ನಿಮಗೆ ಬ್ಯಾಂಕ್ ಕೆಲಸವೇನಾದರೂ ಇದ್ದರೆ ಮಾರ್ಚ್ 27ರೊಳಗೆ ಮುಗಿಸಿಕೊಂಡು ಬಿಡಿ. ಯಾಕೆಂದರೆ ಮಾರ್ಚ್ 27ರಿಂದ ಏಪ್ರಿಲ್ 4ರವರೆಗೂ ಬ್ಯಾಂಕ್ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿದ ಕ್ಯಾಲೆಂಡರ್ನಲ್ಲಿ ಬ್ಯಾಂಕ್ಗಳ ರಜೆಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸುಮಾರು ಏಳುದಿನವೂ ಬಹುತೇಕ ರಜೆಯೇ ಆಗಿದ್ದು, ಗ್ರಾಹಕರು ಆದಷ್ಟು ಬೇಗ ತಮ್ಮ ಕೆಲಸ ಮುಗಿಸಿಕೊಳ್ಳಬೇಕು. ಇಲ್ಲವೇ ಏಪ್ರಿಲ್ ನಾಲ್ಕರ ನಂತರ ಪ್ಲ್ಯಾನ್ ಮಾಡಿಕೊಳ್ಳಬೇಕು.
ಹಣಕಾಸು ವರ್ಷದ ಅಂತ್ಯ, ನಾಲ್ಕನೇ ಶನಿವಾರ, ಹೋಳಿ ಹಬ್ಬಗಳೆಲ್ಲ ಒಟ್ಟಿಗೇ ಬಂದಿದ್ದರಿಂದ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಅದರಲ್ಲಿ ಮಾರ್ಚ್ 30 ಮತ್ತ ಏಪ್ರಿಲ್ 3ರಂದು ಬ್ಯಾಂಕ್ಗಳು ಕಾರ್ಯನಿರ್ವಹಿಸಲಿವೆ. ಅದರಲ್ಲಿ ಮಾರ್ಚ್ 30ರಂದು ಬಿಹಾರದ ಪಾಟ್ನಾದಲ್ಲಿ ಯಾವ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ಉಳಿದಂತೆ ದೇಶದ ಬೇರೆಕಡೆಗಳಲ್ಲಿ ಎಲ್ಲ ಬ್ಯಾಂಕ್ಗಳ ಸೇವೆಯೂ ಇರುತ್ತದೆ ಎಂದು ಆರ್ಬಿಐ ತಿಳಿಸಿದೆ. ಗೊಂದಲ ಬೇಡ.. ಕೆಳಗೆಕೊಟ್ಟಿರುವ ರಜೆಯ ವಿವರವನ್ನೊಮ್ಮೆ ಓದಿಕೊಂಡುಬಿಡಿ..:
ಇದರಲ್ಲಿ ಮಾರ್ಚ್ 30 ಮತ್ತು ಏಪ್ರಿಲ್ 3ರಂದು ಬ್ಯಾಂಕ್ಗಳು ಕಾರ್ಯನಿರ್ವಹಿಸಲಿವೆ. ಆದರೆ ಮಾರ್ಚ್ 31ರಂದು ಪಾಟ್ನಾದಲ್ಲಿ ಬ್ಯಾಂಕ್ಗಳಿಗೆ ರಜೆ ಮುಂದುವರಿಯಲಿವೆ. ಇನ್ನು ಬ್ಯಾಂಕ್ ರಜೆಗಳು ಎಟಿಎಂ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಮೊಬೈಲ್ ಬ್ಯಾಂಕಿಂಗ್, ಆನ್ಲೈನ್ ಬ್ಯಾಂಕಿಂಗ್ಗಳೂ ಗ್ರಾಹಕರಿಗೆ ಲಭ್ಯ ಇರಲಿವೆ. ಆದರೆ ಬ್ಯಾಂಕ್ಗೆ ಹೋಗಿ, ಹಣ ಡಿಪಾಸಿಟ್ ಮಾಡುವುದು, ಹಣ ವಿತ್ ಡ್ರಾ ಮಾಡುವುದು ಸೇರಿ ಇನ್ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಕೇಳಿದ 10 ಜನರಲ್ ನಾಲೆಡ್ಜ್ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್! ನಿಮಗೆ ಉತ್ತರ ಗೊತ್ತಾ?
ದರ್ಶನ್-ಸುದೀಪ್ ಒಂದಾಗಿಸಲು ಪಣ ತೊಟ್ಟ ಫ್ಯಾನ್ಸ್! ಈ ಮನವಿಗೆ ಒಪ್ಪಿಕೊಳ್ತಾರಾ ಕಿಚ್ಚ-ದಚ್ಚು?
Published On - 11:20 am, Wed, 24 March 21