
ಅಮೃತಸರ ಸೆಪ್ಟೆಂಬರ್ 20: ಭಾರತ ಸರ್ಕಾರದ ವಿರುದ್ಧ ಕೆನಡಾ (Canada) ಪ್ರಧಾನಿ ಮಾಡಿರುವ ಆರೋಪದ ಬಗ್ಗೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh) ಪ್ರತಿಕ್ರಿಯಿಸಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರ ಹೇಳಿಕೆ ತಪ್ಪು ಎಂದು ಬಿಜೆಪಿ ಹಿರಿಯ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರ ಸಾಹಿಬ್‌ನ ನಿರ್ವಾಹಕರ ನಡುವಿನ ಆಂತರಿಕ ಸಂಘರ್ಷದ ಪರಿಣಾಮವಾಗಿದೆ ಎಂದ ಸಿಂಗ್, ಟ್ರುಡೊ ಅವರ ಆರೋಪಗಳನ್ನು ತಿರಸ್ಕರಿಸಿದ್ದಾರೆ.
ಟ್ರುಡೊ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ಅವರು ಭಾರತ ಮತ್ತು ಕೆನಡಾ ನಡುವಿನ ಸಂಬಂಧಕ್ಕೆ ಅಪಾಯ ತಂದೊಡ್ಡಿದ್ದಾರೆ. ಯಾವುದೇ ದೇಶದ ಪ್ರಧಾನಿ ಸಾಕ್ಷ್ಯವಿಲ್ಲದೆ ಹೇಳಿಕೆ ನೀಡುವುದು ಅತ್ಯಂತ ಬೇಜವಾಬ್ದಾರಿ. ಅವರು ವೋಟ್ ಬ್ಯಾಂಕ್ ಗಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಕ್ಯಾಪ್ಟನ್ ಅಮರಿಂದರ್ ಹೇಳಿದ್ದಾರೆ.
The claims by the Canadian PM @JustinTrudeau that there was an Indian hand in the murder of Hardeep Singh Nijjer are completely baseless and he’s only playing to the vote bank gallery.
During his visit to Amritsar in 2018, I had brought to the notice of Mr Justin Trudeau as to…
— Capt.Amarinder Singh (@capt_amarinder) September 19, 2023
ಅಲ್ಲಿ ಭಾರತೀಯ ಜನರ ಮೇಲೆ ದಾಳಿ ನಡೆಸಲಾಯಿತು ಮತ್ತು ರಾಜತಾಂತ್ರಿಕರಿಗೆ ಬೆದರಿಕೆ ಹಾಕಲಾಯಿತು. ಆದರೆ ಕೆನಡಾ ಸರ್ಕಾರ ಯಾವುದೇ ಸರಿಪಡಿಸುವ ಕ್ರಮವನ್ನು ತೆಗೆದುಕೊಂಡಿಲ್ಲ. ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕೆನಡಾ ಸರ್ಕಾರ ಯಾವುದಾದರೂ ಕ್ರಮ ಕೈಗೊಂಡಿದೆಯೇ? ಇಂತಹ ಆರೋಪಗಳನ್ನು ಮಾಡುವ ಮೂಲಕ, ಟ್ರುಡೊ ತನ್ನ ದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸುವಲ್ಲಿ ಆದ ವೈಫಲ್ಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಸಿಂಗ್ ಹೇಳಿದ್ದಾರೆ
ಇದನ್ನೂ ಓದಿ: ನಿಜ್ಜರ್ ಹತ್ಯೆ ಪ್ರಕರಣ: ಭಾರತದ ವಿರುದ್ಧ ಗುದ್ದಾಡಲು ಸದಸ್ಯ ರಾಷ್ಟ್ರಗಳ ಬೆಂಬಲ ಕೇಳಿದ ಕೆನಡಾ
2018 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅಮೃತಸರದ ಹೋಟೆಲ್‌ನಲ್ಲಿ ಟ್ರುಡೊ ಅವರನ್ನು ಭೇಟಿಯಾದಾಗ, ಅವರೊಂದಿಗೆ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದೇನೆ ಎಂದು ಕ್ಯಾಪ್ಟನ್ ಹೇಳಿದರು. ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೆನಡಾದ ರಕ್ಷಣಾ ಸಚಿವ ಹರ್ಜಿತ್ ಸಿಂಗ್ ಸಜ್ಜನ್ ಭೇಟಿ ಮಾಡಲು ನಿರಾಕರಿಸಿದ್ದರು. ಸಜ್ಜನ್ ಅವರು ವರ್ಲ್ಡ್ ಸಿಖ್ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದು, ಅದು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ