ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಕರುಂಗಾಲ್ಪಟ್ಟಿಯಲ್ಲಿ ಮಂಗಳವಾರ ನಾಲ್ಕು ಮನೆಗಳು ಕುಸಿದು ಬಿದ್ದಿವೆ. ಮನೆಗಳ ಅವಶೇಷಗಳಡಿ ಕನಿಷ್ಠ 17 ಮಂದಿ ಸಿಲುಕಿಕೊಂಡಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಇದುವರೆಗೆ 13 ಜನರನ್ನು ರಕ್ಷಿಸಲಾಗಿದೆ. ಆದರೆ ಇನ್ನೂ 4 ಜನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಗಳಿವೆ. ಅಗ್ನಿಶಾಮಕ ಮತ್ತು ಇತರ ತುರ್ತು ಸೇವೆಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯರು, ನಾಲ್ಕು ಮನೆಗಳು ಕುಸಿಯುವ ಮೊದಲು ದೊಡ್ಡ ಶಬ್ದ ಕೇಳಿಸಿತು. ಅವುಗಳು ಕೆಲವೇ ಸೆಕೆಂಡುಗಳಲ್ಲಿ ನೆಲಸಮವಾಗಿವೆ ಎಂದಿದ್ದಾರೆ.
ಮನೆಗಳಲ್ಲಿ ವಾಸಿಸುವವರಲ್ಲಿ ಒಬ್ಬರು ಅಗ್ನಿಶಾಮಕ ದಳದ ಅಧಿಕಾರಿಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಎಎನ್ಐ ಟ್ವೀಟ್ ಮಾಡಿದ್ದು, ‘ಭಾರಿ ಮಳೆಯಿಂದ ಕರುಂಗಾಲ್ಪಟ್ಟಿಯಲ್ಲಿ ಮನೆಗಳು ಕುಸಿದಿವೆ’ ಎಂದು ಹೇಳಿದೆ. ಘಟನೆಯ ಕುರಿತ ಮಾಹಿತಿಗಳು ಇನ್ನಷ್ಟೇ ಸಂಪೂರ್ಣವಾಗಿ ಲಭ್ಯವಾಗಬೇಕಿದೆ.
ಎಎನ್ಐ ಹಂಚಿಕೊಂಡ ಟ್ವೀಟ್ ಇಲ್ಲಿದೆ:
Tamil Nadu: Four houses collapsed in Salem district’s Karungalpatti this morning due to heavy rain. 13 people rescued so far & sent to Salem govt hospital; 4 people still feared trapped under the debris. Fire dept officials are clearing the debris & rescue operation is underway. pic.twitter.com/cqg52eOsY4
— ANI (@ANI) November 23, 2021
ಏತನ್ಮಧ್ಯೆ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನವೆಂಬರ್ 23 ಮತ್ತು 24 ರಂದು ತಮಿಳುನಾಡಿಗೆ ಹಳದಿ ಅಲರ್ಟ್ ಮತ್ತು ನವೆಂಬರ್ 25 ಮತ್ತು 26 ಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಮೂಲಕ ಭಾರಿ ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ.
ಇದನ್ನೂ ಓದಿ:
ಆಂಧ್ರ ಪ್ರದೇಶದಲ್ಲಿನ ಅನ್ನಮಯ್ಯ ಡ್ಯಾಂನಿಂದ ದಿಢೀರ್ ಪ್ರವಾಹ;18 ಜನರು ಜಲಸಮಾಧಿ, ಅನೇಕರು ನಾಪತ್ತೆ
Published On - 12:49 pm, Tue, 23 November 21