ಓವರ್ ಟೇಕ್ ಮಾಡುವ ವೇಳೆ ಲಾರಿಗೆ ಡಿಕ್ಕಿ.. ತಿರುಪತಿಗೆ ಹೋಗ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು

| Updated By: KUSHAL V

Updated on: Aug 30, 2020 | 12:31 PM

ಹೈದರಾಬಾದ್​: ಕರ್ನಾಟಕದಿಂದ ತಿರುಪತಿಗೆ ಕಾರಿನಲ್ಲಿ ಹೊರಟಿದ್ದ ನಾಲ್ವರು, ಭೀಕರ ಅಪಘಾತಕ್ಕೆ ಈಡಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಬಲಿಜಪಲ್ಲಿ ಬಳಿ ಈ ಘಟನೆ ಸಂಭವಿಸಿದೆ. ವೋಲ್ವೋ ಕಾರಿನಲ್ಲಿ ಕರ್ನಾಟಕದ ನಾಲ್ಕು ಜನರು ಆಂಧ್ರ ಪ್ರದೇಶದ ತಿರುಪತಿಗೆ ಹೊರಟಿದ್ದರು. ಈ ವೇಳೆ ಬಂಗಾರು ಪಾಲೆಂ‌ ಮಂಡಲಂ‌ನ ಬಲಿಜಪಲ್ಲಿ ಬಳಿ‌ ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ‌ ಬರುತ್ತಿದ್ದ ಲಾರಿಗೆ  ಡಿಕ್ಕಿ‌ ಹೊಡೆದಿದ್ದಾರೆ. ಅತಿ ವೇಗದಲ್ಲಿದ್ದ ಕಾರು‌ […]

ಓವರ್ ಟೇಕ್ ಮಾಡುವ ವೇಳೆ ಲಾರಿಗೆ ಡಿಕ್ಕಿ.. ತಿರುಪತಿಗೆ ಹೋಗ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು
Follow us on

ಹೈದರಾಬಾದ್​: ಕರ್ನಾಟಕದಿಂದ ತಿರುಪತಿಗೆ ಕಾರಿನಲ್ಲಿ ಹೊರಟಿದ್ದ ನಾಲ್ವರು, ಭೀಕರ ಅಪಘಾತಕ್ಕೆ ಈಡಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಬಲಿಜಪಲ್ಲಿ ಬಳಿ ಈ ಘಟನೆ ಸಂಭವಿಸಿದೆ.

ವೋಲ್ವೋ ಕಾರಿನಲ್ಲಿ ಕರ್ನಾಟಕದ ನಾಲ್ಕು ಜನರು ಆಂಧ್ರ ಪ್ರದೇಶದ ತಿರುಪತಿಗೆ ಹೊರಟಿದ್ದರು. ಈ ವೇಳೆ ಬಂಗಾರು ಪಾಲೆಂ‌ ಮಂಡಲಂ‌ನ ಬಲಿಜಪಲ್ಲಿ ಬಳಿ‌ ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ‌ ಬರುತ್ತಿದ್ದ ಲಾರಿಗೆ  ಡಿಕ್ಕಿ‌ ಹೊಡೆದಿದ್ದಾರೆ.

ಅತಿ ವೇಗದಲ್ಲಿದ್ದ ಕಾರು‌ ಲಾರಿ‌ಯ ಕೆಳಗಡೆ ತೂರಿದ ಪರಿಣಾಮ, ಕಾರಿನಲ್ಲಿದ್ದ ನಾಲ್ವರು ಅಲ್ಲೇ ಸಿಲುಕಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.