Rafale Jets: ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳು

| Updated By: Digi Tech Desk

Updated on: Apr 22, 2021 | 11:33 AM

ಭಾರತಕ್ಕೆ ಬಂದಿಳಿದ ಯುದ್ಧ ವಿಮಾನಗಳ ಪೈಕಿ ನಾಲ್ಕು ರಫೇಲ್​ ವಿಮಾನಗಳು ಹೊಸ ಬ್ಯಾಚ್​ನ ಭಾಗವಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಆದರೆ, ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ ಒಟ್ಟು ಯುದ್ಧ ವಿಮಾನಗಳ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ.

Rafale Jets: ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳು
ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ ಯುದ್ಧ ವಿಮಾನಗಳು
Follow us on

ದೆಹಲಿ: ಫ್ರಾನ್ಸ್​ ಜೊತೆ ಭಾರತ ಮಾಡಿಕೊಂಡಿರುವ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಪ್ರಕಾರ 5ನೇ ಬ್ಯಾಚ್​ನ ರಫೇಲ್​​ ಯುದ್ಧ ವಿಮಾನಗಳು 8,000 ಕಿಲೋ ಮೀಟರ್​ ಸಂಚರಿಸಿ ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದಿವೆ. ಈ ಕುರಿತಂತೆ ಭಾರತೀಯ ವಾಯುಪಡೆ ( ಐಎಎಫ್​ ) ಮಾಹಿತಿ ಹಂಚಿಕೊಂಡಿದೆ.

ಭಾರತಕ್ಕೆ ಬಂದಿಳಿದ ಯುದ್ಧ ವಿಮಾನಗಳ ಪೈಕಿ ನಾಲ್ಕು ರಫೇಲ್​ ವಿಮಾನಗಳು ಹೊಸ ಬ್ಯಾಚ್​ನ ಭಾಗವಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಆದರೆ, ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ ಒಟ್ಟು ಯುದ್ಧ ವಿಮಾನಗಳ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ. ಫ್ರಾನ್ಸ್​ನಿಂದ ಯುದ್ಧ ವಿಮಾನಗಳು ಹೊರಟಾಗ ದಾರಿ ಮಧ್ಯದಲ್ಲಿ ಬೇಕಾದ ಇಂಧನದ ಪೂರೈಕೆಯನ್ನು ಫ್ರಾನ್ಸ್​ನ ವಾಯಪಡೆ ಮತ್ತು ಯುನೈಟೆಡ್​ ಅರಬ್​ ಎಮೀರೇಟ್ಸ್​ (ಯುಎಇ) ನೆರವು ನೀಡಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ಹಂಚಿಕೊಂಡಿದೆ.

ಫ್ರಾನ್ಸ್​ ಪ್ರವಾಸದಲ್ಲಿರುವ ಏರ್​ ಚೀಫ್​ ಮಾರ್ಷಲ್​ ಆರ್​ಕೆಎಸ್​ ಭದೌರಿಯಾ ಅವರು ಫ್ರಾನ್ಸ್​ನ ಮೆರಿಗ್ನಾಕ್​ ವಾಯುನೆಲೆಯಲ್ಲಿ ವಿಮಾನಗಳಿಗೆ ಫ್ಲ್ಯಾಗ್​ ಆಫ್​ ಮಾಡಿದ್ದರು. ಏರ್​ಚೀಫ್​ ಮಾರ್ಷಲ್​ ತಮ್ಮ ಐದು ದಿನಗಳ ಫ್ರಾನ್ಸ್​ ಪ್ರವಾಸದಲ್ಲಿ ರಫೇಲ್​ ವಿಮಾನ ತರಬೇತಿ ಕೇಂದ್ರಕ್ಕೂ ಭೇಟಿ ನೀಡಿದ್ದರು. ಏಪ್ರಿಲ್​ ತಿಂಗಳ ಮೊದಲನೇಯ ದಿನ 4ನೇ ಬ್ಯಾಚ್​ನ 3 ರಫೇಲ್​ ಯುದ್ಧ ವಿಮಾಗಳು ಭಾರತಕ್ಕೆ ಬಂದಿದ್ದವು. ಕೊವಿಡ್​ ಸಮಯದಲ್ಲಿಯೂ ಸಮಯಕ್ಕೆ ಸರಿಯಾಗಿ ವಿಮಾನಗಳನ್ನು ವಿತರಣೆ ಮಾಡಿದ ಫ್ರಾನ್ಸ್​ಗೆ ಧನ್ಯವಾದಗಳು ಎಂದು ಶ್ಲಾಘಿಸಲಾಗಿದೆ.

ಇಲ್ಲಿಯವರೆಗೆ 14 ರಫೇಲ್ ಜೆಟ್​ಗಳು ಐಎಎಫ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಬ್ಯಾಚ್​ನಲ್ಲಿ ಇನ್ನಷ್ಟು ವಿಮಾನ ಸೇರ್ಪಡೆಯಾದ ನಂತರ ಈ ಸಂಖ್ಯೆ 18ಕ್ಕೆ ಏರಿಕೆಯಾಗಲಿದೆ. ಈಗಾಗಲೇ ಐದು ರಫೇಲ್​ ಜೆಟ್​ಗಳು ಮೊದಲ ಬ್ಯಾಚ್​ನಲ್ಲಿ ಅಂದರೆ ಕಳೆದ ಜುಲೈ 29 ರಂದು ಭಾರತಕ್ಕೆ ಬಂದಿಳಿದಿತ್ತು.

ಇದನ್ನೂ ಓದಿ: ಭಾರತಕ್ಕೆ ಬಂದಿಳಿಯಿತು ಇನ್ನೂ 3 ರಫೇಲ್​ ಯುದ್ಧ ವಿಮಾನ

(four rafale jets for india from french air base iaf chief rks bhadauria flags host)

Published On - 11:03 am, Thu, 22 April 21