ಫ್ರಾನ್ಸ್​ನಲ್ಲಿ ಓದ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ಉಡುಗೊರೆ ಕೊಟ್ಟ ಮ್ಯಾಕ್ರನ್

2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ತನ್ನ ವಿಶ್ವವಿದ್ಯಾಲಯಗಳಿಗೆ ಸ್ವಾಗತಿಸುವ ಗುರಿಯನ್ನು ಫ್ರಾನ್ಸ್ ಹೊಂದಿದೆ ಎಂದು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಶುಕ್ರವಾರ ಹೇಳಿದ್ದಾರೆ. ಫ್ರೆಂಚ್ ಮಾತನಾಡದ ವಿದ್ಯಾರ್ಥಿಗಳಿಗೆ ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಅಂತಾರಾಷ್ಟ್ರೀಯ ತರಗತಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಇದು ಉಭಯ ದೇಶಗಳ ನಡುವಿನ ಶೈಕ್ಷಣಿಕ ಸಂಬಂಧಗಳನ್ನು ಹೆಚ್ಚಿಸುವ ಪ್ರಮುಖ ಪ್ರಯತ್ನವಾಗಿದೆ.

ಫ್ರಾನ್ಸ್​ನಲ್ಲಿ ಓದ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ಉಡುಗೊರೆ ಕೊಟ್ಟ ಮ್ಯಾಕ್ರನ್
ಮ್ಯಾಕ್ರನ್-ಮೋದಿ
Image Credit source: India Today

Updated on: Jan 26, 2024 | 9:49 AM

2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ತನ್ನ ವಿಶ್ವವಿದ್ಯಾಲಯಗಳಿಗೆ ಸ್ವಾಗತಿಸುವ ಗುರಿಯನ್ನು ಫ್ರಾನ್ಸ್ ಹೊಂದಿದೆ ಎಂದು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಶುಕ್ರವಾರ ಹೇಳಿದ್ದಾರೆ. ಫ್ರೆಂಚ್ ಮಾತನಾಡದ ವಿದ್ಯಾರ್ಥಿಗಳಿಗೆ ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಅಂತಾರಾಷ್ಟ್ರೀಯ ತರಗತಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಇದು ಉಭಯ ದೇಶಗಳ ನಡುವಿನ ಶೈಕ್ಷಣಿಕ ಸಂಬಂಧಗಳನ್ನು ಹೆಚ್ಚಿಸುವ ಪ್ರಮುಖ ಪ್ರಯತ್ನವಾಗಿದೆ.

ನಾವು ಫ್ರೆಂಚ್ ಕಲಿಯಲು ಹೊಸ ಕೇಂದ್ರಗಳೊಂದಿಗೆ ಅಲೈಯನ್ಸ್ ಫ್ರಾಂಚೈಸ್‌ಗಳ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಾವು ಅಂತಾರಾಷ್ಟ್ರೀಯ ತರಗತಿಗಳನ್ನು ರಚಿಸುತ್ತಿದ್ದೇವೆ, ಇದು ಫ್ರೆಂಚ್ ಮಾತನಾಡದ ವಿದ್ಯಾರ್ಥಿಗಳಿಗೆ ನಮ್ಮ ವಿಶ್ವವಿದ್ಯಾಲಯಗಳಿಗೆ ಸೇರಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ನಡೆದ 75ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮ್ಯಾಕ್ರನ್ ಈ ವಿಚಾರ ತಿಳಿಸಿದ್ದಾರೆ.
ಈ ಯೋಜನೆಯು ಭಾರತದೊಂದಿಗೆ ಫ್ರಾನ್ಸ್‌ನ ಸಂಬಂಧವನ್ನು ಬಲಪಡಿಸುವ ಮಹತ್ವಾಕಾಂಕ್ಷೆಯ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದರು.

ಮತ್ತಷ್ಟು ಓದಿ: 75ನೇ ಗಣರಾಜ್ಯೋತ್ಸವದಲ್ಲಿ ಹಲವು ವಿಶೇಷ! ಇಲ್ಲಿದೆ ವಿವರ

ಜುಲೈ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಯ ನಂತರ ಅವರು ಗುರಿಯನ್ನು ಘೋಷಿಸಿದ್ದರು.
ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಿದ ಮಾಜಿ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲಾಗುವುದು ಮತ್ತು ಅವರು ಹಿಂತಿರುಗಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ. ಫ್ರಾನ್ಸ್ 2025 ರ ವೇಳೆಗೆ 20,000 ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದ್ದು, 2030 ರ ವೇಳೆಗೆ 30,000 ರ ದೊಡ್ಡ ಗುರಿಗೆ ವೇದಿಕೆಯನ್ನು ಸಿದ್ಧಪಡಿಸುತ್ತದೆ.

ಭಾರತೀಯ ವಿದ್ಯಾರ್ಥಿಗಳು ಫ್ರಾನ್ಸ್‌ನಲ್ಲಿ ಕಲಿಯಲು ಸುಲಭವಾಗುವಂತೆ ಫ್ರೆಂಚ್ ಸರ್ಕಾರ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. 2018 ರಲ್ಲಿ, ಇದು ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಆಸಕ್ತಿ ಹೊಂದಿರುವ ಭಾರತೀಯ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಬೆಂಬಲವನ್ನು ಒದಗಿಸುವ ಕ್ಯಾಂಪಸ್ ಫ್ರಾನ್ಸ್ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು.

ಇದನ್ನು ಆರಂಭಿಸಿದಾಗಿನಿಂದ ಫ್ರಾನ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ.20ರಷ್ಟು ಹೆಚ್ಚಾಗಿದೆ. ಉಭಯ ನಾಯಕರು ಪಿಂಕ್ ಸಿಟಿಯಲ್ಲಿ ರೋಡ್‌ಶೋ ಮೂಲಕ ತಮ್ಮ ಬಲವಾದ ಬಾಂಧವ್ಯವನ್ನು ಪ್ರದರ್ಶಿಸಿದರು, ಅಲ್ಲಿ ಮ್ಯಾಕ್ರನ್ ಅವರಿಗೆ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿಯನ್ನು ನೀಡಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ