಳದಿಂದ ಬಂದವರೇ ಸೂಪರ್ ಸ್ಪ್ರೆಡರ್ಸ್