ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ; ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆ ಘೋಷಣೆ

Delhi Air Pollution: ದೆಹಲಿಯಲ್ಲಿ ವಾಯುಗುಣಮಟ್ಟ ಕಳಪೆ ಮಟ್ಟದಲ್ಲಿಯೇ ಇದ್ದು, ಶಾಲೆಗಳಿಗೆ ರಜೆಯನ್ನು ವಿಸ್ತರಿಸಲಾಗಿದೆ, ಈ ಕುರಿತು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ; ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆ ಘೋಷಣೆ
ದೆಹಲಿ ವಾಯುಮಾಲಿನ್ಯ ಚಿತ್ರ
Follow us
TV9 Web
| Updated By: shivaprasad.hs

Updated on:Nov 21, 2021 | 4:56 PM

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಆನ್​ಲೈನ್ ತರಗತಿ ಮಾತ್ರ ನಡೆಸಲು ಅವಕಾಶ ನೀಡಲಾಗಿದ್ದು, ದೆಹಲಿ ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಘೋಷಣೆ ಮಾಡಿದೆ. ಮುಂದಿನ ಆದೇಶ ಬರುವವರೆಗೆ ಶಾಲೆಗಳನ್ನು ಮುಚ್ಚಲು ಪರಿಸರ ಇಲಾಖೆ ನಿರ್ದೇಶನ ನೀಡಿದೆ ಎಂದು ಹೆಚ್ಚುವರಿ ಶಿಕ್ಷಣ ನಿರ್ದೇಶಕಿ ರೀಟಾ ಶರ್ಮಾ ತಿಳಿಸಿದ್ದಾರೆ.ಅದಾಗ್ಯೂ, ಆನ್‌ಲೈನ್ ಬೋಧನಾ ಚಟುವಟಿಕೆಗಳು ಮತ್ತು ಬೋರ್ಡ್ ತರಗತಿಗಳಿಗೆ ಪರೀಕ್ಷೆಗಳನ್ನು ಮೊದಲೇ ನೀಡಲಾದ ಮಾರ್ಗಸೂಚಿಗಳ ಪ್ರಕಾರ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಹೇಳಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ವಾರ (ನವೆಂಬರ್ 13 ರಂದು) ಒಂದು ವಾರದವರೆಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಘೋಷಿಸಿದ್ದರು. ಹರಿಯಾಣ ಸರ್ಕಾರ ಕೂಡ ಗುರುಗ್ರಾಮ್, ಫರಿದಾಬಾದ್, ಸೋನಿಪತ್ ಮತ್ತು ಝಿಜಾರ್ ನಗರಗಳಲ್ಲಿ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿತ್ತು. ಇದೀಗ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಮುಂದುವರೆದಿದೆ.

ದೆಹಲಿಯಲ್ಲಿ ಕಳೆದ ಎರಡು ವಾರದಿಂದ ವಾಯು ಗುಣಮಟ್ಟ ಕಳಪೆ ಗುಣಮಟ್ಟದಲ್ಲಿದೆ. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ಬಿಡುಗಡೆಗೊಳಿಸಿರುವ ಸೂಚ್ಯಂಕದ ಪ್ರಕಾರ, ಇಂದು 347 ಎಕ್ಯುಐ ದಾಖಲಾಗಿದೆ. ಸೂಚ್ಯಂಕದ ಪ್ರಕಾರ ಎಕ್ಯುಐ 0 ಯಿಂದ 50ರ ಒಳಗಿದ್ದರೆ ಉತ್ತಮವೆಂದು, 51 ರಿಂದ 100ರೊಳಗಿದ್ದರೆ ಮಧ್ಯಮವೆಂದೂ, 301ರಿಂದ 400ರ ಒಳಗಿದ್ದರೆ ಕಳಪೆಯಿಂದೂ ಗುರುತಿಸಲಾಗುತ್ತದೆ. 400-500ರ ನಡುವಿದ್ದರೆ ಅದನ್ನು ಅತ್ಯಂತ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಇದರ ಪ್ರಕಾರ ದೆಹಲಿಯಲ್ಲಿ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲಿದೆ. ನಾಳೆ (ಸೋಮವಾರ) ವಾಯು ಗುಣಮಟ್ಟ ಸುಧಾರಣೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ದೆಹಲಿ ಸರ್ಕಾರ, ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ಕಟ್ಟಡ ನಿರ್ಮಾಣ ಮತ್ತು ಕಸ ಸುಡುವುದನ್ನು ನಿಷೇಧಿಸುವುದು, ಜನರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗಷ್ಟೇ ಸಾರಿಗೆ ಇಲಾಖೆ ವಾಹನಗಳಿಗೆ ಯಾವ ಮಾದರಿಯ ಇಂಧನ ಬಳಸುತ್ತಿದೆ ಎಂಬುದನ್ನು ಗಮನಿಸಿ, ಕಲರ್ ಕೋಡಿಂಗ್ ಸ್ಟಿಕ್ಕರ್ ನೀಡುವ ನಿಯಮ ಜಾರಿಗೆ ತಂದಿದೆ. ಅದಾಗ್ಯೂ ಮಾಲಿನ್ಯದ ಮಟ್ಟ ಕಡಿಮೆಯಾಗಿಲ್ಲ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ದೆಹಲಿಯ ಪಕ್ಕದ ನಗರಗಳಾದ, ಫರೀದಾಬಾದ್ (332), ಘಾಜಿಯಾಬಾದ್ (346), ಗ್ರೇಟರ್ ನೋಯ್ಡಾ (340), ಗುರುಗ್ರಾಮ್ (375) ಮತ್ತು ನೋಯ್ಡಾ (422)ಗಳೂ ಕೂಡ ಕಳಪೆ ವಾಯು ಗುಣಮಟ್ಟವನ್ನು ಹೊಂದಿವೆ.

Published On - 4:54 pm, Sun, 21 November 21

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?