ಸಾಂಕ್ರಾಮಿಕ ರೋಗದ ವರ್ಷದಲ್ಲಿ ಕೇರಳದಲ್ಲಿ ಜನನ ಪ್ರಮಾಣ ತೀವ್ರ ಕುಸಿತ

2010 ರಲ್ಲಿ ಕೇರಳವು 5.46 ಲಕ್ಷ ಜನನಗಳನ್ನು ದಾಖಲಿಸಿದ್ದು ಇದು 2011 ರಲ್ಲಿ 5.6 ಲಕ್ಷಕ್ಕೆ ಏರಿತು. ಅಂದಿನಿಂದ ಜನನಗಳ ಸಂಖ್ಯೆ 2016 ಮತ್ತು 2017 ರ ನಡುವೆ ಸಣ್ಣ ಜಿಗಿತವನ್ನು ಹೊರತುಪಡಿಸಿ ಇಳಿಮುಖವಾಗಿದೆ.

ಸಾಂಕ್ರಾಮಿಕ ರೋಗದ ವರ್ಷದಲ್ಲಿ ಕೇರಳದಲ್ಲಿ ಜನನ ಪ್ರಮಾಣ ತೀವ್ರ ಕುಸಿತ
ಪ್ರಾತಿನಿಧಿಕ ಚಿತ್ರ

ತಿರುವನಂತಪುರಂ: ಕೇರಳವು(Kerala) ಉಲ್ಬಣಗೊಳ್ಳುತ್ತಿರುವ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವಾಗ ಮನೆಯಿಂದ ಕೆಲಸ ಮಾಡುವುದು ರೂಢಿಯಾಗಿದ್ದಾಗ ಮತ್ತು ಲಕ್ಷಗಟ್ಟಲೆ ವಲಸಿಗರು ರಾಜ್ಯಕ್ಕೆ ಮರಳಿರುವ ಹೊತ್ತಲ್ಲಿ  2021 ರ ಮೊದಲ ಒಂಬತ್ತು ತಿಂಗಳಲ್ಲಿ  ಜನನ ಪ್ರಮಾಣದಲ್ಲಿ(Births) ತೀವ್ರ ಕುಸಿತವನ್ನು ಕಂಡಿದೆ ಎಂದು ರಾಜ್ಯದ ಮುಖ್ಯ ಜನನ ಮತ್ತು ಮರಣ ನೋಂದಣಿದಾರರ(Chief Registrar of Birth and Deaths) ಅಂಕಿಅಂಶಗಳು ತಿಳಿಸಿವೆ. ಅಂಕಿಅಂಶಗಳ ಪ್ರಕಾರ ಕೇರಳವು ಜನನ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತವನ್ನು ಅನುಭವಿಸುತ್ತಿರುವಾಗ, ಈ ವರ್ಷ ಮತ್ತಷ್ಟು ಕುಸಿತ ಕಂಡಿದೆ. ಸಾಂಕ್ರಾಮಿಕ ಪೂರ್ವ ವರ್ಷದಲ್ಲಿ 4.80 ಲಕ್ಷ ಜನನಗಳು ದಾಖಲಾಗಿವೆ, ಇದು 2020 ರಲ್ಲಿ 4.53 ಲಕ್ಷಕ್ಕೆ ಇಳಿದಿದೆ. ಈ ವರ್ಷ ಸೆಪ್ಟೆಂಬರ್ 30 ವೇಳೆಗೆ ಇದು 2.17 ಲಕ್ಷಕ್ಕೆ ಇಳಿಯಿತು.  ಈ ವರ್ಷದ ಮೊದಲ ಆರು ತಿಂಗಳಲ್ಲಿ, ನೋಂದಣಿಯಾದ ಜನನಗಳ ಸಂಖ್ಯೆಯು ಕನಿಷ್ಠ 27,534 (ಫೆಬ್ರವರಿಯಲ್ಲಿ) ರಿಂದ ಗರಿಷ್ಠ 32,969 (ಜೂನ್) ವರೆಗೆ ಇತ್ತು. ಆದಾಗ್ಯೂ, ಅಂದಿನಿಂದ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಜನನಗಳ ಸರಾಸರಿ 10,000 ಆಗಿದ್ದು ಸೆಪ್ಟೆಂಬರ್ 12,227 ನೋಂದಣಿ ಆಗಿದೆ. ಈ ದರದಲ್ಲಿ, 2021 ಕಳೆದ ಒಂದು ದಶಕದಲ್ಲಿ ಕೇರಳದಲ್ಲಿ ಜನನ ಅಂಕಿಅಂಶಗಳಲ್ಲಿ ವರ್ಷದಿಂದ ವರ್ಷಕ್ಕೆ ಅತಿದೊಡ್ಡ ಕುಸಿತಕ್ಕೆ ಸಾಕ್ಷಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.ಇದು ಮುಂಬರುವ ವರ್ಷಗಳಲ್ಲಿ ಕೇರಳದ ಜನಸಂಖ್ಯಾಶಾಸ್ತ್ರದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ.

2010 ರಲ್ಲಿ ಕೇರಳವು 5.46 ಲಕ್ಷ ಜನನಗಳನ್ನು ದಾಖಲಿಸಿದ್ದು ಇದು 2011 ರಲ್ಲಿ 5.6 ಲಕ್ಷಕ್ಕೆ ಏರಿತು. ಅಂದಿನಿಂದ ಜನನಗಳ ಸಂಖ್ಯೆ 2016 ಮತ್ತು 2017 ರ ನಡುವೆ ಸಣ್ಣ ಜಿಗಿತವನ್ನು ಹೊರತುಪಡಿಸಿ ಇಳಿಮುಖವಾಗಿದೆ.
ಕೇರಳವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶೇಕಡಾ 100 ರಷ್ಟು ಜನನ ನೋಂದಣಿಯನ್ನು ಮಾಡುತ್ತಿದೆ, ಅವುಗಳಲ್ಲಿ 98.96 ಶೇಕಡಾ ಸಾಂಸ್ಥಿಕ ಹೆರಿಗೆಗಳಾಗಿವೆ. 2019 ರಲ್ಲಿ ಕೇರಳದಲ್ಲಿ 87.03 ಪ್ರತಿಶತದಷ್ಟು ಜನನಗಳು ಹುಟ್ಟಿದ 21 ದಿನಗಳಲ್ಲಿ ನೋಂದಾಯಿಸಲ್ಪಟ್ಟಿವೆ.

ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆಯ (NORKA) ದತ್ತಾಂಶವು ಮೇ 2020 ರಿಂದ ಪ್ರಾರಂಭವಾದ 13 ತಿಂಗಳುಗಳಲ್ಲಿ 14.63 ಲಕ್ಷ ವಲಸಿಗರು ಕೇರಳಕ್ಕೆ ಮುಖ್ಯವಾಗಿ ಮಧ್ಯಪ್ರಾಚ್ಯದಿಂದ ಬಂದಿದ್ದಾರೆ ಎಂದು ತೋರಿಸುತ್ತದೆ.

ಇದನ್ನೂ ಓದಿ: ಕೃಷಿ ಕಾನೂನುಗಳು ಜನಪ್ರಿಯವಾಗಿವೆ ಎಂದು ತೋರಿಸುತ್ತಿದೆ ಸಿವೋಟರ್ ಸಮೀಕ್ಷೆ; ಮೋದಿ ಅವರ ಮೌಲ್ಯಮಾಪನ ಸರಿಯಾಗಿದೆ

Click on your DTH Provider to Add TV9 Kannada