ನೋಯ್ಡಾದಲ್ಲಿ 3,100 ರೂ ಸಾಲ ವಾಪಸ್ ಕೊಡಲಿಲ್ಲವೆಂದು ಬೆತ್ತಲೆ ಮೆರವಣಿಗೆ ಮಾಡಿಸಿದ ದುರುಳರು
Crime in Noida: ತಿಂಗಳ ಹಿಂದೆ ತೆಗೆದುಕೊಂಡ 5,600 ರೂ ಸಾಲದಲ್ಲಿ ಸುಮಾರು ಮೂರು ಸಾವಿರ ರೂ ಸಾಲ ಬಾಕಿ ಉಳಿಸಿಕೊಂಡಿದ್ದಕ್ಕೆ ಬೆಳ್ಳುಳ್ಳಿ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಎಸಗಿ ವಿವಸ್ತ್ರಗೊಳಿಸಿ ಸಾರ್ವಜನಿಕ ಸ್ಥಳದಲ್ಲಿ ಮೆರವಣಿಗೆ ಮಾಡಿಸಿದ ಘಟನೆ ನೋಯ್ಡಾದ ಸೆಕ್ಟರ್ 88ರ ತರಕಾರಿ ಮಾರುಕಟ್ಟೆ ಬಳಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ವೈರಲ್ ಆಗುತ್ತಿದ್ದ ಬೆನ್ನಲ್ಲೇ ಉತ್ತರಪ್ರದೇಶ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ.
ನವದೆಹಲಿ, ಸೆಪ್ಟೆಂಬರ್ 20: ಕ್ಷುಲ್ಲಕ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಘಟನೆ ದೆಹಲಿ ಸಮೀಪದ ನೋಯ್ಡಾದಲ್ಲಿ ಸಂಭವಿಸಿದೆ. ಕೇವಲ 3,100 ರೂ ಸಾಲವನ್ನು ಹಿಂದಿರುಗಲಿಲ್ಲ ಎಂಬ ಕಾರಣಕ್ಕೆ ತರಕಾರಿ ಮಾರುವ 35 ವರ್ಷದ ವ್ಯಕ್ತಿಯ (vegetable vendor) ಮೇಲೆ ಈ ದೌರ್ಜನ್ಯ ಎಸಗಲಾಗಿದೆ. ಉತ್ತರಪ್ರದೇಶಕ್ಕೆ ಸೇರಿದ ನೋಯ್ಡಾದಲ್ಲಿ ಈ ಘಟನೆ (Crime incident in Noida) ಸಂಭವಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬಾತ ಕಮಿಷನ್ ಏಜೆಂಟ್ ಅಗಿದ್ದಾನೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯೋದಲ್ಲಿ ವೈರಲ್ ಅದ ಬೆನ್ನಲ್ಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಪೂರ್ಣ ಸಾಲ ಕೊಡಲಿಲ್ಲವೆಂದು ದುರುಳರಿಂದ ಈ ಕೃತ್ಯ
ಪೊಲೀಸರು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, ಉತ್ತರಪ್ರದೇಶದ ಮೈನ್ಪುರಿ ಜಿಲ್ಲೆಯವನಾದ ವ್ಯಕ್ತಿ ನೋಯ್ಡಾ ಸೆಕ್ಟರ್ 88ರಲ್ಲಿರುವ ಹಣ್ಣು ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಗಾಡಿಯನ್ನು ಇಟ್ಟುಕೊಂಡಿರುತ್ತಾನೆ. ಈತ ತಿಂಗಳ ಹಿಂದೆ ಕಮಿಷನ್ ಏಜೆಂಟ್ವೊಬ್ಬನಿಂದ 5,600 ರೂ ಸಾಲ ಪಡೆದಿರುತ್ತಾನೆ.
ಇದನ್ನೂ ಓದಿ: ಎಗ್ ರೈಸ್ ಜೊತೆ ಕಬಾಬ್ ಕೇಳಿದ ಯುವಕ; ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಚಾಕುವಿನಿಂದ ಇರಿದು ಕೊಂದ
ಇದೇ ಸೋಮವಾರದಂದು (ಸೆ. 17) 2,500 ರೂ ಅನ್ನು ಕೊಟ್ಟು ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ತೀರಿಸುವುದಾಗಿ ಬೆಳ್ಳುಳ್ಳಿ ವ್ಯಾಪಾರಿ ಮನವಿ ಮಾಡಿದ್ದಾನೆ. ಪೂರ್ತಿ ಸಾಲ ತೀರಿಸಲಿಲ್ಲವೆಂದು ಸಿಟ್ಟುಗೊಂಡ ಕಮಿಷನ್ ಎಜೆಂಟ್ ತನ್ನ ಅಕೌಂಟೆಂಟ್ ಹಾಗೂ ಇಬ್ಬರು ಕೂಲಿಗಳನ್ನು ಕರೆಸಿ ಅಂಗಡಿಯೊಳಗೆ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿಸಿ ತುಚ್ಚವಾಗಿ ನಿಂದಿಸಿದ್ದಾರೆ.
ಬಳಿಕ ವ್ಯಾಪಾರಿಯನ್ನು ವಿವಸ್ತ್ರಗೊಳಿಸಿ ಹೊರಗೆ ಎಳೆದುಕೊಂಡು ಬರಲಾಗಿದೆ. ಈ ದೃಶ್ಯ ಇರುವ ವಿಡಿಯೋ ವೈರಲ್ ಆಗಿದೆ. ಸೋಮವಾರವೇ ಎಫ್ಐಅರ್ ದಾಖಲಾಗಿದೆ.
नोएडा की फल मंडी में लहसुन बेचने वाले अनिल को बदमाशों ने नंगा करके सरेआम घुमाया। उसका गुनाह बस इतना था कि उसने एक व्यक्ति से 5 हज़ार रुपये उधार लिए थे, जिसमें 3 हजार वो अभी नहीं लौटा पाया था।
सोचिये! 3 हज़ार रुपये के लिए इतनी बड़ी सज़ा…
3 हजार रुपये के लिए किसी के स्वाभिमान… pic.twitter.com/mILjkLX3rn
— UP Congress (@INCUttarPradesh) September 19, 2023
ಇದನ್ನೂ ಓದಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಮಾರಾಮಾರಿ
‘ಮುಖ್ಯ ಆರೋಪಿ ಸುಂದರ್ ಸಿಂಗ್ ಹಾಗೂ ಆತನ ಬಂಟ ಭಗನ್ದಾಸ್ ಸಿಂಗ್ ಅವರಿಬ್ಬರನ್ನು ಬಂಧಿಸಲಾಗಿದೆ. ತಪ್ಪಿಸಿಕೊಂಡಿರುವ ಇತರ ಅರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಡಿಸಿಪಿ ರಾಜೀವ್ ದೀಕ್ಷಿತ್ ಹೇಳಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Wed, 20 September 23