AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಮಿಕರಿಗೆ ಸರಬರಾಜು ಮಾಡುವ ಆಹಾರ ಕಳಪೆ ಗುಣಮಟ್ಟದ್ದು ಅಂತ ಆರೋಪಿಸಿ ಮ್ಯಾನೇಜರ್ ಕೆನ್ನೆಗೆ ಬಾರಿಸಿದರು ಶಿವ ಸೇನಾ ಶಾಸಕ ಬಣಗಾರ್!

ಮಹಾರಾಷ್ಟ್ರ ಸರ್ಕಾರದ ಮಿಡ್​ಡೇ ಮೀಲ್ ಸ್ಕೀಮ್ ಯೋಜನೆಯಡಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಮಧ್ಯಾಹ್ನದ ಊಟ ಸರಬರಾಜು ಮಾಡಲಾಗುತ್ತದೆ. ಸದರಿ ಯೋಜನೆಯ ಗುತ್ತಿಗೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ.

ಕಾರ್ಮಿಕರಿಗೆ ಸರಬರಾಜು ಮಾಡುವ ಆಹಾರ ಕಳಪೆ ಗುಣಮಟ್ಟದ್ದು ಅಂತ ಆರೋಪಿಸಿ ಮ್ಯಾನೇಜರ್ ಕೆನ್ನೆಗೆ ಬಾರಿಸಿದರು ಶಿವ ಸೇನಾ ಶಾಸಕ ಬಣಗಾರ್!
ಸಂತೋಷ ಬಣಗಾರ್, ಶಿವ ಸೇನಾ ಶಾಸಕImage Credit source: MID-DAY
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 16, 2022 | 3:05 PM

Share

ಕಳೆದ ತಿಂಗಳು ಮಹಾರಾಷ್ಟ್ರ ಸರ್ಕಾರ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shindhe) ಬಹುಮತ ಸಾಬೀತು ಮಾಡಲು ಕೆಲವೇ ಗಂಟೆ ಉಳಿದಿದ್ದಾಗ ಉದ್ಧವ್ ಠಾಕ್ರೆ (Uddhav Thackeray) ಕ್ಯಾಂಪ್ನಿಂದ ಶಿಂಧೆ ಕ್ಯಾಂಪ್ ಗೆ ಜಿಗಿದು ಸುದ್ದಿಯಾಗಿದ್ದ ಶಿವ ಸೇವಾ ಶಾಸಕ ಸಂತೋಷ್ ಬಣಗಾರ್ (Santosh Bangar) ಅವರು ಸೋಮವಾರದಂದು ಹಿಂಗೋಲಿಯ ಕೂಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡಿದ್ದಕ್ಕೆ ಖಾಸಗಿ ಕೇಟರಿಂಗ್ ಸಂಸ್ಥೆಯೊಂದರ ಮ್ಯಾನೇಜರ್ ಗೆ ಮನಬಂದಂತೆ ನಿಂದಿಸುವುದರ ಜೊತೆಗೆ ಅವರ ಮೇಲೆ ಹಲ್ಲೆ ನಡೆಸಿದರೆಂದು ಅರೋಪಿಸಲಾಗಿದೆ. ಹಿಂಗೋಲಿ, ಬಣಗಾರ್ ಪ್ರತಿನಿಧಿಸುವ ವಿಧಾನ ಸಭಾ ಕ್ಷೇತ್ರವಾಗಿದೆ.

ಊಟ ಸರಬರಾಜು ಮ್ಯಾನೇಜರ್ ಗೆ ಊಟದ ಗುಣಮಟ್ಟದ ಬಗ್ಗೆ ಬಣಗಾರ್ ಪ್ರಶ್ನಿಸುವ ಮತ್ತು ಅವನ ತಲೆ ಮತ್ತು ಕೆನ್ನೆಗೊಮ್ಮೆ ಬಾರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಸಕರು ಪರಿಶೀಲಿಸಿದ್ದು ತಂಗಳಾಗಿದ್ದ ಆಹಾರ ಮತ್ತು ಅದನ್ನು ಬಿಸಾಡಲಿದ್ದೇವೆ ಅಂತ ಹೇಳಿದರೂ ಅವರು ತನ್ನ ಮಾತು ಕೇಳದೆ ಕೆನ್ನೆಗೆ ಬಾರಿಸಿದರೆಂದು ಮ್ಯಾನೇಜರ್ ನಂತರ ಹೇಳಿದ್ದಾನೆ.

ಮಹಾರಾಷ್ಟ್ರ ಸರ್ಕಾರದ ಮಿಡ್​ಡೇ ಮೀಲ್ ಸ್ಕೀಮ್ ಯೋಜನೆಯಡಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಮಧ್ಯಾಹ್ನದ ಊಟ ಸರಬರಾಜು ಮಾಡಲಾಗುತ್ತದೆ. ಸದರಿ ಯೋಜನೆಯ ಗುತ್ತಿಗೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಊಟವನ್ನು ಹಿಂಗೋಲಿ ನಗರದಾದ್ಯಾಂತ ಇರುವ ಕಾರ್ಮಿಕರಿಗೆ ಸರಬರಾಜು ಮಾಡುವ ಮೊದಲು ಅದನ್ನು ಗುತ್ತಿಗೆದಾರನಿಗೆ ಸೇರಿದ ಸ್ಥಳದಲ್ಲಿ ತಯಾರಿಸಲಾಗುತ್ತದೆ.

ಕಾರ್ಮಿಕರಿಗೆ ಸರಬರಾಜು ಮಾಡಲಾಗುತ್ತಿರುವ ಆಹಾರ ಕಳಪೆ ದರ್ಜೆಯದ್ದು ಅಂತ ದೂರು ಸ್ವೀಕರಿಸಿದ ನಂತರವೇ ತಾನು ಆಹಾರ ತಯಾರಾಗುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಎಂದು ಬಣಗಾರ್ ನಂತರ ಹೇಳಿದರು.

Follow Us
TV9 Web
TV9 Web

TV9 Kannada

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ