PM Narendra Modi: ನಾವು ಒಟ್ಟಾಗಿ ಹಸಿರು ಯುಗದತ್ತ ಹೆಜ್ಜೆ ಹಾಕಬೇಕು; ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
G7 Summit 2024: ಇಟಲಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಔಟ್‌ರೀಚ್ ಅಧಿವೇಶನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದಾರೆ. ಫ್ರೆಂಚ್, ಉಕ್ರೇನ್, ಇಂಗ್ಲೆಂಡ್ ದೇಶಗಳ ನಾಯಕರ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ತಮ್ಮ ವಿಶೇಷ ನಿಯೋಗದ ಜೊತೆ ಪ್ರಧಾನಿ ಮೋದಿ ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ನವದೆಹಲಿ: ಇಟಲಿಯಲ್ಲಿ ಜಿ7 ಶೃಂಗಸಭೆಯ (G7 Summit) ಔಟ್‌ರೀಚ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ನಾವೆಲ್ಲರೂ ಒಟ್ಟಾಗಿ ‘ಹಸಿರು ಯುಗ’ದತ್ತ ಹೆಜ್ಜೆ ಹಾಕಬೇಕು. ಸಮಯಕ್ಕೆ ಶ್ರಮಿಸಬೇಕಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಅಸಮಾನತೆಗಳನ್ನು ಕಡಿಮೆ ಮಾಡಲು ತಂತ್ರಜ್ಞಾನದ ಬಳಕೆಯಲ್ಲಿ ಸಹಕಾರಿ ಪ್ರಯತ್ನಗಳಿಗೆ ಕರೆ ನೀಡಿದ್ದಾರೆ. ಉತ್ತಮ ಭವಿಷ್ಯವನ್ನು ನಿರ್ಮಿಸಲು ಭಾರತವು “ಮಾನವ-ಕೇಂದ್ರಿತ” ವಿಧಾನದ ಕಡೆಗೆ ಕೆಲಸ ಮಾಡುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ತಂತ್ರಜ್ಞಾನದ ಪ್ರಯೋಜನಗಳನ್ನು ವಿವರಿಸುವಾಗ ಪ್ರಧಾನಿ ಮೋದಿ ಅವರು ಸೈಬರ್ ಭದ್ರತೆಯ ಸವಾಲುಗಳ ಮೇಲೆ ಒತ್ತು ನೀಡಿದ್ದಾರೆ.
ಜಾಗತಿಕ ದಕ್ಷಿಣದ ದೇಶಗಳು ಜಾಗತಿಕ ಅನಿಶ್ಚಿತತೆ ಮತ್ತು ಉದ್ವಿಗ್ನತೆಗಳ ಭಾರವನ್ನು ಹೊತ್ತಿವೆ. ಈ ಪ್ರಯತ್ನಗಳಲ್ಲಿ ಗ್ಲೋಬಲ್ ಸೌತ್‌ನ ದೇಶಗಳು ಆಫ್ರಿಕಾಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಭಾರತದ ಅಧ್ಯಕ್ಷತೆಯಲ್ಲಿ ಆಫ್ರಿಕನ್ ಯೂನಿಯನ್ ಭಾರತವನ್ನು ಕಾಯಂ ಸದಸ್ಯರನ್ನಾಗಿಸಿದೆ. ಆಫ್ರಿಕಾದ ಎಲ್ಲಾ ದೇಶಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಸ್ಥಿರತೆ ಮತ್ತು ಭದ್ರತೆಗೆ ಇಂದಿನ ಸಭೆಯು ಎಲ್ಲಾ ದೇಶಗಳ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಟಲಿಯ ಜಿ7 ಶೃಂಗಸಭೆಯಲ್ಲಿ ಹೇಳಿದ್ದಾರೆ.
Spoke at the G7 Outreach Session on AI and Energy, Africa and Mediterranean. Highlighted a wide range of subjects, notably, the wide scale usage of technology for human progress. The rise of technology in various aspects of human life has also reaffirmed the importance of cyber… pic.twitter.com/lafxE4aJos
— Narendra Modi (@narendramodi) June 14, 2024
ಇದನ್ನೂ ಓದಿ: PM Modi: ಕೈ ಮುಗಿದು ನಮಸ್ಕರಿಸಿ ಮೋದಿಯನ್ನು ಶೃಂಗಸಭೆಗೆ ಬರಮಾಡಿಕೊಂಡ ಇಟಲಿ ಪ್ರಧಾನಿ ಮೆಲೋನಿ
“ತಂತ್ರಜ್ಞಾನವನ್ನು ಸೃಜನಾತ್ಮಕ ಉದ್ದೇಶಗಳಿಗಾಗಿ ಬಳಸಬೇಕೇ ಹೊರತು ವಿನಾಶಕಾರಿ ಉದ್ದೇಶಗಳಿಗಲ್ಲ. ಆಗ ಮಾತ್ರ ನಾವು ಅಂತರ್ಗತ ಸಮಾಜದ ಅಡಿಪಾಯವನ್ನು ಹಾಕಲು ಸಾಧ್ಯವಾಗುತ್ತದೆ. ಈ ಮಾನವ ಕೇಂದ್ರಿತ ವಿಧಾನದ ಮೂಲಕ ಭಾರತವು ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿದೆ. ಭಾರತವು ರೂಪಿಸಿದ ಮೊದಲ ಕೆಲವು ದೇಶಗಳಲ್ಲಿ ಒಂದಾಗಿದೆ. ಈ ಕಾರ್ಯತಂತ್ರದ ಆಧಾರದ ಮೇಲೆ ನಾವು ಈ ವರ್ಷ AI ಮಿಷನ್ ಅನ್ನು ಪ್ರಾರಂಭಿಸಿದ್ದೇವೆ ಎಂದು G7 ಔಟ್ರೀಚ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
As far as energy is concerned, India’s approach is based on availability, accessibility, affordability and acceptability. We are working to fulfil our CoP commitments before the designated time period. India is working to usher in a Green Era, based on the principles of Mission…
— Narendra Modi (@narendramodi) June 14, 2024
ತಂತ್ರಜ್ಞಾನದ ಬಗ್ಗೆ ಹೆಚ್ಚು ವಿವರಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನದ ಪ್ರಯೋಜನಗಳು ಸಮಾಜದ ಎಲ್ಲಾ ಮೂಲೆಗಳನ್ನು ತಲುಪುವಂತೆ ಮಾಡಲು ಮತ್ತು ಎಲ್ಲರಲ್ಲಿಯೂ ಉತ್ತಮ ಸಾಮರ್ಥ್ಯವನ್ನು ಹೊರಹಾಕುವುದನ್ನು ಎಲ್ಲಾ ಪಕ್ಷಗಳು ಖಚಿತಪಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ. ಭಾರತವು ತನ್ನ G20 ಅಧ್ಯಕ್ಷತೆಯಲ್ಲಿ ನೀಡಿದ AI ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಆಡಳಿತಕ್ಕೆ ನೀಡಿದ ಗಮನವನ್ನು ಒತ್ತಿಹೇಳಿದ್ದಾರೆ. ಭವಿಷ್ಯದಲ್ಲಿ AI ಪಾರದರ್ಶಕ, ನ್ಯಾಯೋಚಿತ, ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: PM Modi Video: ಇಟಲಿಯ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಅಪ್ಪಿಕೊಂಡ ಪ್ರಧಾನಿ ಮೋದಿ
ನರೇಂದ್ರ ಮೋದಿ ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆ ಸೇರಿದಂತೆ ವಿಶ್ವದಾದ್ಯಂತ ನಡೆಯುತ್ತಿರುವ ಚುನಾವಣೆಗಳ ಕುರಿತು ಮಾತನಾಡಿದರು. “ಇಡೀ ಚುನಾವಣಾ ಪ್ರಕ್ರಿಯೆಯನ್ನು ತಂತ್ರಜ್ಞಾನದ ಸರ್ವತ್ರ ಬಳಕೆಯ ಮೂಲಕ ನ್ಯಾಯಸಮ್ಮತ ಮತ್ತು ಪಾರದರ್ಶಕಗೊಳಿಸಲಾಯಿತು. ಇಷ್ಟು ದೊಡ್ಡ ಚುನಾವಣೆಯ ಫಲಿತಾಂಶಗಳನ್ನು ಕೆಲವೇ ಗಂಟೆಗಳಲ್ಲಿ ಘೋಷಿಸಲಾಯಿತು. ಇದು ವಿಶ್ವದ ಮತ್ತು ಮನುಕುಲದ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾಗಿದೆ. ಭಾರತದ ಜನರು ಸತತ ಮೂರನೇ ಬಾರಿಗೆ ಅವರಿಗೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿರುವುದು ನನ್ನ ಅದೃಷ್ಟ ಎಂದು ಅವರು ಹೇಳಿದ್ದಾರೆ.
Had a very productive meeting with President Volodymyr Zelenskyy. India is eager to further cement bilateral relations with Ukraine. Regarding the ongoing hostilities, reiterated that India believes in a human-centric approach and believes that the way to peace is through… pic.twitter.com/XOKA0AHYGs
— Narendra Modi (@narendramodi) June 14, 2024
ಪ್ರಧಾನಿ ಮೋದಿ ಇಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ 3 ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಇಟಲಿ ಭೇಟಿಯು ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ಅಂತಾರಾಷ್ಟ್ರೀಯ ಪ್ರವಾಸವಾಗಿದೆ. G7 ಶೃಂಗಸಭೆ ಇಟಲಿಯಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಯಲ್ಲಿ ನಡೆದ G7 ಔಟ್‌ರೀಚ್ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಿದ್ದಾರೆ. ಈ ವೇಳೆ ಅಪ್ಪಿಕೊಂಡು ಮಾತನಾಡಿಸಿದ್ದಾರೆ. ಇಟಾಲಿಯನ್ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ವೀಲ್ಚೇರ್ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಶೃಂಗಸಭೆಗೆ ಕರೆದೊಯ್ಯಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 pm, Fri, 14 June 24