ಸಚಿವರ ಪಿಎ ಎಂದು ಉದ್ಯಮಿಗೆ ವಂಚನೆ: ಮಾಜಿ ರಣಜಿ ಆಟಗಾರನ ಬಂಧನ

|

Updated on: Mar 06, 2021 | 2:47 PM

ನಾಗರಾಜು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಗೆ ಸೇರಿದವರಾಗಿದ್ದು, 25 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಇದೇ ಅಪರಾಧ ಎಸಗಿದ್ದಕ್ಕಾಗಿ ಈ ಹಿಂದೆ ಅವರನ್ನು ಬಂಧಿಸಲಾಗಿತ್ತು.

ಸಚಿವರ ಪಿಎ ಎಂದು ಉದ್ಯಮಿಗೆ ವಂಚನೆ: ಮಾಜಿ ರಣಜಿ ಆಟಗಾರನ ಬಂಧನ
ಮಾಜಿ ರಣಜಿ ಆಟಗಾರ ನಾಗರಾಜು ಬುದುಮುರು
Follow us on

ಹೈದರಾಬಾದ್: ಐಟಿ ಮತ್ತು ಪುರಸಭೆ ಆಡಳಿತ ಸಚಿವ ಕೆ ತಾರಕ ರಾಮ ರಾವ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಉದ್ಯಮಿಗಳನ್ನು ವಂಚಿಸಿದಕ್ಕಾಗಿ, ಆಂಧ್ರ ಪ್ರದೇಶದ ರಣಜಿ ಆಟಗಾರ ನಾಗರಾಜು ಬುದುಮುರು ಅವರನ್ನು ಹೈದರಾಬಾದ್ ಪೊಲೀಸರು ಮತ್ತೊಮ್ಮೆ ಬಂಧಿಸಿದ್ದಾರೆ.

ನಾಗರಾಜು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಗೆ ಸೇರಿದವರಾಗಿದ್ದು, 25 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಇದೇ ಅಪರಾಧ ಎಸಗಿದ್ದಕ್ಕಾಗಿ ಈ ಹಿಂದೆ ಅವರನ್ನು ಬಂಧಿಸಲಾಗಿತ್ತು. ಹಲವಾರು ಖಾಸಗಿ ಸಂಸ್ಥೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಲು ಶಿಕ್ಷೆ ಅನುಭವಿಸಿದರೂ ಅವನು ತನ್ನ ನಡವಳಿಕೆಯನ್ನು ಬದಲಾಯಿಸಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:KPL ಮೋಸದಾಟ: ಮಾಜಿ ರಣಜಿ ಆಟಗಾರ CCB ವಶಕ್ಕೆ

Published On - 2:46 pm, Sat, 6 March 21