Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನ, ಟಿಹೆಚ್​ಒಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ವರ್ಗಾವಣೆ ವಿಚಾರವಾಗಿ ಮತನಾಡು ಮನೆಗೆ ಕರೆಯಿಸಿಕೊಂಡು ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ತಾಲೂಕು ವೈದ್ಯಾಧಿಕಾರಿಯನ್ನು ಹಿಡಿದು ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಕಾಮುಕ ವೈದ್ಯಾಧಿಕಾರಿ ಮಾತನಾಡಿದ ಅಸಭ್ಯ ಮಾತುಗಳ ಆಡಿಯೋ ಸಹ ಟಿವಿ9ಗೆ ಲಭ್ಯವಾಗಿವೆ.

ಆಸ್ಪತ್ರೆ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನ, ಟಿಹೆಚ್​ಒಗೆ  ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಟಿಹೆಚ್​ಒ ಡಾ.ಎಲ್ಡೋಸ್ ಟಿ.ವರ್ಗೀಸ್
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on:Sep 20, 2023 | 1:34 PM

ಚಿಕ್ಕಮಗಳೂರು, (ಸೆಪ್ಟೆಂಬರ್ 20): ಆಸ್ಪತ್ರೆಯ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ(Rape) ಯತ್ನಿಸಿದ ಟಿಹೆಚ್​ಒನನ್ನು ಸ್ಥಳೀಯರು ಹಿಡಿದು ಥಳಿಸಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ವರ್ಗಾವಣೆ ವಿಚಾರವಾಗಿ ಟಿಹೆಚ್​ಒ ಡಾ.ಎಲ್ಡೋಸ್ ಟಿ.ವರ್ಗೀಸ್ ಎನ್ನುವಾತ ಮಾತನಾಡಲು ತಾನು ವಾಸವಿದ್ದ ಕ್ವಾಟ್ರಸ್​ಗೆ ಕರೆಯಿಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದ್ರೆ, ಮಹಿಳಾ ಸಿಬ್ಬಂದಿ ಅಲ್ಲಿಂದ ತಪ್ಪಿಸಿಕೊಂಡು ಆಚೆ ಬಂದು ಸ್ಥಳೀಯರಿಗೆ ಹೇಳಿದ್ದಾರೆ. ಬಳಿಕ ಸ್ಥಳೀಯರು ಹೋಗಿ ಟಿಹೆಚ್​ಒ ಡಾ.ಎಲ್ಡೋಸ್ ಟಿ.ವರ್ಗೀಸ್ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯ ಡಿ ದರ್ಜೆ ಮಹಿಳಾ ಸಿಬ್ಬಂದಿ ಇತ್ತೀಚೆಗೆ ಕಳಸ ಆಸ್ಪತ್ರೆಗೆ ವರ್ಗಾವಣೆಯಾಗಿದ್ದರು. ಈ ಸಂಬಂಧ ಮಾತನಾಡುವ ಬಗ್ಗೆ ಸರ್ಕಾರಿ ನಿವಾಸಕ್ಕೆ ಕರೆಯಿಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇನ್ನು THO ಡಾ.ಎಲ್ಡೋಸ್ ಟಿ.ವರ್ಗೀಸ್, ಡಿ ದರ್ಜೆ ನೌಕರಳ ಜೊತೆ ಅಸಭ್ಯವಾಗಿ ಮಾತನಾಡಿದ ಆಡಿಯೋ, ವಾಟ್ಸಪ್ ಸ್ಕ್ರೀನ್ ಶಾಟ್ TV9ಗೆ ಲಭ್ಯವಾಗಿವೆ. ಇನ್ನು ಈ ಸಂಬಂಧ ಬಾಳೆಹೊನ್ನೂರು ಠಾಣೆಯ ಪೊಲೀಸರು ಎನ್ ಅರ್ ಪುರ ತಾಲೂಕು ವೈದ್ಯಧಿಕಾರಿ ಡಾ.ಎಲ್ಡೋಸ್ ಟಿ.ವರ್ಗೀಸ್ ನನ್ನು ಬಂಧಿಸಿದ್ದು, ಅತ್ಯಾಚಾರಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ರಾಯಚೂರು: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು, ಪತಿ ಕುಟುಂಬಸ್ಥರ ಮೇಲೆ ಆರೋಪ

ಬಾಲಕಿ ಅಪರಣ ದೌರ್ಜನ್ಯ ಪ್ರಕರಣ ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ

ದಾವಣಗೆರೆ: ಬಾಲಕಿ ಅಪರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಪೋಕ್ಸೊ) ನ್ಯಾಯಾಲಯ ತೀರ್ಪು ನೀಡಿದೆ. 24 ವರ್ಷದ ಯುವಕನೋರ್ವ, ಶಾಲೆಯಲ್ಲಿದ್ದ ಬಾಲಕಿಗೆ ಸುಳ್ಳು ಹೇಳಿ ಅಪಹರಿಸಿ ಚಿತ್ರದುರ್ಗ ಹಾಗೂ ಭದ್ರಾವತಿಯಲ್ಲಿನ ಸಂಬಂಧಿಕರ ಮನೆಯಲ್ಲಿ ಬಚ್ಚಿಟ್ಟಿದ್ದ. ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 2018 ಜನವರಿ 22 ರಂದು ನಡೆದ ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿ ನ್ಯಾಮತಿ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ಆರೋಪನಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಪಾದ ಎನ್, ಆರೋಪಿಗೆ ಐದು ವರ್ಷ ಹಾಗೂ 12 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸಂತ್ರಸ್ತ ಬಾಲಕಿಗೆ ಸರ್ಕಾರದಿಂದ ಒಂದು ಲಕ್ಷ ರೂಪಾಯಿ‌ ಪರಿಹಾರ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತ ಬಾಲಕಿ ಪರ ಸರ್ಕಾರಿ ಅಭಿಯೋಜಕಿ ಸುನಂದ ಮಡಿವಾಳ ವಾದ ಮಂಡಿಸಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Wed, 20 September 23