ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ(Sushilkumar Shinde) ಸಕ್ರಿಯ ರಾಜಕಾರಣಕ್ಕೆ ಗುಡ್ಬೈ ಹೇಳಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ರಾಜಕೀಯದಿಂದ ನಿರ್ಗಮಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ. ಶಿಂಧೆ ತಮ್ಮ ರಾಜಕೀಯ ಜೀವನ ಅಂತ್ಯಗೊಂಡ ನಂತರ ಮಗಳು ಪ್ರಣಿತಿ ಶಿಂಧೆ ಸೊಲ್ಲಾಪುರ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಧಮ್ಮ ಚಕ್ರ ಪ್ರವರ್ತನ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಶೀಲ್ ಕುಮಾರ್ ಶಿಂಧೆ ಸೊಲ್ಲಾಪುರಕ್ಕೆ ಬಂದಿದ್ದರು.
ಶಿಂಧೆ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 67ನೇ ಧಮ್ಮಚಕ್ರ ಪ್ರವರ್ತನ ದಿನದ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಿ, ಸಾಮೂಹಿಕ ಬುದ್ಧನ ಪೂಜೆಯನ್ನೂ ನೆರವೇರಿಸಿದರು. ಇಂದು ದೇಶಾದ್ಯಂತ ಧಮ್ಮಚಕ್ರ ಪ್ರವರ್ತನ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಪ್ರತಿ ವರ್ಷ ನಾವು ಬಾಬಾ ಸಾಹೇಬ್ ಅವರ ಜನ್ಮ ವಾರ್ಷಿಕೋತ್ಸವ ಮತ್ತು ಮಹಾಪರಿನಿರ್ವಾಣ ದಿನದಂದು ಅಭಿನಂದಿಸಲು ಬರುತ್ತೇವೆ.
ಈ ಸಂದರ್ಭದಲ್ಲಿ ಸುಶೀಲ್ ಕುಮಾರ್ ಶಿಂಧೆ ರಾಜಕೀಯ ನಿವೃತ್ತಿ ಘೋಷಿಸಿದ್ದು, ಮುಂಬರುವ ಸೋಲ್ಲಾಪುರ ಲೋಕಸಭಾ ಚುನಾವಣೆಯಲ್ಲಿ ಶಾಸಕಿ ಪ್ರಣಿತಿ ಶಿಂಧೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಸಂವಿಧಾನ ನೀಡಿದ್ದಾರೆ ಎಂದರು. ಇಂದು ದೇಶ ಈ ಸಂವಿಧಾನದ ಪ್ರಕಾರ ನಡೆಯುತ್ತಿದೆ. ಬಾಬಾ ಸಾಹೇಬರ ಹೆಸರು ಹೇಳದೆ ಯಾವ ಪಕ್ಷವೂ ರಾಜಕೀಯ ಮಾಡುವುದಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ.
ಮತ್ತಷ್ಟು ಓದಿ: ಲೋಕಸಭೆ ಚುನಾವಣೆಯಲ್ಲಿ ಆಪ್ ಜೊತೆ ಹೊಂದಾಣಿಕೆ; ಹೈಕಮಾಂಡ್ ಮುಂದೆ ಅಸಹಾಯಕವಾದ ಪಂಜಾಬ್ ಕಾಂಗ್ರೆಸ್
ಶಿಂಧೆ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು 2012 ರಲ್ಲಿ ಕೇಂದ್ರ ಗೃಹ ಸಚಿವ ಮತ್ತು ಮನಮೋಹನ್ ಸಿಂಗ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು. ಪರಿಣಿತಿ ಶಿಂಧೆ ಸೊಲ್ಲಾಪುರದಿಂದ ಮೂರು ಬಾರಿ ಶಾಸಕಿಯಾಗಿದ್ದಾರೆ. ಶಿಂಧೆ ಅವರು ಸೊಲ್ಲಾಪುರ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ