ಜಿ20 ಶೃಂಗಸಭೆಗೆ ಬಿಗಿ ಭದ್ರತೆ; ಪ್ರತಿನಿಧಿಗಳಿಗೆ ನೀಡುವ ಆಹಾರ ಲ್ಯಾಬ್​ಗಳಲ್ಲಿ ಪರೀಕ್ಷೆಗೆ

| Updated By: Digi Tech Desk

Updated on: Sep 05, 2023 | 10:49 AM

ದೆಹಲಿಯ ಉನ್ನತ ಹೋಟೆಲ್‌ಗಳನ್ನು ಜಿ20 ಪ್ರತಿನಿಧಿಗಳಿಗಾಗಿ ಕಾಯ್ದಿರಿಸಲಾಗಿದೆ ಮತ್ತು ಈ ಎಲ್ಲಾ ಹೋಟೆಲ್‌ಗಳಲ್ಲಿ ಭದ್ರತಾ ವ್ಯವಸ್ಥೆಗಳೊಂದಿಗೆ, ಆಹಾರವನ್ನು ಸಹ ಪರೀಕ್ಷಿಸಲಾಗುತ್ತಿದೆ. ಬ್ರ್ಯಾಂಡೆಡ್​​​ ಉತ್ಪನ್ನಗಳಾದರೂ, ಪ್ಯಾಕ್ಡ್ ಉತ್ಪನ್ನಗಳಾಗಿದ್ದರೂ ಲ್ಯಾಬ್​ನಲ್ಲಿ ಪರೀಕ್ಷಿಸದೆ ಅಡುಗೆ ಮನೆಯಲ್ಲಿ ಬಳಸುವಂತಿಲ್ಲ. ಮುಂದಿನ ಒಂದು ವಾರ ಕಾಲ ದೆಹಲಿ ಸರ್ಕಾರದ ಆಹಾರ ಸುರಕ್ಷತಾ ಇಲಾಖೆಯ ಲ್ಯಾಬ್‌ನಲ್ಲಿ ಬಿಡುವಿಲ್ಲದ ಕೆಲಸ ಇರಲಿದೆ.

ಜಿ20 ಶೃಂಗಸಭೆಗೆ ಬಿಗಿ ಭದ್ರತೆ; ಪ್ರತಿನಿಧಿಗಳಿಗೆ ನೀಡುವ ಆಹಾರ ಲ್ಯಾಬ್​ಗಳಲ್ಲಿ ಪರೀಕ್ಷೆಗೆ
ಜಿ20 ಶೃಂಗಸಭೆ
Follow us on

ನವದೆಹಲಿ, ಸೆಪ್ಟೆಂಬರ್ 4: ಜಿ20 ಶೃಂಗಸಭೆಯಲ್ಲಿ (G20 Summit) ಭಾಗವಹಿಸುವ ಪ್ರತಿನಿಧಿಗಳಿಗೆ ನೀಡಲಾಗುವ ಆಹಾರವನ್ನು ಮೊದಲು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತದೆ. ಪರೀಕ್ಷಿಸದ ಯಾವುದೇ ಆಹಾರ ಪದಾರ್ಥವನ್ನು ಅಡುಗೆಮನೆಯಲ್ಲಿ ಬಳಸಲಾಗುವುದಿಲ್ಲ. ಎಸ್‌ಪಿಜಿಯನ್ನು ಒಳಗೊಂಡಿರುವ ಎಫ್‌ಎಸ್‌ಒ ಮತ್ತು ಪೊಲೀಸ್ ತಂಡವು ಅಡುಗೆಮನೆಯಿಂದ ಆಹಾರ ತಯಾರಿಸಲು ಬಳಸುವ ವಸ್ತುಗಳ ಮಾದರಿಗಳನ್ನು ತೆಗೆದುಕೊಂಡು ಬೇಯಿಸುವ 36 ಗಂಟೆಗಳ ಮೊದಲು ಪ್ರಯೋಗಾಲಯಗಳಿಗೆ ತಲುಪಿಸಲಿದೆ. ಆಹಾರ ಸುರಕ್ಷತಾ ಇಲಾಖೆ ಪ್ರಕ್ರಿಯೆಗಳನ್ನು ಚುರುಕುಗೊಳಿಸಲಾಗಿದ್ದು, ಪ್ರಯೋಗಾಲಯಗಳು ನಾಲ್ಕು ಗಂಟೆಗಳಲ್ಲಿ ವರದಿಯನ್ನು ಸಲ್ಲಿಸಲಿವೆ. ಹೋಟೆಲ್‌ಗಳು ವೈದ್ಯರು ಮತ್ತು ದಾದಿಯರ ತಂಡ ಹಗಲಿರುಳು ಕಾರ್ಯನಿರ್ವಹಿಲಿವೆ.

ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬರುವ ಪ್ರತಿನಿಧಿಗಳ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಟಾಪ್ 5-ಸ್ಟಾರ್ ಹೋಟೆಲ್‌ಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದ್ದರೂ, ಯಾವುದೇ ಲೋಪವನ್ನು ತಡೆಗಟ್ಟುವ ಸಲುವಾಗಿ ಎಲ್ಲಾ ಆಹಾರ ಪದಾರ್ಥಗಳ ಪರೀಕ್ಷೆಯನ್ನು ಮಾಡಲಾಗುತ್ತದೆ. ಪ್ರಯೋಗಾಲಯದಲ್ಲಿ ಪರೀಕ್ಷಿಸದೆ ಯಾವುದೇ ಆಹಾರ ಪದಾರ್ಥವನ್ನು ಈ ಹೋಟೆಲ್‌ಗಳ ಅಡುಗೆ ಕೋಣೆಗೆ ತೆಗೆದುಕೊಂಡು ಹೋಗಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ದೆಹಲಿಯ ಉನ್ನತ ಹೋಟೆಲ್‌ಗಳನ್ನು ಜಿ20 ಪ್ರತಿನಿಧಿಗಳಿಗಾಗಿ ಕಾಯ್ದಿರಿಸಲಾಗಿದೆ ಮತ್ತು ಈ ಎಲ್ಲಾ ಹೋಟೆಲ್‌ಗಳಲ್ಲಿ ಭದ್ರತಾ ವ್ಯವಸ್ಥೆಗಳೊಂದಿಗೆ, ಆಹಾರವನ್ನು ಸಹ ಪರೀಕ್ಷಿಸಲಾಗುತ್ತಿದೆ. ಬ್ರ್ಯಾಂಡೆಡ್​​​ ಉತ್ಪನ್ನಗಳಾದರೂ, ಪ್ಯಾಕ್ಡ್ ಉತ್ಪನ್ನಗಳಾಗಿದ್ದರೂ ಲ್ಯಾಬ್​ನಲ್ಲಿ ಪರೀಕ್ಷಿಸದೆ ಅಡುಗೆ ಮನೆಯಲ್ಲಿ ಬಳಸುವಂತಿಲ್ಲ. ಮುಂದಿನ ಒಂದು ವಾರ ಕಾಲ ದೆಹಲಿ ಸರ್ಕಾರದ ಆಹಾರ ಸುರಕ್ಷತಾ ಇಲಾಖೆಯ ಲ್ಯಾಬ್‌ನಲ್ಲಿ ಬಿಡುವಿಲ್ಲದ ಕೆಲಸ ಇರಲಿದೆ. ಏಕೆಂದರೆ ಎಲ್ಲಾ 5-ಸ್ಟಾರ್ ಹೋಟೆಲ್‌ಗಳ ಆಹಾರದ ಮಾದರಿಗಳು ಪರೀಕ್ಷೆಗೆ ಇಲ್ಲಿಗೆ ಬರಲು ಪ್ರಾರಂಭಿಸಿವೆ.

ಇದನ್ನೂ ಓದಿ: ಜಿ-20 ಶೃಂಗಸಭೆಗೆ ಮುಂಚಿತವಾಗಿ ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಕೆನಡಾ

ಮೊದಲು, ಆಹಾರ ಪರೀಕ್ಷೆಯು ಸುಮಾರು ಒಂದು ವಾರ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಈ ಪ್ರಯೋಗಾಲಯವು ಕೆಲವೇ ಗಂಟೆಗಳಲ್ಲಿ ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಪ್ರಯೋಗಾಲಯಕ್ಕೆ ಕಚ್ಚಾ ಆಹಾರ ವಸ್ತುಗಳನ್ನು ಮಾತ್ರ ಪರೀಕ್ಷೆಗೆ ತರಲಾಗುತ್ತದೆ.

ಆಹಾರ ಪರೀಕ್ಷೆಯ ಹೊರತಾಗಿ, ದೆಹಲಿ ಸರ್ಕಾರದ ಅಡಿಯಲ್ಲಿ ಬರುವ ಐದು ದೊಡ್ಡ ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಮತ್ತು ಐಸಿಯುಗಳನ್ನು ಜಿ20 ಪ್ರತಿನಿಧಿಗಳಿಗಾಗಿ ಕಾಯ್ದಿರಿಸಲಾಗಿದೆ. ಜಿಬಿ ಪಂತ್ ಆಸ್ಪತ್ರೆಯು ಕಾರ್ಯಕ್ರಮಕ್ಕೆ ವಿಶೇಷ ವ್ಯವಸ್ಥೆ ಮಾಡುತ್ತಿದೆ. ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಪ್ರತಿನಿಧಿಗಳ ಬೆಂಗಾವಲು ಪಡೆಯೊಂದಿಗೆ ಕಾರ್ಯನಿರ್ವಹಿಸಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Mon, 4 September 23