ಮದುವೆ ಮುಗಿಸಿ ಬರುತ್ತಿದ್ದವರ ವಾಹನ ಅಪಘಾತಕ್ಕೀಡಾದ ಕಾರಣ ನಾಲ್ವರು ಮೃತಪಟ್ಟು, 9ಮಂದಿ ಗಾಯಗೊಂಡ ದುರ್ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ (Washim District) ನಡೆದಿದೆ. ಇವರೆಲ್ಲ ಒಂದು ಪಿಕ್ಅಪ್ ವಾಹನದಲ್ಲಿ ನಾಗ್ಪುರದಿಂದ ವಾಪಸ್ ಬರುತ್ತಿದ್ದರು. ವಾಶಿಮ್ ಮತ್ತು ಶೆಲುಬಜಾರ್ಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ನಿಂತಿದ್ದ ಟ್ರಕ್ಗೆ ಪಿಕ್ಅಪ್ ವಾಹನ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದಾಗಿ ವಾಶಿಮ್ ಎಸ್ಪಿ ಬಚ್ಚನ್ ಸಿಂಗ್ ತಿಳಿಸಿದ್ದಾರೆ.
ಮೃತರು, ಗಾಯಗೊಂಡವರೆಲ್ಲ ವಾಶಿಮ್ ಜಿಲ್ಲೆಯ ಶವಂಗಾ ಜೆಹಂಗೀರ್ ಗ್ರಾಮದವರಾಗಿದ್ದಾರೆ. ನಿನ್ನೆ ರಾತ್ರಿ 8ಗಂಟೆ ಹೊತ್ತಿಗೆ ಅಪಘಾತ ನಡೆದಿದೆ. ಸ್ಥಳೀಯ ಪೊಲೀಸರು ಮತ್ತು ಸ್ವಯಂಸೇವಕರು ಕೂಡಲೇ ಸ್ಥಳಕ್ಕೆ ಧಾವಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಲ್ವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಉಳಿದ 9 ಜನರಿಗೆ ಅಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಬಚ್ಚನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಬಾರಾಬಂಕಿ ಭೀಕರ ಅಪಘಾತ
ಇನ್ನೊಂದೆಡೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ನಡೆದಿದ್ದು, ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಕಾರು ಮತ್ತು ಕಂಟೇನರ್ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: ಕಾನನದ ಮಧ್ಯೆ ಪರಿಸರ ಸ್ನೇಹಿ ಸರ್ಕಾರಿ ಶಾಲೆ; ಪಾಠದ ಜತೆಗೆ ಹೂವು, ತರಕಾರಿ, ಔಷಧಿಗಳ ಬೆಳೆಗೆ ಹೆಚ್ಚು ಒತ್ತು
Published On - 9:26 am, Wed, 16 February 22