ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದು

|

Updated on: Feb 17, 2021 | 3:52 PM

MJ Akbar-Priya Ramani Case: ರಮಣಿ ನನ್ನ ಮರ್ಯಾದೆಯನ್ನು ಕಳೆದಿದ್ದಾರೆ ಎಂದು ಆರೋಪಿಸಿ ಅಕ್ಬರ್​ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ತೀರ್ಪು ನೀಡಿದೆ.

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದು
ಎಂ.ಜೆ.ಅಕ್ಬರ್ ಮತ್ತು ಪ್ರಿಯಾ ರಮಣಿ
Follow us on

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್​ ರದ್ದು ಮಾಡಿದೆ. ತನಗಾದ ಕಹಿ ಅನುಭವವನ್ನು ಹಲವು ವರ್ಷಗಳ ನಂತರವೂ ವ್ಯಕ್ತಪಡಿಸುವ ಹಕ್ಕನ್ನು ಮಹಿಳೆ ಹೊಂದಿದ್ದಾಳೆ ಎಂದು ಕೋರ್ಟ್​ ಹೇಳಿದೆ.

2018ರಲ್ಲಿ #Metoo ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರರಂಗದವರು ಸೇರಿ ಅನೇಕ ಕ್ಷೇತ್ರದ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮೌನ ಮುರಿದಿದ್ದರು. ಆಗ ಪತ್ರಕರ್ತೆ ಪ್ರಿಯಾ ರಮಣಿ ಕೂಡ ಮುಂದೆ ಬಂದು, ಎಂ.ಜೆ.ಅಕ್ಬರ್​ ತಮಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಿದ್ದರು.

ಪ್ರಿಯಾ ರಮಣಿ ಹೇಳುವ ಪ್ರಕಾರ, 1993ರಲ್ಲಿ ಉದ್ಯೋಗ ನೀಡುವದಾಗಿ ಮುಂಬೈ ಹೋಟೆಲ್​ಗೆ ಕರೆಸಿ ಅಕ್ಬರ್​ ಲೈಂಗಿಕವಾಗಿ ಕಿರುಕುಳ ನೀಡಿದ್ದರಂತೆ. ಪ್ರಿಯಾ ರಮಣಿ ಈ ಹೇಳಿಕೆ ನೀಡುತ್ತಿದ್ದಂತೆ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ರಾಜಕೀಯ ವಯಲದಲ್ಲಿ ಈ ಸುದ್ದಿ ಅಲ್ಲೋಲ-ಲಲ್ಲೋಲ್ಲವನ್ನೇ ಎಬ್ಬಿಸಿತ್ತು. ಹೀಗಾಗಿ, 2018ರ ಅಕ್ಟೋಬರ್​ 17ರಂದು ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್​ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಇದನ್ನೂ ಓದಿ: ‘ಸ್ಯಾಂಡಲ್​ವುಡ್​ನಲ್ಲಿ ಏನೇ ಕಾಂಟ್ರವರ್ಸಿ ಆದ್ರೂ ನನ್ನ ಹೆಸರು ಬರುತ್ತೆ.. ನನ್ನ ಹಣೆಬರಹ’

ರಮಣಿ ನನ್ನ ಮರ್ಯಾದೆ ಕಳೆದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಅಕ್ಬರ್​ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​, ಮಹಿಳೆ ತನಗಾದ ಕಿರುಕುಳದ ಬಗ್ಗೆ ಅನೇಕ ವರ್ಷಗಳ ನಂತರವೂ ಮಾತನಾಡುವ ಹಕ್ಕನ್ನು ಹೊಂದಿದ್ದಾಳೆ ಎಂದಿದೆ.

ಮಧ್ಯಾಹ್ನ 2 ಗಂಟೆಗೆ ತೀರ್ಪು ಪ್ರಕಟವಾಗಬೇಕಿತ್ತು. ಆದರೆ, ತೀರ್ಪಿನಲ್ಲಿ ಸಣ್ಣ ಬದಲಾವಣೆ ಇದ್ದಿದ್ದರಿಂದ ತೀರ್ಪು ಪ್ರಕಟಣೆಯಲ್ಲಿ ಕೊಂಚ ವಿಳಂಬವಾಗಿದೆ.

Published On - 3:45 pm, Wed, 17 February 21