ಮತ್ತೊಮ್ಮೆ ಅಪಹರಣಕ್ಕೊಳಗಾಗುವ ಭಯವಿದೆ ಎಂದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ

| Updated By: ರಶ್ಮಿ ಕಲ್ಲಕಟ್ಟ

Updated on: Nov 29, 2021 | 1:39 PM

ನನ್ನ ವಕೀಲರು ಆಂಟಿಗುವಾ ಮತ್ತು ಡೊಮಿನಿಕಾ ಎರಡರಲ್ಲೂ ಕೇಸ್‌ಗಳ ವಿರುದ್ಧ ಹೋರಾಡುತ್ತಿದ್ದಾರೆ . ನಾನು ಗೆಲ್ಲುವೆ ಎಂಬ ಸಂಪೂರ್ಣ ನಂಬಿಕೆ ಇದೆ. ಏಕೆಂದರೆ ನಾನು ಆಂಟಿಗ್ವಾನ್ ಪ್ರಜೆಯಾಗಿದ್ದು  ನನ್ನನ್ನು ಅಪಹರಣ ಮಾಡಲಾಗಿದೆ ಎಂದ ಮೆಹುಲ್ ಚೋಕ್ಸಿ.

ಮತ್ತೊಮ್ಮೆ ಅಪಹರಣಕ್ಕೊಳಗಾಗುವ ಭಯವಿದೆ ಎಂದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ
Follow us on

ದೆಹಲಿ: ನಾನು ಮತ್ತೆ ಅಪಹರಣಕ್ಕೊಳಗಾಗಬಹುದು ಮತ್ತು ಗಯಾನಾಕ್ಕೆ ಕರೆದೊಯ್ಯಬಹುದು. ಅಲ್ಲಿಂದ ಅಕ್ರಮ, ಕಾನೂನುಬಾಹಿರ ರೀತಿಯಲ್ಲಿ ಕರೆದುಕೊಂಡು ಹೋಗಬಹುದು ಎಂದು ಭಯಪಡುತ್ತಿರುವುದಾಗಿ ಪರಾರಿಯಾದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ (Mehul Choksi) ಹೇಳಿದ್ದಾರೆ. ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಚೋಕ್ಸಿ, “ನನ್ನನ್ನು ಮತ್ತೊಮ್ಮೆ ಬಲವಂತವಾಗಿ ಅಪಹರಿಸಬಹುದು ಮತ್ತು ಗಯಾನಾಕ್ಕೆ (Guyana)ಕರೆದೊಯ್ಯಬಹುದು. ಅಲ್ಲಿ ಬಲವಾದ ಭಾರತೀಯರ ಉಪಸ್ಥಿತಿ ಇದೆ.ಕಾನೂನುಬಾಹಿರ ರೀತಿಯಲ್ಲಿ ನನ್ನನ್ನು ಹೊರಹಾಕಲು ಅದನ್ನು ಬಳಸಿಕೊಳ್ಳಬಹುದು ಎಂದಿದ್ದಾರೆ. “ನಾನು ಪ್ರಸ್ತುತ ಆಂಟಿಗುವಾದಲ್ಲಿರುವ(Antigua) ನನ್ನ ಮನೆಯ ಸೀಮಿತ ಪರಿಧಿಯಲ್ಲಿದ್ದೇನೆ. ನನ್ನ ಕ್ಷೀಣವಾದ ಆರೋಗ್ಯವು ನನ್ನನ್ನು ಬೇರೆಲ್ಲಿಯೂ ಹೋಗಲು ಅನುಮತಿಸುವುದಿಲ್ಲ. ನನ್ನ ಭಾರತೀಯ ಸೆರೆಯಾಳುಗಳ ಕೈಯಲ್ಲಿ ನಾನು ಅನುಭವಿಸಿದ ಆಘಾತಕಾರಿ ಅನುಭವವು ಹೀಗೆ ಕುಗ್ಗಲು ಕಾರಣವಾಯಿತು ಎಂದು ಅವರು ಆರೋಪಿಸಿದರು. “ಕಳೆದ ಕೆಲವು ತಿಂಗಳುಗಳಲ್ಲಿ ನನ್ನ ಅನುಭವಗಳ ಆಘಾತದಿಂದ ನಾನು ನಿರಂತರ ಭಯದಿಂದ ಮುಳುಗಿರುವ ಕಾರಣ ನನ್ನ ಮಾನಸಿಕ ಆರೋಗ್ಯದ ಹದೆಗಟ್ಟಿದೆ. ಅದಕ್ಕಾಗಿ ನಾನು ಸಹಾಯ ಪಡೆಯುತ್ತಿದ್ದೇನೆ. ನನ್ನ ವೈದ್ಯರ ಶಿಫಾರಸುಗಳ ಹೊರತಾಗಿಯೂ ನಾನು ನನ್ನ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ ಮತ್ತು ನಾನು ಈಗ ಕಣ್ಣಿನಿಂದ ತಪ್ಪಿಸಲು ಪ್ರಯತ್ನಿಸುತ್ತಿರುತ್ತೇನೆ. ನನ್ನ ಹದಗೆಟ್ಟಿರುವ ಆರೋಗ್ಯವು ನನಗೆ ಏನನ್ನೂ ಮಾಡಲು ಅನುಮತಿಸುವುದಿಲ್ಲ.

ನನ್ನ ವಕೀಲರು ಆಂಟಿಗುವಾ ಮತ್ತು ಡೊಮಿನಿಕಾ ಎರಡರಲ್ಲೂ ಕೇಸ್‌ಗಳ ವಿರುದ್ಧ ಹೋರಾಡುತ್ತಿದ್ದಾರೆ . ನಾನು ಗೆಲ್ಲುವೆ ಎಂಬ ಸಂಪೂರ್ಣ ನಂಬಿಕೆ ಇದೆ. ಏಕೆಂದರೆ ನಾನು ಆಂಟಿಗ್ವಾನ್ ಪ್ರಜೆಯಾಗಿದ್ದು  ನನ್ನನ್ನು ಅಪಹರಣ ಮಾಡಲಾಗಿದೆ. ನನ್ನ ಇಚ್ಛೆಗೆ ವಿರುದ್ಧವಾಗಿ ಬೇರೆ ದೇಶಕ್ಕೆ ಕರೆದೊಯ್ಯಲಾಯಿತು ಎಂದು ಅವರು ಆರೋಪಿಸಿದರು.

“ನನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲು ಕೆಲವು ಸರ್ಕಾರಗಳು ಎಷ್ಟು ಮಟ್ಟಿಗೆ ಸಿದ್ಧವಾಗಿವೆ ಎಂಬುದು ದೊಡ್ಡ ವಿಷಯವಾಗಿದೆ. ಆದರೆ ಕಾಮನ್‌ವೆಲ್ತ್ ರಾಷ್ಟ್ರಗಳ ಕಾನೂನು ವ್ಯವಸ್ಥೆಗಳಲ್ಲಿ ನಾನು ಸಂಪೂರ್ಣ ನಂಬಿಕೆ ಹೊಂದಿದ್ದೇನೆ. ಕೊನೆಯಲ್ಲಿ ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಅವರು ಹೇಳಿದರು.

ಈ ವರ್ಷ ಮೇ 23 ರಂದು ಆಂಟಿಗುವಾದಿಂದ ಭೋಜನಕ್ಕೆ ಹೋಗಿದ್ದ ಚೋಕ್ಸಿ ನಾಪತ್ತೆಯಾಗಿದ್ದು ನಂತರ ಡೊಮಿನಿಕಾದಲ್ಲಿ ಸಿಕ್ಕಿಬಿದ್ದರು. ಭಾರತಕ್ಕೆ ಹಸ್ತಾಂತರಿಸುವುದನ್ನು ತಪ್ಪಿಸುವ ಸಂಭವನೀಯ ಪ್ರಯತ್ನದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ತಪ್ಪಿಸಿಕೊಂಡ ನಂತರ ಡೊಮಿನಿಕಾದಲ್ಲಿ ಪೊಲೀಸರು ಅಕ್ರಮವಾಗಿ ಕರೆದೊಯ್ದಿದ್ದಾರೆ ಎಂದು ಅವರು ಆರೋಪ ಹೊರಿಸಿದ್ದರು. ನಂತರ ಜುಲೈ 12 ರಂದು ಡೊಮಿನಿಕಾ ಹೈಕೋರ್ಟ್ ವೈದ್ಯಕೀಯ ಕಾರಣಗಳಿಗಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (PNB) ₹13,500 ಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ  62 ವರ್ಷದ  ಚೋಕ್ಸಿ ಭಾರತದಲ್ಲಿ ವಾಟೆಂಡ್ ವ್ಯಕ್ತಿ ಆಗಿದ್ದಾರೆ.

ಇದನ್ನೂ ಓದಿ: Farm Laws Repeal Bill 2021 ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆ ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ಅಂಗೀಕಾರ