ಇಂದು ಬೆಳಿಗ್ಗೆ ಹಾಸನ, ಚಿಕ್ಕಬಳ್ಳಾಪುರ, ಯಾದಗಿರಿ ನಗರಗಳಲ್ಲಿ ಉತ್ತಮ ಏರ್ ಕ್ವಾಲಿಟಿ ಇಂಡೆಕ್ಸ್ ದಾಖಲು
ಹಾಸನ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 20 ಮಾತ್ರ ದಾಖಲಾಗಿದೆ. ಹೀಗಾಗಿ ಉತ್ತಮವಾದ ಗಾಳಿಯ ಗುಣಮಟ್ಟವನ್ನು ಹಾಸನ ಹೊಂದಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 28 ದಾಖಲು, ಇನ್ನು ಯಾದಗಿರಿ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 30 ದಾಖಲಾಗಿದೆ.
ದೆಹಲಿ: ರಾಜ್ಯದ 3 ನಗರಗಳಲ್ಲಿ ಉತ್ತಮ ವಾಯು ಗುಣಮಟ್ಟ ಸೂಚ್ಯಂಕ(Air Quality Index) ದಾಖಾಗಿದೆ. ಇಂದು (ನವೆಂಬರ್ 23) ಬೆಳಿಗ್ಗೆ ಹಾಸನ, ಚಿಕ್ಕಬಳ್ಳಾಪುರ, ಯಾದಗಿರಿ ನಗರಗಳಲ್ಲಿ ಉತ್ತಮ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಹಾಸನ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 20 ಮಾತ್ರ ದಾಖಲಾಗಿದೆ. ಹೀಗಾಗಿ ಉತ್ತಮವಾದ ಗಾಳಿಯ ಗುಣಮಟ್ಟವನ್ನು ಹಾಸನ ಹೊಂದಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 28 ದಾಖಲು, ಇನ್ನು ಯಾದಗಿರಿ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 30 ದಾಖಲಾಗಿದೆ. ಮಾಲಿನ್ಯ ರಹಿತವಾದ ಉತ್ತಮವಾದ ಗಾಳಿಯ ಗುಣಮಟ್ಟ ರಾಜ್ಯದ 3 ಜಿಲ್ಲೆಗಳಲ್ಲಿ ದಾಖಲಾಗಿದೆ.
ಇದಕ್ಕೆ ವಿರುದ್ಧವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ದಾಖಲಾಗಿದೆ. ದೆಹಲಿಯಲ್ಲಿ ವಾಯುವಿನ ಗುಣಮಟ್ಟ ಕುಸಿದಿದೆ. ದೆಹಲಿಯ ಜಂಗೀರಪುರ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 324 ಕ್ಕೆ ಕುಸಿತವಾಗಿದೆ. ಆದರೆ ನೆನ್ನೆ (ನವೆಂಬರ್ 22) ಮತ್ತು ಭಾನುವಾರಕ್ಕೆ ಹೋಲಿಸಿದರೆ ದೆಹಲಿಯಲ್ಲಿ ವಾಯುವಿನ ಗುಣಮಟ್ಟ ಸ್ವಲ್ಪ ಉತ್ತಮವಾಗಿದೆ. ನೆನ್ನೆ ದೆಹಲಿ ವಾಯುವಿನ ಗುಣಮಟ್ಟ 349 ಕ್ಕೆ ಕುಸಿದಿತ್ತು. ಸದ್ಯ ದೆಹಲಿಯಲ್ಲಿ ಬಿರುಸಾದ ಗಾಳಿಯ ವೇಗ ಇದೆ. ಹೀಗಾಗಿ ವಾಯುವಿನ ಗುಣಮಟ್ಟ ಸ್ವಲ್ಪ ಉತ್ತಮವಾಗಿದೆ.
ದೆಹಲಿಯಲ್ಲಿಆನ್ಲೈನ್ ತರಗತಿ ಮಾತ್ರ ನಡೆಸಲು ಅವಕಾಶ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಆನ್‌ಲೈನ್ ತರಗತಿ ಮಾತ್ರ ನಡೆಸಲು ಅವಕಾಶ ನೀಡಲಾಗಿದ್ದು, ದೆಹಲಿ ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಘೋಷಣೆ ಮಾಡಿದೆ. ಮುಂದಿನ ಆದೇಶ ಬರುವವರೆಗೆ ಶಾಲೆಗಳನ್ನು ಮುಚ್ಚಲು ಪರಿಸರ ಇಲಾಖೆ ನಿರ್ದೇಶನ ನೀಡಿದೆ ಎಂದು ಹೆಚ್ಚುವರಿ ಶಿಕ್ಷಣ ನಿರ್ದೇಶಕಿ ರೀಟಾ ಶರ್ಮಾ ತಿಳಿಸಿದ್ದಾರೆ.ಅದಾಗ್ಯೂ, ಆನ್‌ಲೈನ್ ಬೋಧನಾ ಚಟುವಟಿಕೆಗಳು ಮತ್ತು ಬೋರ್ಡ್ ತರಗತಿಗಳಿಗೆ ಪರೀಕ್ಷೆಗಳನ್ನು ಮೊದಲೇ ನೀಡಲಾದ ಮಾರ್ಗಸೂಚಿಗಳ ಪ್ರಕಾರ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಹೇಳಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ವಾರ (ನವೆಂಬರ್ 13 ರಂದು) ಒಂದು ವಾರದವರೆಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಘೋಷಿಸಿದ್ದರು. ಹರಿಯಾಣ ಸರ್ಕಾರ ಕೂಡ ಗುರುಗ್ರಾಮ್, ಫರಿದಾಬಾದ್, ಸೋನಿಪತ್ ಮತ್ತು ಝಿಜಾರ್ ನಗರಗಳಲ್ಲಿ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿತ್ತು. ಇದೀಗ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಮುಂದುವರೆದಿದೆ.
ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ; ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆ ಘೋಷಣೆ
Published On - 11:37 am, Tue, 23 November 21