G20 Summit 2023 in Delhi highlights: ಜಿ20 ರಾಷ್ಟ್ರಗಳ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ

Rakesh Nayak Manchi
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 09, 2023 | 10:50 PM

G20 Summit 2023 highlights: ಜಿ20 ಶೃಂಗಸಭೆಯ ಎರಡು ದಿನಗಳ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದೆ. ಮೊದಲ ದಿನ ಕಾರ್ಯಕ್ರಮಗಳನ್ನು ಎರಡು ಅವಧಿಗಳಾಗಿ ವಿಂಗಡಿಸಲಾಗಿದೆ. ಜಿ 20 ಸಮ್ಮೇಳನಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಗುಂಪಿನ ಇತರ ನಾಯಕರು ಮತ್ತು ಇತರ ಹಲವು ದೇಶಗಳ ಪ್ರತಿನಿಧಿಗಳು ದೆಹಲಿಗೆ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತ ಮಂಟಪದಲ್ಲಿ ಜಾಗತಿಕ ನಾಯಕರನ್ನು ಭೇಟಿ ಮಾಡಲಿದ್ದಾರೆ. ಮೊದಲ ದಿನದ ಕಾರ್ಯಕ್ರಮ ಬೆಳಗ್ಗೆ 9.30ರಿಂದ ಆರಂಭವಾಗಿದೆ. G20 ಶೃಂಗಸಭೆಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್​ಡೇಟ್ ಇಲ್ಲಿ ಲಭ್ಯ.

G20 Summit 2023 in Delhi highlights: ಜಿ20 ರಾಷ್ಟ್ರಗಳ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ
ರಾಷ್ಟ್ರಪತಿ

G20 Summit 2023 Live Updates: ವಿಶ್ವದ 20 ಶಕ್ತಿಶಾಲಿ ರಾಷ್ಟ್ರಗಳ ಗುಂಪಾದ ಜಿ 20 ಗೆ ಭಾರತ ಆತಿಥ್ಯ ವಹಿಸುತ್ತಿದೆ. ಎರಡು ದಿನಗಳ ಜಿ 20 ಶೃಂಗಸಭೆ ಇಂದು ಪ್ರಾರಂಭವಾಗಿದೆ. ಜಿ 20 ಶೃಂಗಸಭೆಯಲ್ಲಿ ಸೆಪ್ಟೆಂಬರ್ 9 ರ ಕಾರ್ಯಕ್ರಮವು ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಿದೆ. ಎರಡು ದಿನಗಳ ಜಿ 20 ಸಮ್ಮೇಳನದ ಮೊದಲ ಅಧಿವೇಶನವು ‘ಒಂದು ಭೂಮಿ’ ವಿಷಯವನ್ನು ಆಧರಿಸಿದೆ. ಜಿ 20 ಶೃಂಗಸಭೆಯ ಎರಡನೇ ಅಧಿವೇಶನವು ‘ಒಂದು ಕುಟುಂಬ’ ಎಂಬ ವಿಷಯವನ್ನು ಆಧರಿಸಿದೆ.

ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಜಿ 20 ಶೃಂಗಸಭೆ ನಡೆಯುತ್ತಿದೆ. ಹೀಗಾಗಿ ರಾಷ್ಟ್ರ ರಾಜಧಾನಿಯ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದೆಹಲಿಯಲ್ಲಿ ಇಂದು ಸಂಚಾರದ ಮೇಲೆ ಪರಿಣಾಮ ಬೀರಲಿದೆ. ದೆಹಲಿ ಪೊಲೀಸರು ಸಂಚಾರ ಸಲಹೆಯನ್ನು ಸಹ ನೀಡಿದ್ದಾರೆ. ಜಿ 20 ಸಮ್ಮೇಳನಕ್ಕೆ ಬಂದ ಜಾಗತಿಕ ನಾಯಕರ ಸುರಕ್ಷತೆಗಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ಪ್ರಗತಿ ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು. ಎರಡು ದಿನಗಳ ಜಿ 20 ಶೃಂಗಸಭೆಯಲ್ಲಿ ದೆಹಲಿಯ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ.

ಮೊದಲ ದಿನ ಕಾರ್ಯಕ್ರಮಗಳನ್ನು ಎರಡು ಅವಧಿಗಳಾಗಿ ವಿಂಗಡಿಸಲಾಗಿದೆ. ಜಿ 20 ಸಮ್ಮೇಳನಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಗುಂಪಿನ ಇತರ ನಾಯಕರು ಮತ್ತು ಇತರ ಹಲವು ದೇಶಗಳ ಪ್ರತಿನಿಧಿಗಳು ದೆಹಲಿಗೆ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತ ಮಂಟಪದಲ್ಲಿ ಜಾಗತಿಕ ನಾಯಕರನ್ನು ಭೇಟಿ ಮಾಡಲಿದ್ದಾರೆ. ಮೊದಲ ದಿನದ ಕಾರ್ಯಕ್ರಮ ಬೆಳಗ್ಗೆ 9.30ರಿಂದ ಆರಂಭವಾಗಿದೆ. G20 ಶೃಂಗಸಭೆಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್​ಡೇಟ್ ಇಲ್ಲಿ ಲಭ್ಯ.

LIVE NEWS & UPDATES

The liveblog has ended.
  • 09 Sep 2023 09:46 PM (IST)

    G20 Summit 2023 in Delhi Live: ಜಿ20 ಶೃಂಗಸಭೆಯ ನಾಳಿನ ವೇಳಾಪಟ್ಟಿ

    ನವದೆಹಲಿ: ಜಿ20 ಶೃಂಗಸಭೆಯ ನಾಳಿನ ವೇಳಾಪಟ್ಟಿ ಹೀಗಿದ್ದು, ಅತಿಥಿಗಳು ಬೆಳಗ್ಗೆ 8.15ಕ್ಕೆ ರಾಜ್ ಘಾಟ್ ತೆರಳಲಿದ್ದಾರೆ. 9ಗಂಟೆಯ ತನಕ ರಾಜ್ ಘಾಟ್​ಗೆ ಆಗಮಿಸಲಿದ್ದಾರೆ. ಬಳಿಕ 9ರಿಂದ 9.20ರ ತನಕ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ, ಗಾಂಧಿ ಸಮಾಧಿ ಬಳಿ ಶಾಂತಿ ಗಾನ ಗಾಯನ ಆಯೋಜನೆ ಮಾಡಲಾಗಿದೆ. ಬಳಿಕ 9.40ರಿಂದ 10.15ರ ತನಕ ಭಾರತ ಮಂಟಪಂಗೆ ಅತಿಥಿಗಳ ಆಗಮಿಸಲಿದ್ದಾರೆ. 10:15ರಿಂದ 10.30ರ ತನಕ G20 ನೆನಪಿಗಾಗಿ ಗಿಡ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ತದನಂತರ10.30ರಿಂದ 12.30ರ ತನಕ ಶೃಂಗಸಭೆಯ ಮೂರನೇ ಸಭೆ ನಡೆಯಲಿದೆ.

  • 09 Sep 2023 08:09 PM (IST)

    G20 Summit 2023 in Delhi Live: ಜಿ20 ಶೃಂಗಸಭೆಗೆ ಆಗಮಿಸಿರುವ ನಾಯಕರಿಗೆ ಔತಣಕೂಟ

    ನವದೆಹಲಿ: ಜಿ20 ರಾಷ್ಟ್ರಗಳ ನಾಯಕರಿಗೆ ದೆಹಲಿಯ ‘ಭಾರತ್ ಮಂಟಪಂ’ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಔತಣಕೂಟ ಏರ್ಪಡಿಸಿದ್ದು, ವೆಲ್​ಕಮ್ ಡ್ರಿಂಕ್ಸ್ ನೀಡಲು ಸ್ವರ್ಣಲೇಪಿತ ವಸ್ತುಗಳ ಬಳಕೆ ಮಾಡಲಾಗಿದೆ. 200 ಕುಶಲಕರ್ಮಿಗಳು ಸಿದ್ಧಪಡಿಸಿರುವ 15,000 ಬೆಳ್ಳಿ ವಸ್ತುಗಳ ಬಳಕೆ ಮಾಡಿದ್ದು, ಭಾರತದ ಪಾಕಶಾಲೆಯ ವೈವಿಧ್ಯತೆ ಪ್ರತಿಬಿಂಬಿಸಲಿದೆ ಔತಣಕೂಟ.

  • 09 Sep 2023 07:27 PM (IST)

    G20 Summit 2023 in Delhi Live: ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಪ್ರಾರಂಭ; ಪ್ರಧಾನಿ ಟ್ವೀಟ್​

    ದೆಹಲಿಯ ಪ್ರಗತಿ ಮೈದಾನದ ‘ಭಾರತ್ ಮಂಟಪಂ’ದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಪ್ರಾರಂಭ ಕುರಿತು ಟ್ವೀಟ್​ ಮಾಡಿದ್ದಾರೆ.

  • 09 Sep 2023 06:18 PM (IST)

    G20 Summit 2023 in Delhi Live: ಜಾಗತಿಕ ಜೈವಿಕ ಇಂಧನ ಒಕ್ಕೂಟ ರಚಿಸಿದ ಪ್ರಧಾನಿ

    ದೆಹಲಿಯ ಪ್ರಗತಿ ಮೈದಾನದ ‘ಭಾರತ್ ಮಂಟಪಂ’ದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ರಚಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ, ಅರ್ಜೆಂಟೀನಾ ದೇಶದ ಅಧ್ಯಕ್ಷ ಅಲ್ಬರ್ಟೊ ಫರ್ನಾಂಡಿಸ್,​​ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸಮ್ಮುಖದಲ್ಲಿ ಒಕ್ಕೂಟ ಪ್ರಾರಂಭವಾಗಿದೆ.

  • 09 Sep 2023 05:42 PM (IST)

    G20 Summit 2023 in Delhi Live: ಶೃಂಗಸಭೆಯ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಂಡ ಅಮೆರಿಕ ಅಧ್ಯಕ್ಷ, ಬಾಂಗ್ಲಾದೇಶದ ಪ್ರಧಾನಿ

    ದೆಹಲಿಯಲ್ಲಿ ಜಿ20 ಶೃಂಗಸಭೆಯ ಸ್ಥಳದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಒಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

  • 09 Sep 2023 05:19 PM (IST)

    G20 Summit 2023 in Delhi Live: ಜಿ20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆಗೆ ಸಮ್ಮತಿ

    ದೆಹಲಿ: ಜಿ20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆಗೆ ಸಮ್ಮತಿ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು. ದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಡಿಜಿಟಲ್ ಮೂಲ ಸೌಕರ್ಯ ಕ್ಷೇತ್ರದ ಬಗ್ಗೆ ಹೆಚ್ಚು ಚರ್ಚೆಯಾಗಿದ್ದು, ಆಹಾರ, ಪೆಟ್ರೋಲಿಯಂ ಉತ್ಪನ್ನ, ರಸಗೊಬ್ಬರ ವಿಚಾರದ ಬಗ್ಗೆ ಜಿ20 ಶೃಂಗಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಗಿದೆ ಎಂದರು.

  • 09 Sep 2023 04:53 PM (IST)

    G20 Summit 2023 in Delhi Live: ಅಂತಾರಾಷ್ಟ್ರೀಯ ಸಂಘಟನೆಗಳ ಸುಧಾರಣೆ ಬಗ್ಗೆ ಚರ್ಚೆ; ಸಚಿವೆ ನಿರ್ಮಲಾ ಸೀತಾರಾಮನ್

    ದೆಹಲಿಯ ಪ್ರಗತಿ ಮೈದಾನದ ‘ಭಾರತ್ ಮಂಟಪಂ’ದಲ್ಲಿ ಶೃಂಗಸಭೆ ನಡೆಯುತ್ತಿದ್ದು, ಈ ವೇಳೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಅಂತಾರಾಷ್ಟ್ರೀಯ ಸಂಘಟನೆಗಳ ಸುಧಾರಣೆ ಬಗ್ಗೆ, 2030ರ ವೇಳೆಗೆ ಅಭಿವೃದ್ಧಿಯ ಗುರಿಗಳ ಕುರಿತು ಚರ್ಚಿಸಲಾಗಿದ್ದು, ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ , ಈ ಧ್ಯೇಯವಾಕ್ಯ ಗುರಿಯಿಟ್ಟುಕೊಂಡು ಸಮಾಲೋಚನೆ ನಡೆಸಿದ್ದೇವೆ ಎಂದರು.

  • 09 Sep 2023 04:39 PM (IST)

    G20 Summit 2023 in Delhi Live: ಡಿಜಿಟಲ್ ಮೂಲ ಸೌಕರ್ಯ ಕ್ಷೇತ್ರದ ಬಗ್ಗೆ ಹೆಚ್ಚು ಚರ್ಚೆ; ಸಚಿವ ಎಸ್.ಜೈಶಂಕರ್

    ದೆಹಲಿಯ ಪ್ರಗತಿ ಮೈದಾನದ ‘ಭಾರತ್ ಮಂಟಪಂ’ದಲ್ಲಿ ಶೃಂಗಸಭೆ ನಡೆಯುತ್ತಿದ್ದು, ಡಿಜಿಟಲ್ ಮೂಲ ಸೌಕರ್ಯ ಕ್ಷೇತ್ರದ ಬಗ್ಗೆ ಹೆಚ್ಚು ಚರ್ಚೆಯಾಗಿದೆ ಎಂದು ದೆಹಲಿಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಜೊತೆಗೆ ಜಿ20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆಗೆ ಸಮ್ಮತಿ ನೀಡಲಾಗಿದೆ ಎಂದರು.

  • 09 Sep 2023 04:09 PM (IST)

    G20 Summit 2023 in Delhi Live: ನಾಳೆ ಬ್ರಿಟನ್​ ಪ್ರಧಾನಿ ರಿಷಿ ಸುನಕ್, ಪತ್ನಿ ಜೊತೆ ದೆಹಲಿಯ ಅಕ್ಷರಧಾಮಕ್ಕೆ ಭೇಟಿ

    ನವದೆಹಲಿ: ನಾಳೆ ದೆಹಲಿಯ ಅಕ್ಷರಧಾಮಕ್ಕೆ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಪತ್ನಿ ಜೊತೆ ಭೇಟಿ ನೀಡಲಿದ್ದಾರೆ.

  • 09 Sep 2023 02:54 PM (IST)

    G20 Summit 2023 in Delhi Live: ಜಿ-20 ಸದಸ್ಯತ್ವವು ‘ಜಾಗತಿಕ ಸವಾಲುಗಳನ್ನು’ ಎದುರಿಸಲು ಸಹಾಯ; ಆಫ್ರಿಕನ್ ಯೂನಿಯನ್

    ದೆಹಲಿ: ಜಿ-20 ಸದಸ್ಯತ್ವವು ‘ಜಾಗತಿಕ ಸವಾಲುಗಳನ್ನು’ ಎದುರಿಸಲು ಸಹಾಯ ಮಾಡುತ್ತದೆ ಎಂದು ಆಫ್ರಿಕನ್ ಯೂನಿಯನ್ ಟ್ವೀಟ್​ ಮೂಲಕ ತಿಳಿಸಿದೆ.

  • 09 Sep 2023 02:13 PM (IST)

    G20 Summit 2023 in Delhi Live: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ

    ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಇಂದು ದೆಹಲಿಗೆ ಆಗಮಿಸಿದರು. ಮೊದಲ ದಿನದ ‘ಒಂದು ಭೂಮಿ’ಯ ಮೊದಲ ಅಧಿವೇಶನದಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ‘ಒಂದು ಕುಟುಂಬ’ ಎರಡನೇ ಅಧಿವೇಶನದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಎರಡನೇ ಅಧಿವೇಶನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ.

  • 09 Sep 2023 02:09 PM (IST)

    G20 Summit 2023 in Delhi Live: ಜಿ20 ಶೃಂಗಸಭೆಯ ಮೊದಲ ಅವಧಿ ಮುಕ್ತಾಯ

    ದೆಹಲಿಯಲ್ಲಿ ಜಿ20 ಶೃಂಗಸಭೆಯ ಮೊದಲ ಅವಧಿ ಮುಕ್ತಾಯಗೊಂಡಿದೆ ಎಂದು ಟ್ವೀಟರ್​ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ. ‘ಒಂದು ಭೂಮಿ’ ವಿಷಯ ಬಗ್ಗೆ ಮೊದಲ ಅವಧಿಯಲ್ಲಿ ಚರ್ಚೆ ನಡೆದಿದೆ. ಮಾನವ ಕೇಂದ್ರೀಕೃತ ಅಭಿವೃದ್ಧಿ ಹಾಗೂ ಲೈಫ್ ಮಿಷನ್, ಅಂತಾರಾಷ್ಟ್ರೀಯ ಕಿರುಧಾನ್ಯ ವರ್ಷ ಆಚರಣೆ ಬಗ್ಗೆ ಚರ್ಚೆ ನಡೆದಿದೆ. ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ ಹಾಗೂ ಸೌರ ಶಕ್ತಿಗೆ ಉತ್ತೇಜನ, ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗಿದೆ. ರಾಷ್ಟ್ರೀಯ ಹಸಿರು ಅನಿಲ ಮಿಷನ್, ಹಸಿರು ಗ್ರಿಡ್ಸ್ ಆರಂಭ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

  • 09 Sep 2023 02:05 PM (IST)

    G20 Summit 2023 in Delhi Live: ಜಗತ್ತು ಮತ್ತೊಮ್ಮೆ ಜಿ 20 ಕಡೆಗೆ ನೋಡುತ್ತಿದೆ: ರಿಷಿ ಸುನಕ್

    “ಹದಿನೈದು ವರ್ಷಗಳ ಹಿಂದೆ, ಆರ್ಥಿಕ ಬಿಕ್ಕಟ್ಟಿನ ನಂತರ ಜಾಗತಿಕ ಬೆಳವಣಿಗೆಯನ್ನು ಪುನಃಸ್ಥಾಪಿಸಲು ಜಿ 20 ನಾಯಕರು ಮೊದಲ ಬಾರಿಗೆ ಒಗ್ಗೂಡಿದರು. ಅಗಾಧ ಸವಾಲುಗಳ ಸಮಯದಲ್ಲಿ ನಾವು ಭೇಟಿಯಾಗುತ್ತಿದ್ದೇವೆ – ನಾಯಕತ್ವವನ್ನು ಒದಗಿಸಲು ಜಗತ್ತು ಮತ್ತೊಮ್ಮೆ ಜಿ 20 ಕಡೆಗೆ ನೋಡುತ್ತಿದೆ. ನಾವು ಒಟ್ಟಾಗಿ ಈ ಸವಾಲುಗಳನ್ನು ಎದುರಿಸಬಹುದು ಎಂದು ನಾನು ನಂಬುತ್ತೇನೆ” ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

  • 09 Sep 2023 01:07 PM (IST)

    G20 Summit 2023 in Delhi Live: G20 ಔತಣಕೂಟದ ಮೆನು ಮಾಹಿತಿ ಬಹಿರಂಗ

    ರಾಷ್ಟ್ರಪತಿಗಳ G20 ಔತಣಕೂಟಕ್ಕೆ ಸಿದ್ಧತೆ ನಡೆಯುತ್ತಿದೆ.  ಸದ್ಯ G20 ಔತಣಕೂಟದ ಮೆನು ಮಾಹಿತಿ ಬಹಿರಂಗವಾಗಿದೆ. ಔತನಕೂಟದಲ್ಲಿ ಟೇಬಲ್‌ವೇರ್‌ಗಳು ಸ್ಟೀಲ್ ಅಥವಾ ಹಿತ್ತಾಳೆಯ ಬೇಸ್ ಹೊಂದಿರಲಿವೆ, ಕೆಲವು ಟೇಬಲ್ ವೇರ್ ಗಳು ಬೆಳ್ಳಿಯ ಲೇಪನ ಹೊಂದಿರಲಿವೆ, ಸ್ವಾಗತ ಪಾನೀಯಗಳನ್ನು ಪೂರೈಸಲು ಚಿನ್ನದ ಲೇಪಿತ ವಸ್ತುಗಳ ಬಳಕೆ, ಶೃಂಗಸಭೆಗಾಗಿಯೇ 200 ಕುಶಲಕರ್ಮಿಗಳು ತಯಾರಿಸಿರುವ ಸಮಾನುಗಳ ಬಳಕೆ, ಸುಮಾರು 15,000 ಬೆಳ್ಳಿಯ ಸಾಮಾನುಗಳನ್ನು ತಯಾರಿಸಲಾಗಿದೆ, ಔತನಕೂಟವೂ ಭಾರತದ ಪಾಕಶಾಲೆಯ ವೈವಿಧ್ಯತೆಯನ್ನು ಪ್ರತಿಬಿಂಬಿಸಲಿದೆ, ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳ ಮೆನು, ಭೋಜನವು 4 ಕೋರ್ಸ್ ಶುದ್ಧ ಸಸ್ಯಾಹಾರಿ ಮೆನುವನ್ನು ಹೊಂದಿರಲಿದೆ, ಪನೀರ್ ಗ್ರೇವಿ, ಸಬ್ಜಿ ಕೊರ್ಮಾ, ಆಲೂ ಲಿಯೋನೈಸ್, ಕಾಜು ಮಟರ್ ಮಖಾನಾ, ಜೋವರ್ ದಾಲ್ ತಡ್ಕಾ, ಪ್ಯಾಜ್ ಜೀರಾ ಕಾ ಪುಲಾವ್, ಸೌತೆಕಾಯಿ ರೈತಾ, ತಂದೂರಿ ರೋಟಿ, ಬಟರ್ ನಾನ್, ಕುಲ್ಚಾ, ಹುರಿದ ಬಾದಾಮಿ ಮತ್ತು ತರಕಾರಿ ಸಾರು, ಗುಲಾಬ್ ಜಾಮೂನ್, ರಸಮಲೈ ಮತ್ತು ಜಿಲೇಬಿಯಂತಹ ವಿವಿಧ ರೀತಿಯ ಸಿಹಿತಿಂಡಿಗಳ ಭಕ್ಷ್ಯ ಸಿದ್ಧತೆ ನಡೆಸಲಾಗುತ್ತಿದೆ.

  • 09 Sep 2023 01:05 PM (IST)

    G20 Summit 2023 in Delhi Live: ರಾಷ್ಟ್ರಪತಿಗಳ ಔತಣಕೂಟಕ್ಕೆ 170 ಅತಿಥಿಗಳಿಗೆ ಆಹ್ವಾನ

    ಇಂದು ಸಂಜೆ ರಾಷ್ಟ್ರಪತಿ ಮುರ್ಮು ಅವರಿಂದ ಔತಣಕೂಟ ಆಯೋಜನೆ ಮಾಡಲಾಗಿದೆ. ದೆಹಲಿಯ ಮಲ್ಟಿ ಫಂಕ್ಷನ್ ಹಾಲ್‌ನಲ್ಲಿ ನಡೆಯುವ ಈ ಔತನಕೂಟಕ್ಕೆ 170 ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಸಚಿವರಿಗೂ ಆಹ್ವಾನ ನೀಡಲಾಗಿದೆ.

  • 09 Sep 2023 11:44 AM (IST)

    G20 Summit 2023 in Delhi Live: ಸಾರ್ವಜನಿಕ ಪ್ರತಿನಿಧಿಯಾಗಿ ರಾಜ್ಯದ ಹಿತ ಕಾಪಾಡಲು ಕೆಲಸ ಮಾಡಬೇಕು: ಅಶ್ವತ್ಥ ನಾರಾಯಣ

    G20 ಸಭೆಗೆ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಗೈರು ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಡಾ. ಅಶ್ವಥ್ ನಾರಾಯಣ, ಇಡೀ ವಿಶ್ವಮಟ್ಟದ ನಾಯಕರು ಬಂದಾಗ ಒಂದೇ ದೇಶ, ಒಂದೇ ಭೂಮಿ ಅಂತ ಮಾತನಾಡಬೇಕಿತ್ತು. ಇದು ಸಿದ್ದರಾಮಯ್ಯ ವೈಯಕ್ತಿಕ ವಿಚಾರ ಅಲ್ಲ. ಕರ್ನಾಟಕ ಇವರ ಮನೆ ಆಸ್ತಿ ಅಲ್ಲ. ಸಾರ್ವಜನಿಕ ಪ್ರತಿನಿಧಿಯಾಗಿ ರಾಜ್ಯದ ಹಿತ ಕಾಪಾಡಲು ಕೆಲಸ ಮಾಡಬೇಕು. ಜವಾಬ್ದಾರಿಯಿಂದ ನಡೆದುಕೊಳ್ಳುವ ಕೆಲಸ ಮಾಡಬೇಕು. ವೈಯಕ್ತಿಕ ಪ್ರತಿಷ್ಠೆ ತೋರಿಸಿ ರಾಜಕೀಯ ಬೆರೆಸಿ ಇಂತಹ ಕೆಲಸ ಮಾಡುತ್ತಿದ್ದಾರೆ. ನೀವು ಜೀವಮಾನದಲ್ಲಿ ಇಂತಹ ಒಂದು ಕಾರ್ಯಕ್ರಮ ಮಾಡಿ., ನಿಮ್ಮ ಪಕ್ಷದಲ್ಲಿ ಹತ್ತಾರು ಸಿಎಂಗಳಿದ್ದಾರೆ. ನಿಮ್ಮ ಜೀವನದಲ್ಲಿ ಇಂತಹ ಒಂದು ಕಾರ್ಯಕ್ರಮ ಮಾಡಿ ತೋರಿಸಿ. ಕರ್ನಾಟಕಕ್ಕೂ ಅವಮಾನ ಮಾಡಬೇಡಿ ಎಂದರು.

  • 09 Sep 2023 11:05 AM (IST)

    G20 Summit 2023 in Delhi Live: ಭಯೋತ್ಪಾದನೆ ಬಗ್ಗೆ ಚಿಂತಿಸಬೇಕಿದೆ: ಮೋದಿ

    ಸಬ್ ಕಾ ಸಾತ್, ಸಬ್ ಕಾ ವಿಕಾಸ್​ಗೆ ಮಂತ್ರವನ್ನು ಪಠಿಸಬೇಕಿದೆ ಎಂದು ಪ್ರಧಾನಿ ಮೋದಿ, ಭಯೋತ್ಪಾದನೆ, ಸೈಬರ್ ದಾಳಿ ಭೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಿಂತಿಸಬೇಕಿದೆ ಎಂದರು. ಭಾರತದ ಅಧ್ಯಕ್ಷತೆ ದೇಶದ ಒಳಗೆ ಮತ್ತು ಹೊರಗೆ ಇದು ಜನರ G20 ಸಭೆಯಾಗಿದೆ. ದೇಶದ 60 ನಗರಲದಲ್ಲಿ 200 ಅಧಿಕ ಸಭೆಗಳು ನಡೆದಿವೆ. ಶೃಂಗಸಭೆಯ ಮೊದಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ 20 ನ ಖಾಯಂ ಸದಸ್ಯರಾಗಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆಫ್ರಿಕನ್ ಯೂನಿಯನ್ ಮುಖ್ಯಸ್ಥರನ್ನು ಆಹ್ವಾನಿಸಿದ್ದರು.

  • 09 Sep 2023 10:53 AM (IST)

    G20 Summit 2023 in Delhi Live: ಜಿ20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆ ಬಗ್ಗೆ ಮೋದಿ ಘೋಷಣೆ

    ಜಿ20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಜಿ20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದರು. ಆ ಮೂಲಕ ಜಿ20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್​ ಒಕ್ಕೂಟ ಸೇರ್ಪಡೆಯಾದಂತಾಗಿದೆ.

  • 09 Sep 2023 10:52 AM (IST)

    G20 Summit 2023 in Delhi Live: ಜಿ20 ಶೃಂಗಸಭೆಯಲ್ಲಿ ಕೋವಿಡ್ ಬಿಕ್ಕಟ್ಟು ನೆನೆದ ಮೋದಿ

    ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರೊನಾ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಕೊರೊನಾದಿಂದ ಅನೇಕ ದೇಶಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈಗಷ್ಟೆ ಎಲ್ಲಾ ದೇಶಗಳು ಆರ್ಥಿಕವಾಗಿ ಚೇತರಿಕೆ ಕಾಣುತ್ತಿವೆ ಎಂದರು.

  • 09 Sep 2023 10:49 AM (IST)

    G20 Summit 2023 in Delhi Live: ಜಿ20 ಶೃಂಗಸಭೆಗೆ ಆಗಮಿಸಿದ ಜೋ ಬೈಡೆನ್

    ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ಭಾರತ್ ಮಂಟಪಕ್ಕೆ ಆಗಮಿಸಿದ್ದಾರೆ. ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ಬೈಡೆನ್ ಪ್ರಧಾನಿ ಮೋದಿಯವರನ್ನು ಆಲಿಂಗನ ಮಾಡಿದರು.

  • 09 Sep 2023 10:46 AM (IST)

    G20 Summit 2023 in Delhi Live: ಮೊರಾಕ್ಕೋದಲ್ಲಿ ಭೂಕಂಪದಲ್ಲಿ ಮೃತಪಟ್ಟವರಿಗೆ ಮೋದಿ ಸಂತಾಪ

    ಜಿ20 ಶೃಂಗಸಭೆಯಲ್ಲಿ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ನಾಯಕರನ್ನು ಸ್ವಾಗತಿಸಿದ ನಂತರ ಮೊರಾಕ್ಕೋದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು.

  • 09 Sep 2023 10:11 AM (IST)

    G20 Summit 2023 in Delhi Live: ಜಿ20 ನಾಯಕರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಮಂಟಪಕ್ಕೆ ಆಗಮಿಸಿದ ಜಾಗತಿಕ ನಾಯಕರನ್ನು ಸ್ವಾಗತಿಸಿದರು. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮುಖ್ಯಸ್ಥ, ಹಣಕಾಸು ಸ್ಥಿರತೆ ಮಂಡಳಿ ಅಧ್ಯಕ್ಷ, ಐಎಲ್ಒ ಮಹಾನಿರ್ದೇಶಕರು, ಐಎಂಎಫ್ ಅಧ್ಯಕ್ಷರು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಡಬ್ಲ್ಯುಎಚ್ಒ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಆಸ್ಟ್ರೇಲಿಯಾದ ಮಾಜಿ ಎಫ್ಎಂ ಆಸ್ಟ್ರೇಲಿಯಾ, ಡಬ್ಲ್ಯುಟಿಒ ಮಹಾನಿರ್ದೇಶಕ ನಾಗೋಜಿ ಒಕೊಂಜಿ ಜಿ ಜಿ 20 ಶೃಂಗಸಭೆಗೆ ಆಗಮಿಸಿದ್ದಾರೆ.

  • 09 Sep 2023 10:09 AM (IST)

    G20 Summit 2023 in Delhi Live: ಜಿ 20 ಶೃಂಗಸಭೆಯ ಮೊದಲ ದಿನ, ಕಾರ್ಯಕ್ರಮದ ಸಂಪೂರ್ಣ ವೇಳಾಪಟ್ಟಿ

    ಜಿ 20 ಶೃಂಗಸಭೆಯ ಮೊದಲ ದಿನ, ಕಾರ್ಯಕ್ರಮದ ಸಂಪೂರ್ಣ ವೇಳಾಪಟ್ಟಿ

    9.30: ವಿದೇಶಿ ಅತಿಥಿಗಳು ಭಾರತ ಮಂಟಪ ತಲುಪಲಿದ್ದಾರೆ.

    10.00: ಪ್ರಧಾನಿ ಮೋದಿ ಅವರೊಂದಿಗೆ ಗ್ರೂಪ್ ಫೋಟೋ ತೆಗೆಯಲಾಗುವುದು.

    10.30: ‘ಒಂದು ಭೂಮಿ’ ಸಮ್ಮೇಳನದ ಮೊದಲ ಅಧಿವೇಶನ ಆರಂಭವಾಗಲಿದೆ.

    ಮಧ್ಯಾಹ್ನ 1:30 – ಊಟದ ವಿರಾಮದ ಮೊದಲ ಸೆಷನ್ ಕೊನೆಗೊಳ್ಳುತ್ತದೆ.

    ಮಧ್ಯಾಹ್ನ 3 ಗಂಟೆಗೆ ‘ಒಂದು ಕುಟುಂಬ’ ಸಮ್ಮೇಳನದ ಎರಡನೇ ಅಧಿವೇಶನ ಆರಂಭವಾಗಲಿದೆ.

    ಮಧ್ಯಾಹ್ನ 3 ಗಂಟೆಗೆ ‘ಒಂದು ಕುಟುಂಬ’ ಸಮ್ಮೇಳನದ ಎರಡನೇ ಅಧಿವೇಶನ ಆರಂಭವಾಗಲಿದೆ.

    4.45: ‘ಒಂದು ಕುಟುಂಬ’ ಎರಡನೇ ಅಧಿವೇಶನ ಮುಕ್ತಾಯ.

    ಸಂಜೆ 7 ಗಂಟೆಗೆ ಎಲ್ಲಾ ನಾಯಕರು ಮತ್ತೆ ಊಟಕ್ಕೆ ಸೇರುತ್ತಾರೆ.

    ರಾತ್ರಿ 8 ರಿಂದ 9:15: ಭೋಜನದ ಸಮಯದಲ್ಲಿ ನಾಯಕರು ಪರಸ್ಪರ ಚರ್ಚಿಸಲಿದ್ದಾರೆ.

    ರಾತ್ರಿ 9:45ಕ್ಕೆ ನಾಯಕರು ಹೊಟೇಲ್​ಗೆ ತೆರಳಲಿದ್ದಾರೆ

  • Published On - Sep 09,2023 10:04 AM

    Follow us
    ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
    ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
    ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
    ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
    ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
    ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
    ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
    ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
    ‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
    ‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
    ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
    ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
    ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
    ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
    ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
    ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
    Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
    Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
    ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
    ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ