AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ದೇಬ್ ಪೂರ್ವಜರ ಮನೆಗೆ ಬೆಂಕಿ ಹಚ್ಚಿ ದಾಳಿ; ಕಾರು, ಬೈಕ್​ಗಳ ಧ್ವಂಸ

ಬಿಪ್ಲಬ್ ದೇಬ್ ಅವರ ತಂದೆ ದಿವಂಗತ ಹಿರುಧನ್ ದೇಬ್ ಅವರ ಪುಣ್ಯಸ್ಮರಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ದುಷ್ಕರ್ಮಿಗಳ ಗುಂಪೊಂದು ಮನೆಯ ಹೊರಗೆ ನಿಲ್ಲಿಸಿದ್ದ ಕಾರು, ಬೈಕ್ ಗಳ ಮೇಲೆ ಏಕಾಏಕಿ ದಾಳಿ ನಡೆಸಿ ಧ್ವಂಸಗೊಳಿಸಿದೆ.

ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ದೇಬ್ ಪೂರ್ವಜರ ಮನೆಗೆ ಬೆಂಕಿ ಹಚ್ಚಿ ದಾಳಿ; ಕಾರು, ಬೈಕ್​ಗಳ ಧ್ವಂಸ
ಬಿಪ್ಲಬ್ ದೇಬ್ ಪೂರ್ವಜರ ಮನೆಗೆ ಬೆಂಕಿImage Credit source: Twitter
TV9 Web
| Updated By: ಸುಷ್ಮಾ ಚಕ್ರೆ|

Updated on: Jan 04, 2023 | 8:40 AM

Share

ನವದೆಹಲಿ: ತ್ರಿಪುರಾದ (Tripura) ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ (Biplab Deb) ಅವರ ಪೂರ್ವಜರ ಮನೆಯ ಮೇಲೆ ಮಂಗಳವಾರ ಸಂಜೆ ಸಿಪಿಐಎಂ ಬೆಂಬಲಿತ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಪ್ಲಬ್ ದೇಬ್ ಅವರ ತಂದೆ ಹಿರುಧನ್ ದೇಬ್ ಅವರ ಸ್ಮರಣಾರ್ಥ ಪ್ರತಿ ವರ್ಷ ನಡೆಯುವ ಆಚರಣೆಗೂ ಒಂದು ದಿನ ಮುಂಚಿತವಾಗಿ ಈ ಘಟನೆ ನಡೆದಿದೆ.

ಬಿಪ್ಲಬ್ ದೇಬ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ನಂತರ ಅಂಗಡಿ ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನೆಗೆ ಬೆಂಕಿ ಹಚ್ಚಿದವರು ಸಿಪಿಐಎಂ ಬೆಂಬಲಿಗರು ಎಂದು ಬಿಜೆಪಿ ಆರೋಪಿಸಿದೆ. ಅದೃಷ್ಟವಶಾತ್ ಈ ದಾಳಿ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ನಿಂತಿದ್ದ ಬಸ್​ಗಳಿಗೆ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ SRS ಟ್ರಾವೆಲ್ಸ್​​ನ 3 ಬಸ್​ಗಳು

ಈ ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳನ್ನೂ ವಿಚಾರಣೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, ಇಂದು (ಜ. 4) ನಡೆಯಲಿರುವ ಬಿಪ್ಲಬ್ ದೇಬ್ ಅವರ ತಂದೆಯ ಪುಣ್ಯತಿಥಿಗೂ ಮೊದಲು ಈ ದಾಳಿಯನ್ನು ನಡೆಸಲು ಮೊದಲೇ ಪ್ಲಾನ್ ಮಾಡಲಾಗಿತ್ತು.

ಬಿಪ್ಲಬ್ ದೇಬ್ ಅವರ ತಂದೆ ದಿವಂಗತ ಹಿರುಧನ್ ದೇಬ್ ಅವರ ಪುಣ್ಯಸ್ಮರಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ದುಷ್ಕರ್ಮಿಗಳ ಗುಂಪೊಂದು ಮನೆಯ ಹೊರಗೆ ನಿಲ್ಲಿಸಿದ್ದ ಕಾರು, ಬೈಕ್ ಗಳ ಮೇಲೆ ಏಕಾಏಕಿ ದಾಳಿ ನಡೆಸಿ ಧ್ವಂಸಗೊಳಿಸಿದೆ. ಸಿಪಿಐಎಂ ಶಾಸಕ ರತನ್ ಭೌಮಿಕ್ ಅವರು ಆ ಪ್ರದೇಶದಲ್ಲಿ ಸಂಘಟನಾ ಸಭೆ ನಡೆಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಈ ಘಟನೆ ಕುರಿತು ತನಿಖೆ ಮುಂದುವರೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ