ಕೊರೊನಾ ಸೋಂಕಿತ ಪತ್ನಿಗೆ ಸಿಗಲಿಲ್ಲ ಬೆಡ್; ದಾರುಣವಾಗಿ ಮೃತಪಟ್ಟ ಪತ್ನಿ ನೆನೆದು ಸಾರ್ವಜನಿಕ ಪತ್ರದಲ್ಲಿ ದುಃಖ ತೋಡಿಕೊಂಡ ಮಾಜಿ ಜಿಲ್ಲಾ ನ್ಯಾಯಾಧೀಶ

ಯಾವ ಆಸ್ಪತ್ರೆಗಳೂ ಮಾಜಿ ಜಿಲ್ಲಾ ನ್ಯಾಯಾಧೀಶರು ಮತ್ತು ಅವರ ಪತ್ನಿಯನ್ನು ದಾಖಲು ಮಾಡಿಕೊಳ್ಳಲಿಲ್ಲ. ಹಲವು ಪ್ರಯತ್ನಗಳ ನಂತರ ಆಸ್ಪತ್ರೆಗೆ ದಾಖಲಾದರೂ ಒಂದು ಬೆಡ್ ಸಹ ದೊರೆಯಲಿಲ್ಲ. ಕೊನೆಗೆ ರಮೇಶ್ ಚಂದ್ರ ಅವರ ಪತ್ನಿ ಸರಿಯಾದ ಚಿಕಿತ್ಸೆ ದೊರೆಯದೇ ಮೃತಪಟ್ಟಿದ್ದಾರೆ. ಈ ಕರುಣಾಜನಕ ಕತೆಯನ್ನು ಮಾಜಿ ಜಿಲ್ಲಾ ನ್ಯಾಯಾಧೀಶರು ಪತ್ರಮುಖೇನ ತೋಡಿಕೊಂಡಿದ್ದಾರೆ.

ಕೊರೊನಾ ಸೋಂಕಿತ ಪತ್ನಿಗೆ ಸಿಗಲಿಲ್ಲ ಬೆಡ್; ದಾರುಣವಾಗಿ ಮೃತಪಟ್ಟ ಪತ್ನಿ ನೆನೆದು ಸಾರ್ವಜನಿಕ ಪತ್ರದಲ್ಲಿ ದುಃಖ ತೋಡಿಕೊಂಡ ಮಾಜಿ ಜಿಲ್ಲಾ ನ್ಯಾಯಾಧೀಶ
ಸಾಂದರ್ಭಿಕ ಚಿತ್ರ
Edited By:

Updated on: Apr 16, 2021 | 1:37 PM

ಲಕ್ನೋ: ದೊಡ್ಡವರು ಚಿಕ್ಕವರು, ಶ್ರೀಮಂತರು ಬಡವರು, ಅಧಿಕಾರಿಗಳು ಜನಸಾಮಾನ್ಯರು ಎಂಬ ಬೇಧವಿಲ್ಲದೇ ಕೊರೊನಾ ಸೋಂಕು ವೇಗವಾಗಿ ಹಬ್ಬುತ್ತಿದೆ. ಇದೇ ವೇಳೆ ಉತ್ತರ ಪ್ರದೇಶದ ಲಕ್ನೋದಲ್ಲಿ ಕರುಣಾಜನಕ ಕಥೆಯೊಂದು ಬೆಳಕಿಗೆ ಬಂದಿದೆ. ಲಕ್ನೋದ ಮಾಜಿ ಜಿಲ್ಲಾ ನ್ಯಾಯಾಧೀಶರ ಪತ್ನಿಯೋರ್ವರು ಕೊರೊನಾ ಸೋಂಕಿನಿಂತ ಮೃತಪಟ್ಟಿದ್ದಾರೆ. ಮೃತಪಟ್ಟ ಪತ್ನಿಯ ಶವ ಸಂಸ್ಕಾರವನ್ನು ಗೌರವಯುತವಾಗಿ ನಡೆಸಲು ಸಹ ಅವರ ಬಳಿ ಸಾಧ್ಯವಾಗಿಲ್ಲ. ಹೀಗಾಗಿ ತೀವ್ರ ಬೇಸತ್ತ ಮಾಜಿ ಜಿಲ್ಲಾ ನ್ಯಾಯಾಧೀಶರು ಸಾರ್ವಜನಿಕ ಪತ್ರವೊಂದನ್ನು ಬರೆದು ಮನದ ದುಗುಡ ತೋಡಿಕೊಂಡಿದ್ದಾರೆ. ಕೊರೊನಾ ಉಂಟುಮಾಡಿದ ತೀವ್ರ ಆತಂಕದ ಸ್ಥಿತಿಗತಿಗಳ ಬಗ್ಗೆ ದುಗುಡ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ಲಕ್ನೋದ ಮಾಜಿ ಜಿಲ್ಲಾ ನ್ಯಾಯಾಧೀಶ ರಮೇಶ್ ಚಂದ್ರ ಅವರೇ ಈ ಪತ್ರ ಬರೆದವರು. ರಮೇಶ್ ಚಂದ್ರ ಮತ್ತು ಅವರ ಮಡದಿ ಮಧು ಚಂದ್ರ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಕೊರೊನಾ ವರದಿ ಬಂದ ನಂತರ ಈ ದಂಪತಿ ಮನೆಯಲ್ಲೇ ಸ್ವಯಂ ಕ್ವಾರಂಟೈನ್ ಆಗಿದ್ದರು. ಆದರೆ ಅಗತ್ಯ ಔಷಧಗಳೂ ಸೇರಿ ಇನ್ನುಳಿದ ಅಗತ್ಯ ಸಾಮಾಗ್ರಿಗಳನ್ನು ಮನೆಗೆ ತಂದುಕೊಡಲು ಅವರಿಗೆ ಯಾರೂ ಸಹಾಯ ಮಾಡಲೇ ಇಲ್ಲ. ಯಾವ ಆಸ್ಪತ್ರೆಗಳೂ ಮಾಜಿ ಜಿಲ್ಲಾ ನ್ಯಾಯಾಧೀಶರು ಮತ್ತು ಅವರ ಪತ್ನಿಯನ್ನು ದಾಖಲು ಮಾಡಿಕೊಳ್ಳಲಿಲ್ಲ. ಹಲವು ಪ್ರಯತ್ನಗಳ ನಂತರ ಆಸ್ಪತ್ರೆಗೆ ದಾಖಲಾದರೂ ಒಂದು ಬೆಡ್ ಸಹ ದೊರೆಯಲಿಲ್ಲ. ಕೊನೆಗೆ ರಮೇಶ್ ಚಂದ್ರ ಅವರ ಪತ್ನಿ ಸರಿಯಾದ ಚಿಕಿತ್ಸೆ ದೊರೆಯದೇ ಮೃತಪಟ್ಟಿದ್ದಾರೆ. ಈ ಕರುಣಾಜನಕ ಕತೆಯನ್ನು ಮಾಜಿ ಜಿಲ್ಲಾ ನ್ಯಾಯಾಧೀಶರು ಪತ್ರದ ಮುಖೇನ ತೋಡಿಕೊಂಡಿದ್ದಾರೆ.

ಅಷ್ಟಕ್ಕೂ ಆಘಾತಕಾರಿ ವಿಷಯವೇನಂದರೆ, ಮಾಜಿ ಜಿಲ್ಲಾ ನ್ಯಾಯಾಧೀಶ ರಮೇಶ್ ಚಂದ್ರ ಮತ್ತು ಅವರ ಪತ್ನಿ ಇಬ್ಬರೂ ಕೊವಿಡ್ ಲಸಿಕೆಯ ಎರಡೂ ಡೋಸ್​ಗಳನ್ನು ಚುಚ್ಚಿಸಿಕೊಂಡಿದ್ದರು. ಆದರೂ ತಮ್ಮ ಪತ್ನಿ ಸರಿಯಾದ ಚಿಕಿತ್ಸೆಯಿಲ್ಲದೇ ಕೊವಿಡ್ ಸೋಂಕಿಗೆ ದಾರುಣವಾಗಿ ಬಲಿಯಾದ ಘಟನೆಯನ್ನು ಮಾಜಿ ನ್ಯಾಯಾಧೀಶ ರಮೇಶ್ ಚಂದ್ರ ಪತ್ರ ಬರೆದು ಹಂಚಿಕೊಂಡಿದ್ದಾರೆ. ಈಗ ಹೇಳಿ, ಕೊರೊನಾಗೆ ಶ್ರೀಮಂತರು ಬಡವರು ಎಂಬ ಬೇಧವಿಲ್ಲ ತಾನೇ? ಕಟ್ಟುನಿಟ್ಟಾಗಿ ಕೊರೊನಾ ತಡೆ ಮಾರ್ಗಸೂಚಿ ಪಾಲಿಸೋಣ, ಕೊರೊನಾದಿಂದ ದೂರವಿರೋಣ.

ಮಾಜಿ ಜಿಲ್ಲಾ ನ್ಯಾಯಾಧೀಶರು ಬರೆದ ಪತ್ರ

ಎರಡನೇ ಅಲೆಯ ಆರ್ಭಟ; ಇಂದಿನ ಕೊರೊನಾ ಸೋಂಕಿತರೆಷ್ಟು?
ಇದೇ ರೀತಿಯ ಪರಿಸ್ಥಿತಿ ದೆಹಲಿಯಲ್ಲೂ ಉಂಟಾಗಿದೆ. 2021ರ ಮೊದಲ ಮೂರು ತಿಂಗಳಲ್ಲಿ ಕೊರೊನಾ ತಡೆ ಮಾರ್ಗದರ್ಶಿ ಸೂತ್ರಗಳನ್ನು ನಿಧಾನವಾಗಿ ಸಡಿಲಿಸಲಾಯಿತು. ಈ ಸಡಿಲಿಸುವಿಕೆಯೇ ಇಂದಿನ ಗಂಭೀರ ಸ್ಥಿತಿಗೆ ಕಾರಣ. ಜನರು ಮೊದಲಿನಂತೆಯೇ ಎಗ್ಗಿಲ್ಲದೇ ತಿರುಗಾಟ ಆರಂಭಿಸಿದರು. ಕೊರೊನಾ ತಡೆ ನಿಯಮಗಳನ್ನು ಮರೆತುಬಿಟ್ಟರು. ಸಾರ್ವಜನಿಕರ ಈ ವರ್ತನೆಯೇ ಕೊರೊನಾ ಹೆಚ್ಚಲು ಕಾರಣವಾಯಿತು ಎನ್ನುತ್ತಾರೆ ದೆಹಲಿಯ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್. ಅವರ ಮಾತಿನ ಮಧ್ಯೆಯೇ ಕಿಟಕಿಯಿಂದ ದೃಷ್ಟಿ ಹಾಯಿಸಿದರೆ ಮೃತಪಟ್ಟ ರೋಗಿಗಳ ಸಂಬಂದಿಕರು ಶವ ಪಡೆಯಲು ಸುಡು ಬಿಸಿಲಿನಲ್ಲಿ ಕಾಯುತ್ತಿರುವ ದೃಶ್ಯ ಎಂಥವರ ಕರುಳನ್ನೂ ಹಿಂಡುತ್ತದೆ.

‘ನನಗೆ ಗೊತ್ತು, ನಮ್ಮ ಆಸ್ಪತ್ರೆಯಲ್ಲಿ ಮಿತಿಮೀರಿದ, ಹಿಡಿಯಲಾರದಷ್ಟು ಕೊರೊನಾ ಸೋಂಕಿತರು ತುಂಬಲಿದ್ದಾರೆ. ಈಗಲೇ ಹಾಸಿಗೆಯೂ ಸೇರಿ ನಮ್ಮಲ್ಲಿರುವ ಎಲ್ಲಾ ವ್ಯವಸ್ಥೆಗಳ ಸಾಮರ್ಥ್ಯ ಭರ್ತಿಯಾಗಿದೆ’ ಎಂದು ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ಹೇಳುತ್ತಾರೆ. ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಒಂದೇ ಬೆಡ್​ನಲ್ಲಿ ಇಬ್ಬರಿಗೆ ಚಿಕಿತ್ಸೆ, ಆಸ್ಪತ್ರೆ ಹೊರಗೆ ಹೆಣಗಳು; ಕೊರೊನಾದಿಂದ ಪರಿಸ್ಥಿತಿ ಭೀಕರ

ಜನರು ತಾವಾಗಿಯೇ ರೆಮ್‌ಡೆಸಿವಿರ್ ಕೊಳ್ಳಬಾರದು, ಕೃತಕ ಉಸಿರಾಟ ಹೊಂದಿದ ರೋಗಿಗಳಿಗೆ ವೈದ್ಯರು ನೀಡುವ ಔಷಧಿ ಅದು: ಡಾ. ವಿ.ಕೆ.ಪೌಲ್

(Former district deputy judge wrote open letter after his wife died by covid 19 due to unavailable treatment in Lucknow Uttar Pradesh)