G7 Summit: ಜಿ7 ಭಾಗವಲ್ಲದಿದ್ದರೂ ಇಟಲಿಯ ಶೃಂಗಸಭೆಯಲ್ಲಿ ಕೇಂದ್ರಬಿಂದುವಾದ ಪ್ರಧಾನಿ ಮೋದಿ
ಇಟಲಿಯಲ್ಲಿ ನಡೆದ 7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದಾರೆ. ಈ ಶೃಂಗಸಭೆಯಲ್ಲಿ ಕೇಂದ್ರಬಿಂದುವಾಗಿದ್ದ ಮೋದಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತಷ್ಟು ಜಾಗತಿಕ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಈ ವೇಳೆ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನವದೆಹಲಿ: ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಭಾಗವಹಿಸಿದ ಬಳಿಕ ಸ್ವದೇಶಕ್ಕೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಮೂರನೇ ಅಧಿಕಾರಾವಧಿಯಲ್ಲಿ ಶುಕ್ರವಾರ ತಮ್ಮ ಮೊದಲ ವಿದೇಶಿ ಪ್ರವಾಸವನ್ನು ಮುಗಿಸಿದ್ದಾರೆ. ಭಾರತ ಜಿ7 ದೇಶಗಳಲ್ಲಿ ಇಲ್ಲದಿದ್ದರೂ ಈ ಬಾರಿಯ ಶೃಂಗಸಭೆಯ ವೇದಿಕೆಯಲ್ಲಿ ಭಾರತದ ಪ್ರಧಾನಿಗೆ ಕೇಂದ್ರ ಸ್ಥಾನ ದೊರಕಿದೆ. ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ವಾರದೊಳಗೆ ಪ್ರಧಾನಿ ಮೋದಿ ಅವರು ಇಟಲಿಯಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (Rishi Sunak), ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ (Joe Biden) ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಸೇರಿದಂತೆ ಹಲವಾರು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
“ಅಪುಲಿಯಾದಲ್ಲಿ ನಡೆದ G7 ಶೃಂಗಸಭೆಯಲ್ಲಿ ವಿಶ್ವ ನಾಯಕರೊಂದಿಗೆ ಸಂವಹನ ನಡೆಸಿದ್ದೇವೆ ಮತ್ತು ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದೇವೆ. ಒಟ್ಟಾಗಿ, ಜಾಗತಿಕ ಸಮುದಾಯಕ್ಕೆ ಪ್ರಯೋಜನಕಾರಿ ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ಜಗತ್ತನ್ನು ಸೃಷ್ಟಿಸುವ ಪರಿಣಾಮಕಾರಿ ಪರಿಹಾರಗಳನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಆತ್ಮೀಯ ಆತಿಥ್ಯಕ್ಕಾಗಿ ನಾನು ಇಟಲಿಯ ಜನರಿಗೆ ಮತ್ತು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ಮೋದಿ ಇಂದು ಬೆಳಿಗ್ಗೆ ಎಕ್ಸ್‌ನಲ್ಲಿ ಬರೆದಿದ್ದಾರೆ.
Narendra Modi, Indian Prime Minister is the centre of attraction in #G72024
My PM My Pride 🧡 pic.twitter.com/GlYInD0ZNz
— Sunanda Roy 👑 (@SaffronSunanda) June 14, 2024
ಕಳೆದ ವರ್ಷ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದೊಂದಿಗೆ ಭಾರತದ ಉದ್ವಿಗ್ನತೆಯ ನಡುವೆ, ಪ್ರಧಾನಿ ಮೋದಿ ಜಸ್ಟಿನ್ ಟ್ರುಡೊ ಅವರನ್ನು ಕೂಡ ಭೇಟಿಯಾದರು.
ಇದನ್ನೂ ಓದಿ: PM Narendra Modi: ನಾವು ಒಟ್ಟಾಗಿ ಹಸಿರು ಯುಗದತ್ತ ಹೆಜ್ಜೆ ಹಾಕಬೇಕು; ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
ಜೋ ಬಿಡೆನ್ ಅವರೊಂದಿಗೆ ಮೋದಿ ಪ್ರತ್ಯೇಕ ಸಂವಾದ ನಡೆಸಿದರು. ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ವಿಫಲವಾದ ಸಂಚುಗೆ ಭಾರತೀಯ ಸಂಪರ್ಕವಿದೆ ಎಂದು ವಾಷಿಂಗ್ಟನ್ ಆರೋಪಿಸಿದ ಸುಮಾರು 7 ತಿಂಗಳ ನಂತರ ಮೋದಿ-ಬಿಡೆನ್ ಮಾತುಕತೆ ನಡೆದಿದೆ.
An important G7 Summit, where I presented India’s perspective at the world stage. Here are highlights. pic.twitter.com/amU77yJ79Z
— Narendra Modi (@narendramodi) June 15, 2024
ಕಾರ್ಯಕ್ರಮದ ಹೊರತಾಗಿ, ಪ್ರಧಾನಿ ಮೋದಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಇಟಾಲಿಯನ್ ಪ್ರೀಮಿಯರ್ ಜಾರ್ಜಿಯಾ ಮೆಲೋನಿ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಭೇಟಿಯಾದರು. G-7 ಶೃಂಗಸಭೆಗೆ ಪಿಎಂ ಮೋದಿಯವರಿಗೆ ಆಹ್ವಾನವು ವೇಗವಾಗಿ ಬೆಳೆಯುತ್ತಿರುವ ಚೀನಾವನ್ನು ಎದುರಿಸುವ ಪಶ್ಚಿಮದ ಯೋಜನೆಗಳಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಭಾರತವನ್ನು ಹೊರತುಪಡಿಸಿ ಇಟಲಿ ಪ್ರಧಾನಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನೆಲೆಗೊಂಡಿರುವ 11 ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದ್ದರು.
Met Pope Francis on the sidelines of the @G7 Summit. I admire his commitment to serve people and make our planet better. Also invited him to visit India. @Pontifex pic.twitter.com/BeIPkdRpUD
— Narendra Modi (@narendramodi) June 14, 2024
ಇದನ್ನೂ ಓದಿ: PM Modi: ಕೈ ಮುಗಿದು ನಮಸ್ಕರಿಸಿ ಮೋದಿಯನ್ನು ಶೃಂಗಸಭೆಗೆ ಬರಮಾಡಿಕೊಂಡ ಇಟಲಿ ಪ್ರಧಾನಿ ಮೆಲೋನಿ
ಶುಕ್ರವಾರ ಜಿ-7 ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ನಾವೆಲ್ಲರೂ ಒಟ್ಟಾಗಿ ‘ಹಸಿರು ಯುಗ’ದತ್ತ ಹೆಜ್ಜೆ ಹಾಕಬೇಕು. ಸಮಯಕ್ಕೆ ಶ್ರಮಿಸಬೇಕಾಗಿದೆ. ಸಾಮಾಜಿಕ ಅಸಮಾನತೆಗಳನ್ನು ಕಡಿಮೆ ಮಾಡಲು ತಂತ್ರಜ್ಞಾನದ ಬಳಕೆಯಲ್ಲಿ ಸಹಕಾರಿ ಪ್ರಯತ್ನಗಳಿಗೆ ಕರೆ ನೀಡಿದ್ದರು. ಉತ್ತಮ ಭವಿಷ್ಯವನ್ನು ನಿರ್ಮಿಸಲು ಭಾರತವು “ಮಾನವ-ಕೇಂದ್ರಿತ” ವಿಧಾನದ ಕಡೆಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು. ಜಾಗತಿಕ ದಕ್ಷಿಣದ ದೇಶಗಳು ಜಾಗತಿಕ ಅನಿಶ್ಚಿತತೆ ಮತ್ತು ಉದ್ವಿಗ್ನತೆಗಳ ಭಾರವನ್ನು ಹೊತ್ತಿವೆ. ಈ ಪ್ರಯತ್ನಗಳಲ್ಲಿ ಗ್ಲೋಬಲ್ ಸೌತ್‌ನ ದೇಶಗಳು ಆಫ್ರಿಕಾಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಭಾರತದ ಅಧ್ಯಕ್ಷತೆಯಲ್ಲಿ ಆಫ್ರಿಕನ್ ಯೂನಿಯನ್ ಭಾರತವನ್ನು ಕಾಯಂ ಸದಸ್ಯರನ್ನಾಗಿಸಿದೆ. ಆಫ್ರಿಕಾದ ಎಲ್ಲಾ ದೇಶಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಸ್ಥಿರತೆ ಮತ್ತು ಭದ್ರತೆಗೆ ಇಂದಿನ ಸಭೆಯು ಎಲ್ಲಾ ದೇಶಗಳ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಟಲಿಯ ಜಿ7 ಶೃಂಗಸಭೆಯಲ್ಲಿ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 am, Sat, 15 June 24