ಉತ್ತರ ಪ್ರದೇಶದಲ್ಲಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ರೈಲು; 5 ಮಂದಿ ಸಾವು
ಶಹಜಾನ್ಪುರ: ಉತ್ತರ ಪ್ರದೇಶದ ಶಹಜಾನ್ಪುರದಲ್ಲಿ ರೈಲು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 5ಮಂದಿ ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಘಟನೆ ನಡೆದಿದ್ದು ಶಹಜಾನ್ಪುರದ ಮ್ಯಾನ್ ಲೆವೆಲ್ ಕ್ರಾಸಿಂಗ್ ಬಳಿ. ಅಂದರೆ ವಾಹನ ಸಂಚಾರ ರಸ್ತೆ ಮತ್ತು ರೈಲ್ವೆ ಹಳಿ ಕೂಡುವಲ್ಲಿ ಒಂದು ಗೇಟ್ ಇಡಲಾಗುತ್ತದೆ. ರೈಲು ಬರುವ ಹೊತ್ತಿಗೆ ಈ ಗೇಟ್ನ್ನು ಮುಚ್ಚಬೇಕು. ಆದರೆ ಶಹಜಾನ್ಪುರದ ಈ ಕ್ರಾಸಿಂಗ್ ಬಳಿ ಗೇಟ್ ತೆರೆದೇ ಇದ್ದ ಕಾರಣ ಈ ಅವಘಡ ನಡೆದಿದೆ. ರೈಲ್ವೆ ಮ್ಯಾನೆಲ್ ಕ್ರಾಸಿಂಗ್ […]
ಶಹಜಾನ್ಪುರ: ಉತ್ತರ ಪ್ರದೇಶದ ಶಹಜಾನ್ಪುರದಲ್ಲಿ ರೈಲು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 5ಮಂದಿ ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಘಟನೆ ನಡೆದಿದ್ದು ಶಹಜಾನ್ಪುರದ ಮ್ಯಾನ್ ಲೆವೆಲ್ ಕ್ರಾಸಿಂಗ್ ಬಳಿ. ಅಂದರೆ ವಾಹನ ಸಂಚಾರ ರಸ್ತೆ ಮತ್ತು ರೈಲ್ವೆ ಹಳಿ ಕೂಡುವಲ್ಲಿ ಒಂದು ಗೇಟ್ ಇಡಲಾಗುತ್ತದೆ. ರೈಲು ಬರುವ ಹೊತ್ತಿಗೆ ಈ ಗೇಟ್ನ್ನು ಮುಚ್ಚಬೇಕು. ಆದರೆ ಶಹಜಾನ್ಪುರದ ಈ ಕ್ರಾಸಿಂಗ್ ಬಳಿ ಗೇಟ್ ತೆರೆದೇ ಇದ್ದ ಕಾರಣ ಈ ಅವಘಡ ನಡೆದಿದೆ.
ರೈಲ್ವೆ ಮ್ಯಾನೆಲ್ ಕ್ರಾಸಿಂಗ್ ಬಳಿ ವಾಹನಗಳಿಗೆ ಡಿಕ್ಕಿ ಹೊಡೆದ ಲಖನೌ-ಚಂಡಿಗಢ್ ಸೂಪರ್ ಪಾಸ್ಟ್ ರೈಲು ನಂತರ ಹಳಿ ತಪ್ಪಿದೆ. ಇದರಿಂದಾಗಿ ಎರಡೂ ದಿಕ್ಕಿನಿಂದಲೂ ರೈಲು ಸಂಚಾರಕ್ಕೆ ತೊಡಕಾಗಿತ್ತು ಎಂದು ಸ್ಥಳೀಯ ಗ್ರಾಮಾಂತರ ಎಸ್ಪಿ ಸಂಜೀವ್ ಬಾಜ್ಪೇಯಿ ತಿಳಿಸಿದ್ದಾರೆ.
ಮೀರಾನ್ಪುರ ಕತ್ರಾ ರೈಲ್ವೆ ಸ್ಟೇಶನ್ ದಾಟಿದ ರೈಲು ಮಾರ್ಗದಲ್ಲಿ ಸಿಗುವ ಮ್ಯಾನೆಲ್ ಕ್ರಾಸ್ನಲ್ಲಿ ಎರಡು ಟ್ರಕ್, ಒಂದು ಕಾರು ಮತ್ತು ಒಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಮೃತಪಟ್ಟ ಐವರಲ್ಲಿ ಮೂವರು ಒಂದೇ ಕುಟುಂಬದವರು. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ರೈಲು ಬರುವ ಸಮಯವಾದರೂ ಗೇಟ್ ಯಾಕೆ ತೆರೆದಿತ್ತು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಎಸ್ಪಿ ಹೇಳಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸರು, ರೈಲ್ವೆ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ರೈಲ್ವೆ ಇಲಾಖೆಯ ಇಂಜಿನಿಯರ್ಗಳು ಧಾವಿಸಿದ್ದಾರೆ. ಅಲ್ಲಿ ಹಾಳಾಗಿರುವ ಹಳಿ ದುರಸ್ತಿ ಕಾರ್ಯ ನಡೆಯುತ್ತಿದೆ. ಎಲ್ಲವೂ ಸರಿ ಆಗಿ, ರೈಲುಗಳು ಸಂಚರಿಸಲು ಇನ್ನೂ ಮೂರ್ನಾಲ್ಕು ತಾಸಾದರೂ ಬೇಕು ಎಂದು ಜಿಲ್ಲಾಧಿಕಾರಿ ವಿಕ್ರಮ್ ಸಿಂಗ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಪರಿಹಾರ ಘೋಷಿಸಿದ್ದು, ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಎಷ್ಟು ಪ್ರಯತ್ನಿಸಿದರೂ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ, ಆ್ಯಂಬುಲೆನ್ಸ್ ತಬ್ಬಿ ಕಣ್ಣೀರು ಹಾಕಿದ ಪೊಲೀಸ್ ಸಿಬ್ಬಂದಿ
ಮೊಹಮದ್ ನಲಪಾಡ್ ಅಂಡ್ ಗ್ಯಾಂಗ್ ನನಗೆ ಹಿಂಸಿಸುತ್ತಿದ್ದಾರೆ- ಹೈಗ್ರೌಂಡ್ಸ್ ಠಾಣೆಯಲ್ಲಿ 3 ಪುಟಗಳ ದೂರು ದಾಖಲು