AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Rate Today: ನಿಮ್ಮೂರಿನ ಪೆಟ್ರೋಲ್​, ಡೀಸೆಲ್​ ದರದ ಮಾಹಿತಿ ಇಲ್ಲಿದೆ ನೋಡಿ

Petrol Diesel Price Today, 16-02-2022: ಕಳೆದ ಎರಡೂವರೆ ತಿಂಗಳುಗಳಿಂದಲೂ ತೈಲಗಳ ಬೆಲೆ ಸ್ಥಿರವಾಗಿಯೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್​-ಡೀಸೆಲ್​ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ.

Petrol Diesel Rate Today: ನಿಮ್ಮೂರಿನ ಪೆಟ್ರೋಲ್​, ಡೀಸೆಲ್​ ದರದ ಮಾಹಿತಿ ಇಲ್ಲಿದೆ ನೋಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Feb 16, 2022 | 8:03 AM

Petrol Diesel Price Today|ದೆಹಲಿ: ನವೆಂಬರ್​​ಗೂ ಮೊದಲು ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯಾಗುತ್ತಲೇ ಇತ್ತು. ಅದರಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದರು. ಶತಕವನ್ನೂ ದಾಟಿ ಇಂಧನ ದರ ಮುನ್ನುಗ್ಗುತ್ತಿತ್ತು. ಆದರೆ ದೀಪಾವಳಿಗೂ ಮುನ್ನಾದಿನ ಅಂದರೆ ನವೆಂಬರ್ 4ರಂದು ಕೇಂದ್ರ ಸರ್ಕಾರ ಪೆಟ್ರೋಲ್​-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಅದಾದ ಮೇಲೆ ಹಲವು ರಾಜ್ಯ ಸರ್ಕಾರಗಳೂ ಕೂಡ ವ್ಯಾಟ್​ (VAT) ಕಡಿತಗೊಳಿಸಿವೆ. ಹೀಗಾಗಿ ಅಂದಿನಿಂದಲೂ ಪೆಟ್ರೋಲ್ (Petrol Price), ಡೀಸೆಲ್​ ಬೆಲೆ (Diesel Price) ಮಹಾನಗರಗಳಲ್ಲಿ ಸ್ಥಿರವಾಗಿಯೇ ಇವೆ.  ಭಾರತದ ತೈಲ ಕಂಪನಿಗಳು ಇಂದು (ಫೆಬ್ರವರಿ 16, ಬುಧವಾರ) ಬೆಳಗ್ಗೆ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಬಿಡುಗಡೆ ಮಾಡಿದ್ದು,ಇಂದು ಕೂಡ ಇಂಧನಗಳ ದರದಲ್ಲಿ(Fuel Price) ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಎರಡೂವರೆ ತಿಂಗಳುಗಳಿಂದಲೂ ತೈಲಗಳ ಬೆಲೆ ಸ್ಥಿರವಾಗಿಯೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್​-ಡೀಸೆಲ್​ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 85.01 ರೂಪಾಯಿ ದಾಖಲಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.14 ರೂಪಾಯಿ ಇದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.40 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.53 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ಡೀಸೆಲ್ ದರ 89.79 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 108.20 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.62 ರೂಪಾಯಿ ನಿಗದಿಯಾಗಿದೆ. ಗುಜರಾತ್​ನ ಗಾಂಧಿನಗರದಲ್ಲಿ ಲೀಟರ್ ಪೆಟ್ರೋಲ್ ದರ 95.35 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.33 ರೂಪಾಯಿ ನಿಗದಿಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ಗೆ 106.36 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 93.47 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 95.28 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

ಶ್ರೀಗಂಗಾನಗರದಲ್ಲಿ ಲೀಟರ್ ಪೆಟ್ರೋಲ್​ಗೆ 114.01 ರೂಪಾಯಿ ಹಾಗೂ ಲೀಟರ್ ಡೀಸೆಲ್ಗೆ 98.39 ರೂಪಾಯಿ ದಾಖಲಾಗಿದೆ. ಭೋಪಾಲ್ನಲ್ಲಿ ಲೀಟರ್ ಪೆಟ್ರೋಲ್ ದರ 107.23 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.87 ರೂಪಾಯಿ ಇದೆ. ಗುವಾಹಟಿಯಲ್ಲಿ ಲೀಟರ್ ಪೆಟ್ರೋಲ್ ದರ 94.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm

Published On - 7:56 am, Wed, 16 February 22

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ