Navjot Singh Sidhu: 10 ತಿಂಗಳ ನಂತರ ಪಟಿಯಾಲ ಜೈಲಿನಿಂದ ನವಜೋತ್ ಸಿಂಗ್ ಸಿಧು ಇಂದು ಬಿಡುಗಡೆ

|

Updated on: Apr 01, 2023 | 12:45 PM

ಸಿಧು ಬಿಡುಗಡೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಅವರ ಪುತ್ರ ಕರಣ್ ಸಿಧು ಹೇಳಿದ್ದಾರೆ.ಮೂಲಗಳ ಪ್ರಕಾರ, ಬಿಡುಗಡೆಯಾದ ನಂತರ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಿದ್ಧತೆ ನಡೆಸುತ್ತಿದ್ದಾರೆ.

Navjot Singh Sidhu: 10 ತಿಂಗಳ ನಂತರ ಪಟಿಯಾಲ ಜೈಲಿನಿಂದ ನವಜೋತ್ ಸಿಂಗ್ ಸಿಧು ಇಂದು ಬಿಡುಗಡೆ
ನವಜೋತ್ ಸಿಂಗ್ ಸಿಧು
Follow us on

ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ರಸ್ತೆ ಜಗಳ  (Road rage)ಪ್ರಕರಣದಲ್ಲಿ 10 ತಿಂಗಳ ಕಠಿಣ ಜೈಲುವಾಸದ ನಂತರ ಪಟಿಯಾಲಾ ಜೈಲಿನಿಂದ (Patiala jail) ಹೊರಬರಲು ಸಜ್ಜಾಗಿದ್ದಾರೆ. ಬಿಡುಗಡೆಯಾದ ಬಳಿಕ ಶನಿವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವುದಾಗಿ  ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸಿಧು ಅವರ ಅಧಿಕೃತ ಖಾತೆಯ ಟ್ವೀಟ್‌ನಲ್ಲಿ ಅವರು ಮಧ್ಯಾಹ್ನದ ಹೊತ್ತಿಗೆ ಜೈಲಿನ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದೆ. 1988ರಲ್ಲಿ 65 ವರ್ಷದ ಗುರ್ನಾಮ್ ಸಿಂಗ್ ಸಾವಿಗೆ ಕಾರಣವಾದ ರಸ್ತೆ ರಂಪಾಟ ಪ್ರಕರಣದಲ್ಲಿ ಸಿಧು ದೋಷಿ ಎಂದು ತೀರ್ಪು ನೀಡಲಾಯಿತು. 59 ವರ್ಷದ ಮಾಜಿ ಕ್ರಿಕೆಟಿಗ-ರಾಜಕಾರಣಿಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತು. ಕಳೆದ ವರ್ಷ ಮೇ 20 ರಂದು ಜೈಲು ಶಿಕ್ಷೆಗೊಳಗಾಗಿದ್ದ ಸಿಧು ಒಳ್ಳೆಯ ನಡತೆಯಿಂದಾಗಿ ಶಿಕ್ಷೆಯ ಅವಧಿಗಿಂತ ಮುನ್ನ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರ ವಕೀಲರು ಹೇಳಿದ್ದಾರೆ.

ಶುಕ್ರವಾರ ನವಜೋತ್ ಸಿಧು ಅವರ ಖಾತೆಯಿಂದ ಟ್ವೀಟ್‌ನಲ್ಲಿ,ಸರ್ದಾರ್ ನವಜೋತ್ ಸಿಂಗ್ ಸಿಧು ಅವರು ನಾಳೆ ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂಬುದನ್ನುಈ ಮೂಲಕ ಎಲ್ಲರಿಗೂ ತಿಳಿಸುತ್ತಿದ್ದೇವೆ ಎಂದು ಹೇಳಲಾಗಿತ್ತು.

ಸಿಧು ಬಿಡುಗಡೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಅವರ ಪುತ್ರ ಕರಣ್ ಸಿಧು ಹೇಳಿದ್ದಾರೆ.ಮೂಲಗಳ ಪ್ರಕಾರ, ಬಿಡುಗಡೆಯಾದ ನಂತರ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಿದ್ಧತೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಡಿಸೆಂಬರ್ 27, 1988 ರಂದು ಸಿಧು ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರೊಂದಿಗೆ ಪಾರ್ಕಿಂಗ್ ಸ್ಥಳದ ಬಗ್ಗೆ ಜಗಳವಾಡಿದರು. ಸಿಧು ಮತ್ತು ಅವರ ಸಹವರ್ತಿ ರೂಪಿಂದರ್ ಸಿಂಗ್ ಸಂಧು ಅವರು ಗುರ್ನಾಮ್ ಸಿಂಗ್ ಅವರನ್ನು ಅವರ ಕಾರಿನಿಂದ ಎಳೆದುಕೊಂಡು ಹೊಡೆದಿದ್ದುಗುರ್ನಾಮ್ ಸಾವಿಗೀಡಾಗಿದ್ದರು. 1999 ರಲ್ಲಿ, ಪಟಿಯಾಲದ ಸೆಷನ್ಸ್ ನ್ಯಾಯಾಲಯವು ಸಿಧು ಮತ್ತು ಅವರ ಸಹಚರರನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಖುಲಾಸೆ ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ 2006 ರಲ್ಲಿ ಸಿಧುವನ್ನು ತಪ್ಪಿತಸ್ಥ ನರಹತ್ಯೆಯ ಅಪರಾಧಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. 2018 ರಲ್ಲಿ ಸಿಧು ಸುಪ್ರೀಂಕೋರ್ಟ್‌ ಮೊರೆ ಹೋದರು. ಒಂದೇ ಏಟಿಗೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಯಾವುದೇ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹಿರಿಯ ನಾಗರಿಕರಿಗೆ ನೋವುಂಟು ಮಾಡಿದ ಕಾರಣಕ್ಕೆ ಸಿಧುವನ್ನು ತಪ್ಪಿತಸ್ಥ ಎಂದು ಪರಿಗಣಿಸಿತು. ಸಿಧುಗೆ ಜೈಲು ಶಿಕ್ಷೆ ಮತ್ತು ₹ 1,000 ದಂಡ ವಿಧಿಸಲಾಯಿತು.

ಸಿಧು ಅವರ ಸಹಾಯಕ ರೂಪಿಂದರ್ ಸಂಧು ಅವರು ಸ್ಥಳದಲ್ಲಿ ಹಾಜರಿದ್ದಕ್ಕೆ ಸರಿಯಾದ ಪುರಾವೆಗಳಿಲ್ಲ ಎಂದು ಸುಪ್ರೀಂಕೋರ್ಟ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Sat, 1 April 23