ಉತ್ತರ ಪ್ರದೇಶ: ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಟ್ರಕ್; 4 ಮಂದಿ ಸಾವು, ಐವರಿಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Aug 16, 2022 | 7:27 PM

ಅತಿ ವೇಗದಿಂದ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಈ ಅನಾಹುತ ಸಂಭವಿಸಿದೆ. ಟ್ರಕ್ ಮನೆಯೊಳಗೆ ನುಗ್ಗಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶ: ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಟ್ರಕ್; 4 ಮಂದಿ ಸಾವು, ಐವರಿಗೆ ಗಾಯ
ರಕ್ಷಣಾ ಕಾರ್ಯಾಚರಣೆ
Follow us on

ಉತ್ತರ ಪ್ರದೇಶದ (Uttar pradesh) ಮೈನ್ ಪುರಿ ಜಿಲ್ಲೆಯಲ್ಲಿ ಅತಿ ರಭಸದಲ್ಲಿ ಬಂದ ಟ್ರಕ್ ಮನೆಯೊಳಗೆ ನುಗ್ಗಿದ್ದು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಐವರಿಗೆ ಗಾಯಗಳಾಗಿವೆ. ಒಬ್ಬ ವ್ಯಕ್ತಿ ಅವಶೇಷ ಗಳ ಅಡಿಯಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಕುರಾವಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜಿಟಿ ರೋಡ್ ಸಮೀಪ ಖಿರಿಯ ಪೀಪಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅತಿ ವೇಗದಿಂದ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಈ ಅನಾಹುತ ಸಂಭವಿಸಿದೆ. ಟ್ರಕ್ ಮನೆಯೊಳಗೆ ನುಗ್ಗಿ  ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಐವರಿಗೆ ಗಾಯಗಳಾಗಿದೆ. ಈ ಘಟನೆಯಲ್ಲಿ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಮತ್ತು ಅವರ ಪತ್ನಿ ಸಾವಿಗೀಡಾಗಿದ್ದಾರೆ. ಟ್ರಕ್ ನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಐವರಿಗೆ ಗಾಯಗಳಾಗಿವೆ. ಒಬ್ಬರು ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಮೈನ್ ಪುರಿ ಎಸ್ ಪಿ ಕಮಲೇಶ್ ದೀಕ್ಷಿತ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.


ಆಗಸ್ಟ್ 8ರಂದು ಮೈನ್ ಪುರಿಯಲ್ಲಿಯೇ ಸಮಾಜವಾದಿ ಪಕ್ಷದ ನಾಯಕ ಕಾರಿಗಿ ಟ್ರಕ್ ಗುದ್ದಿ ಕಾರನ್ನು ಸುಮಾರು 500 ಮೀಟರ್ ಎಳೆದುಕೊಂಡು ಹೋಗಿತ್ತು. ಎಸ್ಪಿ ನಾಯಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಇದನ್ನೂ ಓದಿ:ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌