ನಿಜ್ಜರ್ ಹತ್ಯೆ ಪ್ರಕರಣ: ಭಾರತದ ವಿರುದ್ಧ ಗುದ್ದಾಡಲು ಸದಸ್ಯ ರಾಷ್ಟ್ರಗಳ ಬೆಂಬಲ ಕೇಳಿದ ಕೆನಡಾ

ಕೆನಡಾದ ಒಂದೊಂದೇ ಮುಖವಾಡಗಳು ಕಳಚುತ್ತಿದೆ. ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತದ ವಿರುದ್ಧ ಬಹಿರಂಗವಾಗಿ ಆರೋಪ ಮಾಡುವ ಒಂದು ವಾರದ ಮೊದಲು, ತನ್ನ ಮಿತ್ರರಾಷ್ಟ್ರಗಳ ಬೆಂಬಲವನ್ನು ಕೇಳಿದ್ದರು ಎಂದು ಹೇಳಿದೆ. ಅನಾಮಧೇಯ ಪಾಶ್ಚಿಮಾತ್ಯ ಅಧಿಕಾರಿಗಳನ್ನು ನಮಗೆ ಬೆಂಬಲಿಸುವಂತೆ ಸಂಪರ್ಕಿಸಿದ್ದಾರೆ. ಆದರೆ ಇದಕ್ಕೆ ಆ ಮಿತ್ರರಾಷ್ಟ್ರಗಳ ಅಧಿಕಾರಿಗಳು ಒಪ್ಪಿಲ್ಲ ಎಂದು ಈ ವರದಿ ಹೇಳಿದೆ.

ನಿಜ್ಜರ್ ಹತ್ಯೆ ಪ್ರಕರಣ: ಭಾರತದ ವಿರುದ್ಧ ಗುದ್ದಾಡಲು ಸದಸ್ಯ ರಾಷ್ಟ್ರಗಳ ಬೆಂಬಲ ಕೇಳಿದ ಕೆನಡಾ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Sep 20, 2023 | 11:44 AM

ಒಟ್ಟಾವಾ, ಸೆ.20: ಕೆನಡಾ ಮತ್ತು ಭಾರತ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ (Hardeep Singh Nijjar) ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೇಲೆ ಆರೋಪ ಮಾಡುತ್ತಿರುವ ಕೆನಡಾದ ಮುಖವಾಡ ದಿನೇ ದಿನೇ ಒಂದೊಂದೇ ಕಳಚುತ್ತಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಎರಡು-ಮೂರು ದಿನದಿಂದ ಮಾತಿನಲ್ಲೇ ಭಾರತದ ವಿರುದ್ಧ ಸಮರ ಸಾರುತ್ತಿದ್ದಾರೆ. ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತವೇ ಕಾರಣ, ಈ ಹತ್ಯೆಯಲ್ಲಿ ಭಾರತದ ಏಜೆಂಟ್​​ಗಳ ಕೈವಾಡ ಇದೆ ಎಂದು ಹೇಳುತ್ತಿದೆ. ಆದರೆ ಈ ಆರೋಪವನ್ನು ಭಾರತ ಖಂಡಿಸಿದೆ. ಇದೀಗ ಕೆನಡಾದ ಒಂದೊಂದೇ ಮುಖವಾಡಗಳು ಕಳಚುತ್ತಿದೆ. ಹೌದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿರುವ ಪ್ರಕಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತದ ವಿರುದ್ಧ ಬಹಿರಂಗವಾಗಿ ಆರೋಪ ಮಾಡುವ ಒಂದು ವಾರದ ಮೊದಲು, ತನ್ನ ಮಿತ್ರರಾಷ್ಟ್ರಗಳ ಬೆಂಬಲವನ್ನು ಕೇಳಿದ್ದರು ಎಂದು ಹೇಳಿದೆ. ಅನಾಮಧೇಯ ಪಾಶ್ಚಿಮಾತ್ಯ ಅಧಿಕಾರಿಗಳನ್ನು ನಮಗೆ ಬೆಂಬಲಿಸುವಂತೆ ಸಂಪರ್ಕಿಸಿದ್ದಾರೆ. ಆದರೆ ಇದಕ್ಕೆ ಆ ಮಿತ್ರರಾಷ್ಟ್ರಗಳ ಅಧಿಕಾರಿಗಳು ಒಪ್ಪಿಲ್ಲ ಎಂದು ಈ ವರದಿ ಹೇಳಿದೆ.

ಇನ್ನು ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಹರ್ದೀಪ್ ಸಿಂಗ್ ನಿಜ್ಜರ್ (45) ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ. ಜೂನ್ 18ರಂದು ಪಶ್ಚಿಮ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಗುಂಡು ಹಾರಿ ಹತ್ಯೆ ಮಾಡಿದ್ದರು. ಇನ್ನು ಈ ಹತ್ಯೆ ಬಗ್ಗೆ ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲೂ ಪ್ರಸ್ತಾಪಿಸಲಾಗಿತ್ತು.

ಇದೀಗ ಈ ಹತ್ಯೆಯಲ್ಲಿ ಭಾರತ ಸರ್ಕಾರಕ್ಕೆ ಸಂಬಂಧಿಸಿದ ಏಜೆಂಟ್​​ಗಳ ಕೈವಾಡ ಇದೆ ಎಂದು ಕೆನಡಾ ಮೊಂಡುವಾದ ಮಾಡುತ್ತಿದೆ. ಇದರ ಜತೆಗೆ ಕೆನಡಾದಲ್ಲಿರುವ ಭಾರತೀಯ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿದೆ. ಇದಕ್ಕೆ ಪ್ರತ್ಯೋತ್ತರವಾಗಿ ಭಾರತ ಕೂಡ ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕರನ್ನು ಉಚ್ಚಾಟಿಸಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಅಧಿಕಾರಿಗಳು ತಿಳಿಸಿರುವ ಪ್ರಕಾರ ನಾವು ಯುಎಸ್​​ ಜತೆಗೆ ನಿಕಟ ಸಂಪರ್ಕ ಹೊಂದಿದ್ದೇವೆ. ಈ ಬಗ್ಗೆ ಅವರಿಗೂ ಸಷ್ಟನೆಯನ್ನು ನೀಡುತ್ತೇವೆ” ಎಂದು ಹೇಳಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ನಿಜ್ಜಾರ್ ಹತ್ಯೆ ಪ್ರಕರಣ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬಹಿರಂಗ ಆರೋಪಕ್ಕೆ ಕಳವಳ ವ್ಯಕ್ತಪಡಿಸಿದ ಯುಎಸ್​​​

ಇನ್ನು ಭಾರತ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೇಳಿಕೆ ಅಸಂಬದ್ಧ ಎಂದು ಹೇಳಿದೆ. ಕೆನಡಾ ಸರ್ಕಾರವು ಕೆನಡಾದಲ್ಲಿರುವ ಭಾರತ ವಿರೋಧಿ ಅಂಶಗಳ ವಿರುದ್ಧ ತ್ವರಿತ ಮತ್ತು ಪರಿಣಾಮಕಾರಿ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಈ ಹತ್ಯೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು “ನಾವು ಯಾರನ್ನು ಪ್ರಚೋದಿಸುತ್ತಿಲ್ಲ , ಕೆನಡಾ ರಾಜಧಾನಿ ಒಟ್ಟಾವಾದಲ್ಲಿ ನಡೆದ ಈ ಸಮಸ್ಯೆಗೆ ಭಾರತ ಸಮರ್ಪಕವಾಗಿ ಉತ್ತರಬೇಕು. ಜತೆಗೆ ಈ ಸಮಸ್ಯೆಯನ್ನು ಪರಿಹಾರಿಸುವ ಎಲ್ಲ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ಹತ್ಯೆಯನ್ನು ಭಾರತದ ತಲೆಯ ಮೇಲೆ ಕಟ್ಟಲು, ಕೆನಡಾ ಮಾಡಿರುವ ಆರೋಪದ ಬಗ್ಗೆ US, UK, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಒಳಗೊಂಡಂತೆ ಒಕ್ಕೂಟದ ಸದಸ್ಯರು ಕಳವಳ ವ್ಯಕ್ತಪಡಿಸಿದೆ. ಭಾರತದ ಮೇಲೆ ಮಾಡಿರುವ ಈ ಆರೋಪದ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಇನ್ನು ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾ ಮಾಡುತ್ತಿರುವ ತನಿಖೆಯನ್ನು ಬೆಂಬಲಿಸುತ್ತೇವೆ ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಹೇಳಿದ್ದಾರೆ. ಕೆನಡಾದ ಈ ಆರೋಪಕ್ಕೆ ಆಸ್ಟ್ರೇಲಿಯಾ ತುಂಬಾ ಕಳವಳ ವ್ಯಕ್ತಪಡಿಸಿದ್ದು, ಸರಿಯಾದ ತನಿಖೆಯನ್ನು ಮಾಡಲಿ, ಎಲ್ಲಾ ದೇಶಗಳು ಸಾರ್ವಭೌಮತ್ವ ಮತ್ತು ಕಾನೂನಿನ ನಿಯಮವನ್ನು ಗೌರವಿಸಬೇಕು ಎಂದು ಆಸ್ಟ್ರೇಲಿಯಾ ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:37 am, Wed, 20 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ