ಕೊವಿಡ್ 19 ಎರಡೂ ಡೋಸ್ ಲಸಿಕೆ (Covid 19 Vaccine) ಪಡೆದ ಭಾರತೀಯರು ಅಮೆರಿಕಕ್ಕೆ ಪ್ರಯಾಣ ಮಾಡಬಹುದಾಗಿದೆ. ಈ ಬಗ್ಗೆ ಶ್ವೇತಭವನ ಪ್ರಕಟಣೆ ಹೊರಡಿಸಿದ್ದು, ಎರಡೂ ಡೋಸ್ ಲಸಿಕೆ (Corona Vaccine) ಪಡೆದ ವಿದೇಶಿ ಪ್ರಯಾಣಿಕರು ನವೆಂಬರ್ 8ರಿಂದ ಯುಎಸ್ಗೆ ಬರಬಹುದು ಎಂದು ಹೇಳಿದೆ. ಈ ಹೊಸ ಪ್ರಯಾಣ ಮಾರ್ಗಸೂಚಿಯನ್ನು ಸೆಪ್ಟೆಂಬರ್ನಲ್ಲಿಯೇ ರೂಪಿಸಲಾಗಿದೆ. ನವೆಂಬರ್ ಪ್ರಾರಂಭದಿಂದ 33 ದೇಶಗಳ ಪ್ರಯಾಣಿಕರಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಲಾಗುತ್ತದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹೊಸ ನೀತಿಯ ಎಲ್ಲ ತಾಂತ್ರಿಕ ಮತ್ತು ವ್ಯವಸ್ಥಾಪಕ ವಿವರಗಳನ್ನು ಇನ್ನೂ ಘೋಷಿಸಿಲ್ಲ. .
ಯುಎಸ್ನ ಆಹಾರ ಮತ್ತು ಔಷಧ ಆಡಳಿತ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಯಿಂದ ಅನುಮೋದನೆಗೊಂಡ ಯಾವುದೇ ಲಸಿಕೆ ಪಡೆದ ವಿದೇಶಿಯರು ನವೆಂಬರ್ 8ರಿಂದ ಅಮೆರಿಕಕ್ಕೆ ಪ್ರಯಾಣ ಮಾಡಬಹುದು. ಭಾರತ, ಫ್ರಾನ್ಸ್, ಇಟಲಿ, ಜರ್ಮನಿ, ಸ್ಪೇನ್, ಚೀನಾ, ಇರಾನ್, ಬ್ರೆಜಿಲ್ ಇತರ ದೇಶಗಳ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಭಾರತದಿಂದ ಅಮೆರಿಕಕ್ಕೆ ಹೋಗುವವರು ಏರ್ಪೋರ್ಟ್ನಲ್ಲಿ ವಿಮಾನ ಹತ್ತುವ ಮೊದಲು ಅವರ ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣಪತ್ರ ತೋರಿಸಬೇಕು. ಹಾಗೇ ಕೊವಿಡ್ 19 ಟೆಸ್ಟ್ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು.
ಇದನ್ನೂ ಓದಿ: ದಾವಣಗೆರೆಯಲ್ಲಿ ಮಗುವಿನ ಮೇಲೆ ಹರಿದ ಕಾರು! ಮಗು ಸಾವು, ಗರ್ಭಿಣಿಗೆ ಗಾಯ
Karnataka Weather Today: ಕರ್ನಾಟಕದಲ್ಲಿ ಇಂದು ಹವಾಮಾನ ಹೇಗಿರಲಿದೆ? ಇಲ್ಲಿದೆ ಮಾಹಿತಿ
Published On - 10:51 am, Sat, 16 October 21