ಭಾರತ್ ಜೋಡೋ ವೇದಿಕೆ ಮೇಲೆ ತಂಗಿ ಪ್ರಿಯಾಂಕಾ ಗಾಂಧಿಗೆ ಮುತ್ತಿಟ್ಟ ರಾಹುಲ್ ಗಾಂಧಿ; ಅಣ್ಣ-ತಂಗಿಯ ಪ್ರೀತಿಗೆ ನೆಟ್ಟಿಗರು ಫಿದಾ
ಭಾರತ್ ಜೋಡೋ ಯಾತ್ರೆಯ ವೇದಿಕೆ ಮೇಲೆ ರಾಹುಲ್ ಗಾಂಧಿ ಅವರು ತಮಗಿಂತ 2 ವರ್ಷ ಚಿಕ್ಕವರಾದ ತಂಗಿ ಪ್ರಿಯಾಂಕಾರಿಗೆ ಅಪ್ಪಿ ಸಿಹಿ ಮುತ್ತುಗಳನ್ನು ನೀಡಿರುವ ವಿಡಿಯೋ ವೈರಲ್ ಆಗಿದೆ.
ದೆಹಲಿ: ಭಾರತ್ ಜೋಡೋ ಯಾತ್ರೆ(Bharat Jodo Yatra) ದೆಹಲಿಯಿಂದ ಉತ್ತರ ಪ್ರದೇಶ ಪ್ರವೇಶಿಸಿದಂತೆ ಲೋನಿ ಗಡಿಯಲ್ಲಿ ಯಾತ್ರೆಯನ್ನು ಬರಮಾಡಿಕೊಂಡಿದ್ದ ಪ್ರಿಯಾಂಕಾ ಗಾಂಧಿಯವರು(Priyanka Gandhi) ತಮ್ಮ ಸಹೋದರನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದರು. ದೇಶದಲ್ಲಿ ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ಕೈಗಾರಿಕೋದ್ಯಮಿಗಳು ಅನೇಕ ರಾಜಕಾರಣಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಮಾಧ್ಯಮಗಳನ್ನು ಖರೀದಿಸಿರಬಹುದು. ಆದರೆ ತಮ್ಮ ಸಹೋದರನನ್ನು ಎಂದಿಗೂ ಖರೀದಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ(Rahul Gandhi) ಓರ್ವ ಯೋಧ ಎಂದು ಬಣ್ಣಿಸಿದ್ದರು. ಸದ್ಯ ಈಗ ಮತ್ತೊಮ್ಮೆ ಅಣ್ಣ-ತಂಗಿಯ ನಡುವಿನ ಪ್ರೀತಿ ಬಹಿರಂಗವಾಗಿದೆ.
ಭಾರತ್ ಜೋಡೋ ಯಾತ್ರೆಯ ವೇದಿಕೆ ಮೇಲೆ ರಾಹುಲ್ ಗಾಂಧಿ ಅವರು ತಮಗಿಂತ 2 ವರ್ಷ ಚಿಕ್ಕವರಾದ ತಂಗಿ ಪ್ರಿಯಾಂಕಾರಿಗೆ ಅಪ್ಪಿ ಸಿಹಿ ಮುತ್ತುಗಳನ್ನು ನೀಡಿರುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು ಇದು ಎಲ್ಲೆಡೆ ವೈರಲ್ ಆಗುತ್ತಿದೆ. ನೆಟ್ಟಿಗರು ಅಣ್ಣ-ತಂಗಿಯ ಪ್ರೀತಿ, ಬಾಂಧವ್ಯಕ್ಕೆ ಫಿದಾ ಆಗಿದ್ದಾರೆ.
ಇದನ್ನೂ ಓದಿ: Bharat Jodo Yatra: 3,000 ಕಿ.ಮೀ. ಕ್ರಮಿಸಿ ಉತ್ತರ ಪ್ರದೇಶಕ್ಕೆ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದಲ್ಲಿ “ಭಾರತ್ ಜೋಡೋ ಯಾತ್ರೆ”ಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿಯವರೊಂದಿಗೆ ಸೇರಿಕೊಂಡರು. ಬಳಿಕ ಭಾರತ್ ಜೋಡೋ ಯಾತ್ರೆ ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ತಂಗಿಯ ಭುಜದ ಮೇಲೆ ಕೈಯಿಟ್ಟು ಏನೋ ಹೇಳಿದರು. ಆಗ ಪ್ರಿಯಾಂಕಾ ಗಾಂಧಿ ವಾದ್ರಾ ಮುಗುಳ್ನಕ್ಕರು. ನಂತರ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಅವರನ್ನು ತಮ್ಮ ಹತ್ತಿರ ಎಳೆದುಕೊಂಡು, ಅಪ್ಪಿ ಅವರ ಕೆನ್ನೆಗಳಿಗೆ ಮುತ್ತಿಟ್ಟು ನಕ್ಕರು. ಈ ಪ್ರೀತಿಯ ಕ್ಷಣಗಳನ್ನು ವ್ಯಕ್ತಪಡಿಸುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
❤️❤️ pic.twitter.com/9MIQKMIdAQ
— Congress (@INCIndia) January 3, 2023
ಈ ವಿಡಿಯೋಗೆ ಇತ್ತೀಚೆಗೆ ಅಕ್ಷಯ್ ಕುಮಾರ್ ನಟಿಸಿದ “ರಕ್ಷಾ ಬಂಧನ್” ಚಿತ್ರದ ‘ಮೈ ರಹೂನ್ ನಾ ತೇರೆ ಬಿನಾ’ (‘ನೀನಿಲ್ಲದೆ ಬದುಕಲು ಬಯಸುವುದಿಲ್ಲ’) ಹಾಡನ್ನು ಬಳಸಿದೆ. ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ ಈ ಹಾಡು ಅಣ್ಣ-ತಂಗಿಯ ಬಾಂಧವ್ಯದ ಕುರಿತಾಗಿದೆ.
ಇನ್ನು ರಾಹುಲ್ ಗಾಂಧಿಯವರು ಕಳೆದ ವರ್ಷ ರಕ್ಷಾ ಬಂಧನದಂದು, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಹಾಗೂ ತಂಗಿಯ ಫೋಟೋಗಳನ್ನು ಹಂಚಿಕೊಂಡು ಹೀಗೆ ಬರೆದಿದ್ದರು, “ನನ್ನ ಸಹೋದರಿ ಪ್ರಿಯಾಂಕಾ ಮತ್ತು ನಾನು ನಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಒಟ್ಟಿಗೆ ನೋಡಿದ್ದೇವೆ ಮತ್ತು ಯಾವಾಗಲೂ ಪರಸ್ಪರ ಧೈರ್ಯ ಮತ್ತು ಶಕ್ತಿಯಾಗಿದ್ದೇವೆ. ಇಂದು ರಾಖಿ ದಿನದಂದು, ಪ್ರತಿಯೊಬ್ಬ ಸಹೋದರ ಸಹೋದರಿಯರ ನಡುವಿನ ಪ್ರೀತಿ ಶಾಶ್ವತವಾಗಿ ಉಳಿಯಬೇಕೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:16 am, Wed, 4 January 23