ಜನರು ತಾವಾಗಿಯೇ ರೆಮ್‌ಡೆಸಿವಿರ್ ಕೊಳ್ಳಬಾರದು, ಕೃತಕ ಉಸಿರಾಟ ಹೊಂದಿದ ರೋಗಿಗಳಿಗೆ ವೈದ್ಯರು ನೀಡುವ ಔಷಧಿ ಅದು: ಡಾ. ವಿ.ಕೆ.ಪೌಲ್

ರೆಮ್‌ಡೆಸಿವಿರ್ ಔಷಧವನ್ನು ಆಕ್ಸಿಜನ್ ಸಪೋರ್ಟ್‌ನಲ್ಲಿರುವ ಸೋಂಕಿತರಿಗೆ ಬಳಸಬೇಕು. ಅದೊಂದು ಪ್ರಯೋಗಾತ್ಮಕ ಔಷಧಿಯಾಗಿದ್ದು, ಸೋಂಕಿತರು ತಾವಾಗಿಯೇ ಖರೀದಿಸಿ ಮನೆಯಲ್ಲಿ ಬಳಕೆ ಮಾಡಲು ಮುಂದಾಗಕೂಡದು.

ಜನರು ತಾವಾಗಿಯೇ ರೆಮ್‌ಡೆಸಿವಿರ್ ಕೊಳ್ಳಬಾರದು, ಕೃತಕ ಉಸಿರಾಟ ಹೊಂದಿದ ರೋಗಿಗಳಿಗೆ ವೈದ್ಯರು ನೀಡುವ ಔಷಧಿ ಅದು: ಡಾ. ವಿ.ಕೆ.ಪೌಲ್
ಡಾ. ವಿ.ಕೆ.ಪೌಲ್​
Follow us
Skanda
|

Updated on:Apr 14, 2021 | 2:13 PM

ದೆಹಲಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲಸಿಕೆ ಬಳಕೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ. ಕೊರೊನಾ ಎರಡನೇ ಅಲೆ ಸೋಂಕಿನಿಂದ ಜನರನ್ನು ಪಾರು ಮಾಡಲು ಲಸಿಕೆಯೂ ಒಂದು ಪ್ರಮುಖ ಅಸ್ತ್ರವಾಗಿದ್ದು, ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಲಿದೆ ಹಾಗೂ ವೈರಾಣುವಿನಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳೂ ಕಡಿಮೆಯಾಗಲಿದೆ ಎಂಬ ಅಭಿಪ್ರಾಯಗಳನ್ನು ಅನೇಕ ತಜ್ಞರು ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ರೆಮ್‌ಡೆಸಿವಿರ್ ಔಷಧ ಬಳಕೆ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದ್ದು, ಇದನ್ನು ಬಳಸುವುದರಿಂದ ಸೋಂಕಿತರು ಉಸಿರಾಟದ ಸಮಸ್ಯೆಗೆ ತುತ್ತಾಗುವುದನ್ನು ತಪ್ಪಿಸಬಹುದು ಎಂಬ ಅಭಿಪ್ರಾಯವಿದೆ. ಆದರೆ, ಈ ಬಗ್ಗೆ ಎಚ್ಚರಿಕೆ ನೀಡಿರುವ ನೀತಿ‌ ಆಯೋಗದ ಸದಸ್ಯ ಡಾಕ್ಟರ್ ವಿ.ಕೆ.ಪೌಲ್, ರೆಮ್‌ಡೆಸಿವಿರ್ ಔಷಧವನ್ನು ಮನೆಯಲ್ಲೇ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ರೆಮ್‌ಡೆಸಿವಿರ್ ಔಷಧವನ್ನು ಆಕ್ಸಿಜನ್ ಸಪೋರ್ಟ್‌ನಲ್ಲಿರುವ ಸೋಂಕಿತರಿಗೆ ಬಳಸಬೇಕು. ಅದೊಂದು ಪ್ರಯೋಗಾತ್ಮಕ ಔಷಧಿಯಾಗಿದ್ದು, ಸೋಂಕಿತರು ತಾವಾಗಿಯೇ ಖರೀದಿಸಿ ಮನೆಯಲ್ಲಿ ಬಳಕೆ ಮಾಡಲು ಮುಂದಾಗಕೂಡದು. ಕೊರೊನಾ ಸೋಂಕಿತರು ಮೆಡಿಕಲ್ ಸ್ಟೋರ್, ಔಷಧ ಉತ್ಪಾದನಾ ಕಂಪನಿಯಿಂದ ರೆಮ್‌ಡೆಸಿವಿರ್ ಕೊಂಡು ಸ್ವತಃ ಬಳಕೆ ಮಾಡಬಾರದು ಎಂದು ತಿಳಿಸಿದ್ದಾರೆ. ಅದೇನಿದ್ದರೂ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದ ಸಹಾಯ ಪಡೆದ ರೋಗಿಗಳಿಗೆ ಬಳಸಬಹುದು. ಅದರ ಹೊರತಾಗಿ ಜನ ಸಾಮಾನ್ಯರು ಸ್ವಂತ ಉಪಯೋಗಕ್ಕಾಗಿ ಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೆಮ್‌ಡೆಸಿವಿರ್ ಔಷಧ ಉತ್ಪಾದನೆ ಹೆಚ್ಚಿಸಲು ನಿರ್ಧಾರ ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ರೆಮ್​ಡೆಸಿವರ್​ ಔಷಧಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆ, ಅದರ ಉತ್ಪಾದನೆಯನ್ನು 2 ಪಟ್ಟು ಹೆಚ್ಚಿಸಲು ಸಿಪ್ಲಾ ಸಂಸ್ಥೆ ನಿರ್ಧರಿಸಿದೆ. ದೇಶದಲ್ಲಿ ರೆಮ್‌ಡೆಸಿವಿರ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲು ಹೆಚ್ಚು ಉತ್ಪಾದನೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ರೆಮ್​ಡೆಸಿವಿರ್ ಔಷಧ, ಇಂಜೆಕ್ಷನ್ ರಫ್ತು ನಿಷೇಧ: ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳ

(People should not use Remdesivir by their own it is meant to be used in Hospitals says Dr VK Paul)

Published On - 12:27 pm, Wed, 14 April 21