Rajasthan Cabinet Reshuffle 15 ಸಚಿವರಿಂದ ಪ್ರಮಾಣ ವಚನ ಸ್ವೀಕಾರ; 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದ ಸಿಎಂ ಗೆಹ್ಲೋಟ್
ಮುಂಬರುವ ಅಸೆಂಬ್ಲಿ ಚುನಾವಣೆಗಳ ಮೇಲೆ ಕಣ್ಣಿಟ್ಟಿದ್ದು 2023 ರಲ್ಲಿ ಕಾಂಗ್ರೆಸ್ ಮತ್ತೆ ಸರ್ಕಾರವನ್ನು ರಚಿಸಲಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ಅಂದಿನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ (Sachin Pilot) ನೇತೃತ್ವದ ಬಂಡಾಯದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸುಮಾರು 16 ತಿಂಗಳ ನಂತರ ಸಚಿವ ಸಂಪುಟ ಪುನಾರಚನೆ ನಡೆದಿದೆ.

ಜೈಪುರ: ಭಾನುವಾರ ಜೈಪುರದ (Jaipur) ರಾಜಭವನದಲ್ಲಿ (Raj Bhawan) ಒಟ್ಟು 15 ಸಚಿವರು ಪ್ರಮಾಣ ವಚನ (sworn in) ಸ್ವೀಕರಿಸಿದರು. ಈ ಪೈಕಿ 12 ಹೊಸ ಮತ್ತು ಮೂವರು ರಾಜ್ಯ ಸಚಿವರು ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದಿದ್ದಾರೆ. ಸಮಾರಂಭದ ಮೊದಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕೆನ್ (Ajay Maken) ಅವರು ಜೈಪುರದ ಪಕ್ಷದ ಕಚೇರಿಯಲ್ಲಿ ಶಾಸಕರು ಮತ್ತು ಇತರ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಮುಂಬರುವ ಅಸೆಂಬ್ಲಿ ಚುನಾವಣೆಗಳ ಮೇಲೆ ಕಣ್ಣಿಟ್ಟಿದ್ದು 2023 ರಲ್ಲಿ ಕಾಂಗ್ರೆಸ್ ಮತ್ತೆ ಸರ್ಕಾರವನ್ನು ರಚಿಸಲಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ಅಂದಿನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ (Sachin Pilot) ನೇತೃತ್ವದ ಬಂಡಾಯದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸುಮಾರು 16 ತಿಂಗಳ ನಂತರ ಸಚಿವ ಸಂಪುಟ ಪುನಾರಚನೆ ನಡೆದಿದೆ. ಪೈಲಟ್ ನಿಷ್ಠರಾದ ರಮೇಶ್ ಮೀನಾ ಮತ್ತು ವಿಶ್ವೇಂದ್ರ ಸಿಂಗ್ ಅವರು ಸಚಿವ ಸ್ಥಾನಕ್ಕೆ ಮರಳಿದ್ದರೆ, ಬ್ರಿಜೇಂದ್ರ ಸಿಂಗ್ ಓಲಾ, ಹೇಮರಾಮ್ ಚೌಧರಿ ಮತ್ತು ಮುರಾರಿಲಾಲ್ ಮೀನಾಗೆ ಸಚಿವ ಸ್ಥಾನ ಲಭಿಸಿದೆ. ಶಾಂತಿ ಸೂತ್ರದ ಭಾಗವಾಗಿ ಕೆಲವು ಪೈಲಟ್ ನಿಷ್ಠಾವಂತರಿಗೆ ಸ್ಥಳಾವಕಾಶ ನೀಡುವುದರ ಜೊತೆಗೆ, ಪುನರಾಚನೆಯು ಕೇವಲ ಎರಡು ವರ್ಷಗಳ ನಂತರ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೂ ಸಂದೇಶ ರವಾನಿಸುವ ಪ್ರಯತ್ನ ನಡೆಯುತ್ತಿದೆ.
हम सब एकजुटता के साथ कांग्रेस अध्यक्षा श्रीमती सोनिया गांधी जी एवं श्री राहुल गांधी जी के नेतृत्व में कांग्रेस की नीति, विचारधारा एवं कार्यक्रम को आम जनता तक लेकर जाएंगे एवं विकास के एजेंडे पर एक बार फिर 2023 के विधानसभा चुनाव को जीतकर पुन: राजस्थान में सरकार बनाएंगे।
— Ashok Gehlot (@ashokgehlot51) November 21, 2021
ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆ ಹದಿನೈದು ಸಚಿವರು -11 ಕ್ಯಾಬಿನೆಟ್ ಮತ್ತು ನಾಲ್ವರು ರಾಜ್ಯ ಸಚಿವರು – ಭಾನುವಾರ ರಾಜಸ್ಥಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಕಲರಾಜ್ ಮಿಶ್ರಾ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
11 ಕ್ಯಾಬಿನೆಟ್ ಸಚಿವರಲ್ಲಿ ಮಮತಾ ಭೂಪೇಶ್, ಭಜನ್ ಲಾಲ್ ಜಾತವ್ ಮತ್ತು ಟಿಕಾರಾಂ ಜುಲ್ಲಿ ಅವರನ್ನು ರಾಜ್ಯ ಸಚಿವ (MoS) ನಿಂದ ಕ್ಯಾಬಿನೆಟ್ ದರ್ಜೆಗೆ ಏರಿಸಲಾಗಿದೆ. ಕಳೆದ ವರ್ಷ ಬಂಡಾಯವೆದ್ದದ್ದಕ್ಕಾಗಿ ವಜಾಗೊಂಡಿದ್ದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಕ್ಯಾಬಿನೆಟ್ ಸಚಿವರಾಗಿ ಮರುಸೇರ್ಪಡೆಗೊಂಡರು. ಹೇಮರಾಮ್ ಚೌಧರಿ, ಮಹೇಂದ್ರಜೀತ್ ಸಿಂಗ್ ಮಾಳವಿಯಾ, ರಾಮ್‌ಲಾಲ್ ಜಾಟ್, ಮಹೇಶ್ ಜೋಶಿ, ಗೋವಿಂದರಾಮ್ ಮೇಘವಾಲ್ ಮತ್ತು ಶಕುಂತ್ಲಾ ರಾವತ್ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜಾಹಿದಾ, ಬ್ರಿಜೇಂದ್ರ ಸಿಂಗ್ ಓಲಾ, ರಾಜೇಂದ್ರ ಗುಧಾ ಮತ್ತು ಮುರಾರಿ ಲಾಲ್ ಮೀನಾ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಪುಟ ವಿಸ್ತರಣೆಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮತ್ತು ಸ್ವತಂತ್ರ ಶಾಸಕರು, ಪುನರ್ ರಚನೆಯಲ್ಲಿ ಅವಕಾಶ ಸಿಗದಿದ್ದರೂ ರಾಜಕೀಯ ನೇಮಕಾತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.15 ಸಂಸದೀಯ ಕಾರ್ಯದರ್ಶಿಗಳು ಮತ್ತು ಮುಖ್ಯಮಂತ್ರಿಗಳ ಏಳು ಸಲಹೆಗಾರರನ್ನು ನೇಮಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಸರ್ಕಾರದ ಭಾಗವಾಗಬಹುದೆಂಬ ನಿರೀಕ್ಷೆಯಲ್ಲಿದ್ದ 22 ಶಾಸಕರಿಗೆ ಇದು ಅವಕಾಶ ಕಲ್ಪಿಸಲಿದೆ. ಹೊರಗುಳಿದವರಿಗೆ ವಿವಿಧ ಮಂಡಳಿಗಳು ಮತ್ತು ನಿಗಮಗಳ ಅಧ್ಯಕ್ಷರಾಗಿ ಇತರ ರಾಜಕೀಯ ನೇಮಕಾತಿಗಳನ್ನು ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಜಸ್ಥಾನ ಸಂಪುಟ ಪುನರ್ರಚನೆ: ನನಗೀಗ ತುಂಬ ಸಂತೋಷವಾಗಿದೆ ಎಂದ ಸಚಿನ್ ಪೈಲಟ್
Published On - 5:57 pm, Sun, 21 November 21




